ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದಲಿತರು ಮತ್ತು ಆದಿವಾಸಿಗಳು ! – ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಇವರ ದಾವೆ

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ

ಭಾಗ್ಯನಗರ (ತೆಲಂಗಾಣ) – ಸಮಾಜದಲ್ಲಿನ ಯಾವುದಾದರೊಂದು ಅವಮಾನಗೊಂಡಿರುವ ಬಗ್ಗೆ ಸಹಾನುಭೂತಿ ಇಲ್ಲದೆ ಇರುವುದರಿಂದ ಈ ಭೇದ ಭಾವ ಹೆಚ್ಚುತ್ತಿದೆ, ಆದ್ದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ. ಪ್ರಾಧ್ಯಾಪಕ ಸುಖದೇವ ಥೋರಾತ್ ಇವರು, ‘ಆತ್ಮಹತ್ಯೆಯಿಂದ ಸಾವನ್ನಪ್ಪಿರುವ ಹೆಚ್ಚಿನ ವಿದ್ಯಾರ್ಥಿಗಳು ದಲಿತರು ಮತ್ತು ಆದಿವಾಸಿಗಳಾಗಿದ್ದಾರೆ, ಎಂದು ನಮೂದಿಸಿದ್ದಾರೆ.’ ಎಂದು ಭಾರತದ ಮುಖ್ಯನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ದಾವೆ ಮಾಡಿದ್ದಾರೆ. ಅವರು ಇಲ್ಲಿಯ ‘ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ ಯೂನಿವರ್ಸಿಟಿ ಆಫ್ ಲಾ’ ದ ೧೯ ನೇ ವಾರ್ಷಿಕ ಪದವಿ ದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಮುಖ್ಯನ್ಯಾಯಮೂರ್ತಿ ಚಂದ್ರಚೂಡ ಇವರು ಮಾತು ಮುಂದುವರಿಸಿ,

೧. ನಾವು ಕಳೆದ ೭೫ ವರ್ಷಗಳಲ್ಲಿ ಪ್ರತಿಷ್ಠಿತ ಸಂಸ್ಥೆ ನಿರ್ಮಾಣ ಮಾಡುವಲ್ಲಿ ಲಕ್ಷ ಕೇಂದ್ರೀಕರಿಸಿದ್ದೇವೆ; ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ಸಮಾಜದ ಬಗ್ಗೆ ಸಹಾನುಭೂತಿ ತೋರಿಸುವ ಸಂಸ್ಥೆಯ ನಿರ್ಮಾಣದ ಅವಶ್ಯಕತೆ ಇದೆ. ಸಹಾನುಭೂತಿಯ ಅಭಾವದ ಸೂತ್ರ ನೇರ ಭೇದ ಭಾವ ಮಾಡುವ ಪ್ರವೃತ್ತಿಯ ಜೊತೆಗೆ ಸಂಬಂಧಪಟ್ಟಿದೆ.

೨. ನ್ಯಾಯಾಧೀಶರು ಎಂದಿಗೂ ಸಾಮಾಜಿಕ ವಾಸ್ತವದಿಂದ ದೂರ ಹೋಗಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿನ ಸಂವಾದ ಇದು ಜಗತ್ತಿನಾದ್ಯಂತ ಒಂದೇ ರೀತಿ ಇದೆ. ಅಮೇರಿಕಾದಲ್ಲಿ ಕೃಷ್ಣವರ್ಣದ ಜಾರ್ಜ್ ಫ್ಲೈಡ್ ಇವರ ಹತ್ಯೆಯ ನಂತರ ಯಾವಾಗ ‘ಬ್ಲಾಕ್ ಲಿವ್ ಮ್ಯಾಟರ್ ‘(ಕೃಷ್ಣ ವರ್ಣಿಯರ ಜೀವನಕ್ಕೂ ಕೂಡ ಮಹತ್ವ ಇದೆ !) ಈ ಆಂದೋಲನ ರೂಪ ತಾಳಿತು, ಆಗ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯದ ೯ ನ್ಯಾಯಾಧೀಶರು ಕೃಷ್ಣವರ್ಣಿಯರ ಜೀವನದ ಅವನತಿ ಮತ್ತು ಪತನ ಆಗುತ್ತಿರುವುದರಿಂದ ನ್ಯಾಯವ್ಯವಸ್ಥೆಗೆ ಒಂದು ಸಂಯುಕ್ತ ಮನವಿ ಪ್ರಸ್ತುತಪಡಿಸಿತ್ತು. ಅದರಂತೆ ಭಾರತದಲ್ಲಿನ ನ್ಯಾಯಾಧೀಶರು ನ್ಯಾಯಾಲಯದ ಒಳಗೆ ಮತ್ತು ನ್ಯಾಯಾಲಯದ ಹೊರಗೆ ಸಮಾಜದ ಜೊತೆ ಸಂವಾದ ನಡೆಸಬೇಕು ಎಂದು ಹೇಳಿದರು.