ಸಿಖ್ಕರ ಬಗ್ಗೆ ಪ್ರೀತಿ ಇರುವ ಮುಸಲ್ಮಾನರು ಅಮೃತಸರಕ್ಕೆ ತೊಲಗಿರಿ !

ಪಾಕಿಸ್ತಾನದಲ್ಲಿ ವಿಷ ಕಕ್ಕಿದ ಮೌಲ್ವಿ !

(ಮೌಲಾನ ಎಂದರೆ ಇಸ್ಲಾಂನ ಅಭ್ಯಾಸಕ)

ಇಸ್ಲಾಮಾಬಾದ – ಯಾರಿಗೆ ಸಿಖ್ಕರ ಬಗ್ಗೆ ಪ್ರೀತಿ ಇದೆ, ಅವರು ಅಮೃತಸರಕ್ಕೆ ತೊಲಗಬೇಕು, ಎಂದು ಪಾಕಿಸ್ತಾನದ ಮೌಲಾನ ಮುಸಲ್ಮಾನರಿಗೆ ಉದ್ದೇಶಿಸಿ ಮಾತನಾಡುವಾಗ ವಿಷಕಾರಿದ. ‘ಪಾಕಿಸ್ತಾನ್ ಅನ್ ಟೋಲ್ಡ್ (ಅಕಥಿತ)’ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ಕುರಿತಾದ ಒಂದು ವಿಡಿಯೋ ಪ್ರಸಾರ ಮಾಡಿದೆ. ಅದರಲ್ಲಿ ಆತ ‘ಪಾಕಿಸ್ತಾನ ಇದೇನು ಸಿಖ್ ವಿದ್ಯಾಪೀಠ ಸಿದ್ಧಗೊಳಿಸುವುದಕ್ಕಾಗಿ ನಿರ್ಮಾಣವಾಗಿಲ್ಲ’, ಎಂದು ಕೂಡ ಹೇಳಿದ.

‘ಇಸ್ಲಾಂ ಸ್ವೀಕರಿಸದಿರುವ ಗುರುನಾನಕ ಇವರು ಒಳ್ಳೆಯವರಾಗಿರಲಿಲ್ಲ !’ (ಅಂತೆ)

ಇನ್ನೊಂದು ವಿಡಿಯೋದಲ್ಲಿ ಇದೇ ಮೌಲ್ವಿ, ಕೆಲವು ಜನರು ಗುರುನಾನಕ ಬಾಬಾ ಇವರ ಬಾಬಾ ಫರೀದ್ ಅಲಿಯಾಸ್ ಶೇಖ ಫರೀದ್ ಇವರ ಬಗ್ಗೆ ತುಂಬ ಪ್ರೀತಿ ಇತ್ತು ಎಂದು ಹೇಳುತ್ತಾರೆ. ನನ್ನ ಅಭಿಪ್ರಾಯದಂತೆ, ‘ಅಷ್ಟೇ ಪ್ರೀತಿ ಇದ್ದರೆ, ಅಲ್ಲಾನ ‘ಕಲ್ಮಾ’ ಏಕೆ ಫಠೀಸಲಿಲ್ಲ ? ಇಸ್ಲಾಂ ಸ್ವೀಕರಿಸದಿರುವ ಗುರುನಾನಕ ದೇವ ಇವರು ಒಳ್ಳೆಯವರಾಗಿರಲಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದರ ಬಗ್ಗೆ ಖಲಿಸ್ತಾನಿಗಳು ಮೌನ ಏಕೆ ?