ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಜೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ

ಅರ್ಜಿದಾರರಿಗೆ ಸರಕಾರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸುವಂತೆ ಆದೇಶ

ನವದೆಹಲಿ – ನೌಕರಿ ಮಾಡುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ರಜೆ ನೀಡುವಂತೆ ಕೋರಿ ಸಲ್ಲಿಸಿದ್ದ ದೂರನ್ನು ಸರ್ವೋಚ್ಚ ನ್ಯಾಯಾಲಯವು ಫೆಬ್ರವರಿ 24 ರಂದು ತಿರಸ್ಕರಿಸಿತು. ದೆಹಲಿಯಲ್ಲಿ ವಾಸಿಸುವ ಶೈಲೇಂದ್ರ ಮಣಿ ತ್ರಿಪಾಠಿಯವರು ಈ ಅರ್ಜಿಯನ್ನು ದಾಖಲಿಸಿದ್ದರು. ಆಲಿಕೆಯ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ಐ. ಚಂದ್ರಚೂಡ್ ಇವರು, ಈ ಪ್ರಕರಣವು ಸರಕಾರಿ ಧೋರಣೆಗಳಿಗೆ ಸಂಬಂಧಿಸಿದೆ. ಆದ್ದರಿಂದ ಅರ್ಜಿದಾರರು ಈ ಪ್ರಕರಣ ಸರಕಾರಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಂಪರ್ಕಿಸಿ ಎಂದು ಹೇಳಿದೆ.

ತ್ರಿಪಾಠಿಯವರು ದೂರಿನಲ್ಲಿ, ಮುಟ್ಟಿನ ಸಮಯದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಅನೇಕ ಶಾರೀರಿಕ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಅವರಿಗೆ ರಜೆ ನೀಡುವಂತೆ ನ್ಯಾಯಾಲಯ ಆದೇಶಿಸಬೇಕು. ಎಂದು ಕೋರಿದ್ದರು.

ಅನೇಕ ದೇಶಗಳಲ್ಲಿ ರಜೆ ನೀಡಲಾಗುತ್ತದೆ !

ಈ ರೀತಿಯ ರಜೆಯನ್ನು ಚೀನಾ, ಜಪಾನ, ಇಂಗ್ಲೆಂಡ್, ವೇಲ್ಸ್, ತೈವಾನ, ಇಂಡೋನೇಶಿಯಾ, ದಕ್ಷಿಣ ಕೊರಿಯಾ, ಸ್ಪೇನ ಮತ್ತು ಜಾಂಬಿಯಾ ಈ ದೇಶಗಳಲ್ಲಿ ನೀಡುತ್ತಿರುವ ಸಂದರ್ಭವನ್ನು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.