ಪುದಿನಾ ಕೃಷಿಯನ್ನು ಯಾವಾಗ ಮಾಡಬೇಕು ?

ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ಸೌ. ರಾಘವಿ ಕೊನೆಕರ

‘ಫೆಬ್ರುವರಿಯಿಂದ ಏಪ್ರಿಲ್ ಇದು ಪುದಿನಾ ಕೃಷಿಗಾಗಿ ಒಳ್ಳೆಯ ಕಾಲಾವಧಿಯಾಗಿದೆ. ಹಾಗೆಯೇ ಮುಂದೆ ಮಳೆಗಾಲದಲ್ಲೂ ಇದರ ಕೃಷಿ ಮಾಡಬಹುದು. ಬೀಜ ಮಾರಾಟ ಮಾಡುವ ಅಂಗಡಿಯಲ್ಲಿ ಪುದಿನಾ ಬೀಜಗಳು ಸಿಗುತ್ತವೆ ; ಅದರೆ ಮನೆಯಲ್ಲಿ ಕೃಷಿ ಮಾಡುವುದಾದರೆ ಇದರ ಕಡ್ಡಿಯಿಂದ ಕೃಷಿ ಮಾಡುವುದು ಹೆಚ್ಚು ಸುಲಭವಾಗಿದೆ. ಅದರ ಖರ್ಚು ಕೂಡ ಕಡಿಮೆ ಬರುತ್ತದೆ.

‘ಇದರ ಕೃಷಿಯನ್ನು ಹೇಗೆ ಮಾಡುವುದು ?’, ಇದರ ಬಗ್ಗೆಯ ವಿವರವಾದ ಲೇಖನ ಮತ್ತು ಸಾಕ್ಷ್ಯಚಿತ್ರವು ಸನಾತನದ ಜಾಲತಾಣದಲ್ಲಿ ಉಪಲಬ್ದವಾಗಿದೆ. ಅದರ ಸಂಪರ್ಕ ಕೊಂಡಿಯನ್ನು (ಲಿಂಕ್) ಕೆಳಗೆ ಕೊಡಲಾಗಿದೆ. ಪುದಿನಾ ಕೃಷಿಯು ಸುಲಭವಾಗಿರುವುದರಿಂದ ಮನೆಯ ಸಣ್ಣ ಮಕ್ಕಳಿಂದ ಅದನ್ನು ಮಾಡಿಸಿಕೊಂಡರೆ ಅವರಿಗೂ ಕೃಷಿ ಬಗ್ಗೆ ಅಭಿರುಚಿ ಬೆಳೆಯಬಹುದು. ಬೇಸಿಗೆಯಲ್ಲಿ ತಂಪನ್ನು ನೀಡುವ ಪುದಿನಾ ಮನೆಯಲ್ಲೇ ಸಿಕ್ಕಿದರೆ, ಅದರ ತಾಜಾ ಎಲೆಗಳನ್ನು ಅಡಿಗೆಯಲ್ಲಿ ಮತ್ತು ಅನೇಕ ಮನೆಯಲ್ಲಿ ತಯಾರಿಸುವ ಜೌಷಧಿಗಳಲ್ಲಿ ಉಪಯೋಗಿಸಬಹುದು. ಆದುದರಿಂದ ಕುಂಡದಲ್ಲಿ ಪುದಿನಾ ಕೃಷಿಯನ್ನು ಅವಶ್ಯವಾಗಿ ಮಾಡಬೇಕು.’

– ಸೌ. ರಾಘವೀ ಮಯುರೇಶ ಕೋನೇಕರ, ಢವಳೀ, ಫೊಂಡಾ, ಗೋವಾ. (೧೦.೦೧.೨೦೨೨)

ಪುದಿನಾ ಕೃಷಿಯನ್ನು ತಿಳಿದುಕೊಳ್ಳುವುದಕ್ಕಾಗಿ ಲಿಂಕ್ : www.sanatan.org/kannada/94604.html