ಛತ್ತೀಸಗಡದಲ್ಲಿ ೨೫೦ ಜನರಿಂದ ಹಿಂದೂ ಧರ್ಮದಲ್ಲಿ ಮರುಪ್ರವೇಶ !

ಹಿಂದೂ ಧರ್ಮದಲ್ಲಿ ಪುನರ್ಪ್ರವೇಶ

ರಾಯಪುರ – ಜಶಪುರದಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದ ೨೫೦ ಜನರು ಹಿಂದೂ ಧರ್ಮದಲ್ಲಿ ಮರುಪ್ರವೇಶ ಮಾಡಿದ್ದಾರೆ. ‘ಅಖಿಲ ಭಾರತೀಯ ಘರವಾಪಸಿ’ ಚಳುವಳಿಯ ಪ್ರಮುಖರಾದ ಪ್ರಬಲ ಪ್ರತಾಪಸಿಂಹ ಜೂದೇವರವರು ಇದರ ನೇತೃತ್ವವನ್ನು ವಹಿಸಿದ್ದರು. ಮತಾಂತರ ಮಾಡಿಕೊಂಡ ೨೫೦ ಜನರು ೩೬ ಕುಟುಂಬದವರಾಗಿದ್ದಾರೆ. ಈ ಕಾರ್ಯಕ್ರಮವು ಚಿಪನೀಪಾಲಿಯಲ್ಲಿನ ಇಮಲೀಪಾರದಲ್ಲಿ ನಡೆದಿದೆ.

ಕಾರ್ಯಕ್ರಮದಲ್ಲಿ ಪ್ರಬಲ ಪ್ರತಾಪಸಿಂಹ ಜೂದೇವರವರು ‘ಘರವಾಪಸಿ’ (ಹಿಂದೂ ಧರ್ಮದಲ್ಲಿ ಪುನರ್ಪ್ರವೇಶ) ಮಾಡುವ ಜನರ ಕಾಲುಗಳನ್ನು ಗಂಗಾಜಲದಿಂದ ತೊಳೆದರು. ಈ ಸಮಯದಲ್ಲಿ ‘ಧರ್ಮ ಜಾಗರಣ ಸಮನ್ವಯ ವಿಭಾಗ’ ಹಾಗೂ ‘ಆರ್ಯ ಸಮಾಜ’ ಎಂಬ ಸಂಘಟನೆಗಳ ಉಪಸ್ಥಿತಿಯೂ ಇತ್ತು. ಅನಂತರ ವೇದಮಂತ್ರ ಪಠಣ ಮತ್ತು ಹವನ ಮಾಡಲಾಯಿತು. ಅನಂತರ ಹಿಂದೂ ಧರ್ಮದಲ್ಲಿ ಮರುಪ್ರವೇಶ ಮಾಡಿದವರು ಭವಿಷ್ಯದಲ್ಲಿ ನಾವು ಹಿಂದೂ ಧರ್ಮದಲ್ಲಿಯೇ ಇರುವೆವು’ ಎಂದು ಸಂಕಲ್ಪ ಮಾಡಿದರು.

ಛತ್ತೀಸಗಡದಲ್ಲಿನ ಕಾಂಗ್ರೆಸ್‌ ಸರಕಾರಿಂದ ಹಿಂದೂಗಳ ಮತಾಂತರದ ಕಡೆಗೆ ದುರ್ಲಕ್ಷ್ಯ ! – ಪ್ರಬಲ ಪ್ರತಾಪಸಿಂಹ ಜೂದೇವ

‘ಮತಾಂತರವು ರಾಷ್ಟ್ರೀಯ ಐಕ್ಯತೆಯ ವಿರುದ್ಧ ರಚಿಸಲ್ಪಟ್ಟ ಒಂದು ಷಡ್ಯಂತ್ರವಾಗಿದ್ದು ಇದರಿಂದ ದೇಶದ ಅಖಂಡತೆಗೆ ಅಪಾಯವಿದೆ. ಕ್ರೈಸ್ತ ಮಿಶನರಿಗಳು ಹಿಂದೂ ಧರ್ಮವನ್ನು ಮುಗಿಸುವ ಪ್ರಯತ್ನದಲ್ಲಿದ್ದಾರೆ. ಛತ್ತೀಸಗಡದಲ್ಲಿನ ಕಾಂಗ್ರೆಸ್‌ ಸರಕಾರ ಹಾಗೂ ಆಡಳಿತವು ಹಿಂದೂ ಧರ್ಮದ ಕಡೆಗೆ ದುರ್ಲಕ್ಷ್ಯ ಮಾಡುತ್ತಿದೆ, ಎಂದು ಪ್ರಬಲ ಪ್ರತಾಪಸಿಂಹ ಜೂದೇವರವರು ಆರೋಪಿಸಿದ್ದಾರೆ. (ಇಂತಹ ಹಿಂದೂದ್ವೇಷಿ ಕಾಂಗ್ರೆಸ್ಸನ್ನು ರಾಜಕೀಯದೃಷ್ಟಿಯಲ್ಲಿ ಮುಗಿಸಲು ಹಿಂದೂಗಳು ಕಟಿಬದ್ಧರಾಗಬೇಕು ! – ಸಂಪಾದಕರು)