ಗೋಮಾತೆಯ ದರ್ಶನದ ಮಹತ್ವ

ಗವಾಂ ದೃಷ್ಟ್ವಾ ನಮಸ್ಕೃತ್ಯ ಕುರ್ಯಾಚ್ಚೈವ ಪ್ರದಕ್ಷಿಣಮ್ |

ಪ್ರದಕ್ಷಿಣೀಕೃತಾ ತೇನ ಸಪ್ತದ್ವೀಪಾ ವಸುನ್ಧರಾ ||

– ಗೋಸಾವಿತ್ರೀಸ್ತೋತ್ರ, ಶ್ಲೋಕ ೧೩

ಅರ್ಥ :  ಗೋಮಾತೆಯ ದರ್ಶನ ಪಡೆದ ನಂತರ  ಅವಳಿಗೆ ನಮಸ್ಕಾರ ಮಾಡಬೇಕು ಹಾಗೂ ಪ್ರದಕ್ಷಿಣೆಯನ್ನು ಹಾಕಬೇಕು. ಅದರಿಂದ ಸಪ್ತದ್ವೀಪ (ಟಿಪ್ಪಣಿ)ವಿರುವ ಪೃಥ್ವಿ ಪ್ರದಕ್ಷಿಣೆಯ ಫಲವು ಸಿಗುತ್ತದೆ.

ಟಿಪ್ಪಣಿ : ಪೃಥ್ವಿಯು ಜಂಬೂ, ಕುಶ, ಪ್ಲಕ್ಷ, ಕ್ರೌಂಚ, ಶಾಲ್ಮಲಿ, ಶಾಕ ಮತ್ತು ಪುಷ್ಕರ ಈ ಏಳು ದ್ವೀಪಗಳಲ್ಲಿ ವಿಭಜಿಸಲ್ಪಟ್ಟಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ. (ಈಗಿನ ಪೃಥ್ವಿಯ ಖಂಡ – ಏಷಿಯಾ, ಆಫ್ರಿಕಾ, ಯುರೋಪ, ಅಮೇರಿಕ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ ಹಾಗೂ ಆರ್ಕ್ಟಿಕ್) (ಆಧಾರ – ಕಲ್ಯಾಣ ಮಾಸಪತ್ರಿಕೆ)

ಈ ಜ್ಞಾನದ ತಿಳಿವಳಿಕೆ ಇಲ್ಲದ ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಹಾಕುವ ಸ್ವಾತಂತ್ರ್ಯದಿಂದ ಈವರೆಗಿನ ಹಿಂದೂ ಆಡಳಿತಗಾರರು ಕೇವಲ ಜನ್ಮಹಿಂದೂಗಳಾಗಿದ್ದಾರೆ, ಕರ್ಮಹಿಂದೂಗಳಲ್ಲ ಅದರ ಫಲವನ್ನು ಅವರು ಭೋಗಿಸಬೇಕಾಗುವುದು. – ಸಂಪಾದಕರು