ರಾಜಸ್ಥಾನದಲ್ಲಿ ಭಾಜಪದ ಮಾಜಿ ಶಾಸಕನಿಗೆ ೨೦ ವರ್ಷಗಳ ಹಿಂದಿನ ಬಲಾತ್ಕಾರದ ಪ್ರಕರಣದಲ್ಲಿ ೧೦ ವರ್ಷದ ಜೈಲುವಾಸ

ನಾಗೌರ (ರಾಜಸ್ಥಾನ) – ಇಲ್ಲಿಯ ಜಿಲ್ಲಾ ನ್ಯಾಯಾಲಯವು ಭಾಜಪದ ಮಾಜಿ ಶಾಸಕ ಭಂವರಾಲಾಲ ರಾಜಪುರೋಹಿತ (ವಯಸ್ಸು ೮೬ ವರ್ಷ) ಇವರನ್ನು ೨೦ ವರ್ಷದ ಹಿಂದಿನ ಬಲಾತ್ಕಾರದ ಪ್ರಕರಣದಲ್ಲಿ ೧೦ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗೂ ಒಂದು ಲಕ್ಷ ರೂಪಾಯಿಯ ದಂಡ ಕೂಡ ವಿಧಿಸಿದೆ. ದಂಡದ ಹಣ ಬಲತ್ಕಾರದ ಸಂತ್ರಸ್ತೆಗೆ ನೀಡುವಂತೆ ಆದೇಶ ನೀಡಿದೆ. ಈ ಸಮಯದಲ್ಲಿ ರಾಜಪುರೋಹಿತ ವೀಲ್ ಚೇರ್ ಮೇಲೆ ಕುಳಿತು ನ್ಯಾಯಾಲಯದಲ್ಲಿ ಉಪಸ್ಥಿತರಾಗಿದ್ದರು. ನ್ಯಾಯಾಲಯ ತೀರ್ಪು ನೀಡಿದ ನಂತರ ಪೊಲೀಸರು ರಾಜಪುರೋಹಿತರನ್ನು ಬಂಧಿಸಿ ಅವರನ್ನು ಜೈಲಿಗೆ ಕಳುಹಿಸಿದರು.

೧. ಮನಾನಾ ಗ್ರಾಮದಲ್ಲಿ ವಾಸಿಸುವ ೨೨ ವರ್ಷದ ಮಹಿಳೆ ಏಪ್ರಿಲ್ ೨೯, ೨೦೦೨ ರಂದು ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಭಂವರಲಾಲ ರಾಜಪುರೋಹಿತ ಇವರ ಬಾವಿಯ ಹತ್ತಿರ ಹೋಗಿದ್ದಳು. ಆ ದಿನದಂದು ಭಂವರಲಾಲ ಇವರ ಪತ್ನಿ ಮನೆಯಲ್ಲಿ ಇರಲಿಲ್ಲ. ಭಂವರಲಾಲ ಇವರು ಆಕೆಯನ್ನು ತನ್ನ ಮನೆಗೆ ಕರೆದನು ಮತ್ತು ಆಕೆಯ ಮೇಲೆ ಬಲತ್ಕಾರ ಮಾಡಿದನು’, ಎಂದು ಸಂತ್ರಸ್ತೇ ಆರೋಪಿಸಿದ್ದಳು. ಅದರ ನಂತರ ಸಂತ್ರಸ್ತೇಯು ನ್ಯಾಯಾಲಯದಲ್ಲಿ ಈ ಪ್ರಕರಣದ ದೂರು ನೀಡಿದ್ದಳು. ಅದರಿಂದ ನ್ಯಾಯಾಲಯವು ಪೊಲೀಸರಲ್ಲಿ ದೂರು ನೊಂದಾಯಿಸುವಂತೆ ಆದೇಶ ನೀಡಿತ್ತು. ಅತ್ಯಾಚಾರ ಮಾಡಿದ ನಂತರ ಸಂತ್ರಸ್ತೇ ಗರ್ಭಿಣಿಯಾಗಿದ್ದಳು. ಅದರಿಂದ ಆಕೆಗೆ ಗರ್ಭಪಾತ ಮಾಡಬೇಕಾಯಿತು.

೨. ಈ ಪ್ರಕರಣದ ಒಂದುವರೆ ವರ್ಷದ ನಂತರ ಭಂವರಲಾಲ ಶಾಸಕರಾದರು. ಆದ್ದರಿಂದ ಪ್ರಕರಣದ ತನೀಖೆ ತಣ್ಣಗಾಯಿತು. ವಿರೋಧಿಗಳು ಈ ಪ್ರಕರಣವನ್ನು ಮುಂದುವರಿಸಿರುವುದರಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿತ್ತು.

ಸಂಪಾದಕರ ನಿಲುವು

ಒಂದು ಅಪರಾಧದ ತೀರ್ಪು ನೀಡಲು ೨೦ ವರ್ಷ ಬೇಕಾಗುವುದು, ಹಾಗಾದರೆ ಇದನ್ನು ನ್ಯಾಯ ಅನ್ನುವುದೇ ?