ಬ್ರಿಸ್ಬೇನ (ಆಸ್ಟ್ರೇಲಿಯಾ) – ಖಲಿಸ್ತಾನವಾದಿಗಳಿಂದ ಆಸ್ಟ್ರೇಲಿಯಾದಲ್ಲಿ ದೇವಸ್ಥಾನದ ಬಳಿಕ ಈಗ ಬ್ರಿಸ್ಬೇನನಲ್ಲಿರುವ ಠಾರಿಂಗಾ ಉಪನಗರದ ಸ್ವಾನ ರೋಡನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ಬಾವುಟ ಹಾರಿಸಿದ್ದಾರೆ. ಖಲಿಸ್ತಾನವಾದಿಗಳು ಈ ರಾಯಭಾರಿ ಕಚೇರಿಯ ಮೇಲೆ ಆಕ್ರಮಣ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಕೆಲವು ದಿನಗಳ ಮೊದಲು ಖಲಿಸ್ತಾನವಾದಿಗಳು ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿರುವ ದೇವಸ್ಥಾನಗಳನ್ನು ಧ್ವಂಸ ಮಾಡಿರುವ ಘಟನೆಗಳು ನಡೆದಿದ್ದವು.
ಬ್ರಿಸ್ಬೇನನಲ್ಲಿರುವ ಭಾರತದ ರಾಯಭಾರಿ ಅಧಿಕಾರಿ ಅರ್ಚನಾ ಸಿಂಹರಿಗೆ ಫೆಬ್ರವರಿ 22 ರಂದು ಕಚೇರಿಯಲ್ಲಿ ಖಲಿಸ್ತಾನಿ ಬಾವುಟ ಹಾರಿಸಿರುವುದು ಕಂಡು ಬಂದಿತು. ತದನಂತರ ಅವರು ತಕ್ಷಣವೇ ಕ್ವೀನ್ಸಲ್ಯಾಂಡ ಪೊಲೀಸರಿಗೆ ಇದರ ಮಾಹಿತಿ ನೀಡಿದರು. ಪೊಲೀಸರು ಬಂದು ಬಾವುಟವನ್ನು ಜಪ್ತಿ ಮಾಡಿದರು. ಈ ಘಟನೆಯ ಕುರಿತು ಅರ್ಚನಾ ಸಿಂಹ ಇವರು, ”ಖಲಿಸ್ತಾನ ಉದ್ದೇಶಕ್ಕಾಗಿ ಹಿಂದೂಗಳ ದೇವಸ್ಥಾನಗಳನ್ನು ಗುರಿ ಮಾಡುತ್ತಿರುವ ಕೃತಿಯಿಂದ ನಾನು ಎಷ್ಟು ನೊಂದಿದ್ದೇನೆ ಎಂದು ನಾನು ನಿಮಗೆ ಹೇಳಲು ಸಾಧ್ಯವಿಲ್ಲ.’’ ಎಂದು ಹೇಳಿದ್ದಾರೆ.
विदेश मंत्री एस. जयशंकर (#SJaishankar) की ऑस्ट्रेलिया यात्रा के कुछ दिनों बाद, हिंदू मंदिरों में तोड़फोड़ की गई और ब्रिसबेन में भारतीय वाणिज्य दूतावास के पास खालिस्तानी झंडा (#Khalistani) दिखा। pic.twitter.com/dw2JdWtaeB
— IANS Hindi (@IANSKhabar) February 24, 2023
ಸಂಪಾದಕೀಯ ನಿಲುವುಇದರಿಂದ ಜಗತ್ತಿನಾದ್ಯಂತ ಭಾರತದ ಮಾನಹಾನಿಯಾಗುತ್ತಿದೆ, ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಖಲಿಸ್ತಾನಿ ಪ್ರವೃತ್ತಿಯನ್ನು ನಷ್ಟಗೊಳಿಸಲು ಕಠಿಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು ! |