ರಾಷ್ಟ್ರಾಧ್ಯಕ್ಷ ಆದಲ್ಲಿ ಶತ್ರು ರಾಷ್ಟ್ರಗಳಿಗೆ ನೀಡುತ್ತಿರುವ ಸಹಾಯ ನಿಲ್ಲಿಸುವೆ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿಯ ಸ್ಪರ್ಧೆಯಲ್ಲಿ ಭಾರತೀಯ ಮೂಲದ ನಿಕ್ಕಿ ಹೇಲಿ ಘೋಷಣೆ !

ನಿಕ್ಕಿ ಹೇಲಿ

ವಾಷಿಂಗ್ಟನ್ (ಅಮೆರಿಕ) – ನಾನು ರಾಷ್ಟ್ರಾಧ್ಯಕ್ಷವಾದರೆ ಅಮೇರಿಕಾದ ಶತ್ರುಗಳಿಗೆ ನೀಡುವ ಆರ್ಥಿಕ ಸಹಾಯ ಪೂರ್ಣವಾಗಿ ನಿಲ್ಲಿಸುವೆ, ಎಂದು ರಿಪಬ್ಲಿಕ್ ಪಕ್ಷದಿಂದ ರಾಷ್ಟ್ರಾಧ್ಯಕ್ಷದ ಅಭ್ಯರ್ಥಿಗಾಗಿ ತನ್ನ ಹೆಸರಿನ ಘೋಷಣೆ ಮಾಡುವ ಭಾರತೀಯ ಮೂಲದ ನಾಯಕಿ ನಿಕ್ಕಿ ಹೇಲಿ ಇವರು ಹೇಳಿದ್ದಾರೆ.

೧. ಹೇಲಿ ಇವರು, ಬಾಯಡೆನ್ ಸರಕಾರದಿಂದ ಪಾಕಿಸ್ತಾನಕ್ಕೆ ಸಹಾಯ ನೀಡುವುದು ಮುಂದುವರೆಸಿದ್ದಾರೆ. ಅಮೇರಿಕಾದ ತೆರಿಗೆದಾರರ ಹಣ ಕಮ್ಯುನಿಸ್ಟ್ ಚೀನಾದ ಹಾಸ್ಯಸ್ಪದ ”ಗ್ಲೋಬಲ್ ವಾರ್ನಿಂಗ್’ ಕಾರ್ಯಕ್ರಮದ ಹೆಸರಿನಲ್ಲಿ ನೀಡುತ್ತಿದ್ದಾರೆ,’ಎಂದು ಅವರು ದಾವೆ ಕೂಡ ಮಾಡಿದರು.

೨. ಹೇಲಿ ಇವರು ‘ನ್ಯೂಯಾರ್ಕ್ ಪೋಸ್ಟ್ ‘ ದೈನಿಕದಲ್ಲಿ ಬರೆದಿರುವ ಲೇಖನದಲ್ಲಿ, ಅಮೇರಿಕಾ ಪ್ರತಿ ವರ್ಷ ೪೬ ಆಬ್ಜ ಡಾಲರ್ ರೂಪಾಯಿ ಚೀನಾ, ಪಾಕಿಸ್ತಾನ ಮತ್ತು ಇರಾಕ್ ಇಂತಹ ದೇಶಗಳಿಗಾಗಿ ಖರ್ಚು ಮಾಡುತ್ತಿದೆ. ಅಮೇರಿಕಾ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರ ಹತ್ತಿರದ ಸ್ನೇಹಿತರಾಗಿರುವ ಬೆಲಾರುಸಗೆ ಸಹಾಯ ಮಾಡುತ್ತಿದೆ. ನಾವು ಕಮ್ಯುನಿಸ್ಟ್ ಕ್ಯೂಬಾ ದೇಶಕ್ಕೂ ಕೂಡ ಸಹಾಯ ಕಹಿಸುತ್ತೇವೆ. ಇಲ್ಲಿಯ ಸರಕಾರ ಭಯೋತ್ಪಾದಕರನ್ನು ಪ್ರಾಯೋಜಿಸುತ್ತದೆ. ಪಾಕಿಸ್ತಾನ ಮತ್ತು ಇರಾಕ ಈ ದೇಶಗಳಂತೂ ಅಮೇರಿಕಾವನ್ನು ವಿರೋಧಿಸುತ್ತವೆ. ಅಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದೆ.

೩. ಹೇಲಿ ಇವರು ಅಮೇರಿಕಾದಲ್ಲಿನ ಹಿಂದಿನ ಸರಕಾರಗಳನ್ನು ಮತ್ತು ರಾಷ್ಟ್ರಾಧ್ಯಕ್ಷರನ್ನು ಟಿಕಿಸಿದರು. ಅವರು, ಈ ವಿಷಯ ಕೇವಲ ಬಾಯಡೆನ್ ಇವರಿಗಷ್ಟೇ ಅಲ್ಲದೇ ದೇಶದ ಎರಡೂ (ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್) ಪಕ್ಷಗಳಿಂದ ಅಮೆರಿಕಾದ ವಿರೋಧದಲ್ಲಿರುವ ದೇಶಗಳಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ನಮ್ಮ ವಿದೇಶ ನೀತಿ ಭೂತಕಾಲದಲ್ಲಿ ಸಿಲುಕಿದೆ. ಅಮೇರಿಕಾದಿಂದ ಸಹಾಯ ಪಡೆಯುವವರ ವರ್ತನೆಯ ಕಡೆಗೆ ದುರ್ಲಕ್ಷ ಮಾಡುತ್ತಿದ್ದಾರೆ ಎಂದು ಹೇಳಿದರು.