ಭಗವಾನ ಬ್ರಹ್ಮದೇವರು, ವಿಷ್ಣು ಮತ್ತು ಶಿವ ಇವರು ನಿರ್ಮಿಸಿದ ‘ಅಕ್ಷಯವಟ’ ವೃಕ್ಷವನ್ನು ಔರಂಗಜೇಬನಿಗೆ ನಾಶ ಮಾಡಲು ಬರದಿರುವುದು !

ಪ್ರಯಾಗರಾಜ ಇಲ್ಲಿರುವ ಅಕ್ಷಯವಟ

‘ಭಗವಾನ ಬ್ರಹ್ಮದೇವನು ಪೃಥ್ವಿಯನ್ನು ಕಾಪಾಡುವುದಕ್ಕಾಗಿ ಪ್ರಯಾಗರಾಜ (ಉತ್ತರಪ್ರದೇಶ) ಇಲ್ಲಿ ಒಂದು ದೊಡ್ಡ ಯಜ್ಞವನ್ನು ಮಾಡಿದ್ದನು. ಇದರ ಪೌರೋಹಿತ್ಯವನ್ನು ಸ್ವತಃ ಬ್ರಹ್ಮದೇವನೇ ಮಾಡಿದ್ದನು. ಭಗವಾನ ವಿಷ್ಣು ಯಜಮಾನ ಮತ್ತು ಭಗವಾನ ಶಿವನು ಆ ಯಜ್ಞದ ದೇವತೆಯಾಗಿದ್ದರು. ಕೊನೆಗೆ ಈ ತ್ರಿದೇವರು ದೈವೀ ಶಕ್ತಿಯಿಂದ ಪೃಥ್ವಿ ಮೇಲಿನ ಪಾಪದ ಭಾರವನ್ನು ಕಡಿಮೆ ಮಾಡುವುದಕ್ಕಾಗಿ ಒಂದು ವೃಕ್ಷವನ್ನು ನಿರ್ಮಿಸಿದರು. ಅದು ಒಂದು ಆಲದ ಮರವಾಗಿತ್ತು, ಅದಕ್ಕೆ ಇಂದು ‘ಅಕ್ಷಯವಟ’ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಈ ವೃಕ್ಷವು ಇನ್ನೂ ಆಸ್ತಿತ್ವದಲ್ಲಿದೆ. ಔರಂಗಜೇಬನು ಈ ವೃಕ್ಷವನ್ನು ಹಾರೆಯಿಂದ ಅಗೆದನು, ಬೆಂಕಿ ಹಚ್ಚಿ ಸುಟ್ಟನು ಮತ್ತು ಅದರ ಬೇರಿನಲ್ಲಿ ಪಾದರಸವನ್ನು ಸುರಿದನು; ಆದರೆ ದೈವೀ ವರದಾನ ಪ್ರಾಪ್ತವಾಗಿರುವ ಅಕ್ಷಯವಟ ಇಂದಿಗೂ ಡೌಲಿನಿಂದ ನಿಂತಿದೆ. ಜೌರಂಗಜೇಬನು ಈ ವೃಕ್ಷವನ್ನು ಸುಡುವುದಕ್ಕಾಗಿ ಮಾಡಿದ ಪ್ರಯತ್ನಗಳ ಗುರುತುಗಳು ಇಂದಿಗೂ ಕಾಣುತ್ತದೆ.

– ಲೋಕೇಶ ಭಾರದ್ವಾಜ (ಸಾಭಾರ :‘ಕುಂಭ-ದರ್ಶನಂ’, ಫೆಬ್ರುವರಿ ೨೦೧೯)