ಉತ್ತರಖಂಡದಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಪ್ರಭಲ ಭೂಕಂಪ !

ರಾಷ್ಟ್ರೀಯ ಭೂವಿಜ್ಞಾನ ಸಂಶೋಧನ ಸಂಸ್ಥೆಯ ವಿಜ್ಞಾನಿಗಳಿಂದ ಎಚ್ಚರಿಕೆ !

ಎನ್.ಜಿ.ಆರ್.ಐ. ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎನ್. ಪೂರ್ಣಚಂದ್ರ ರಾವ

ನವ ದೆಹಲಿ – ಉತ್ತರಾಖಂಡದಲ್ಲಿ ಯಾವಾಗ ಬೇಕಾದರೂ ಪ್ರಭಲ ಭೂಕಂಪ ಸಂಭವಿವ ಸಾಧ್ಯತೆ ಎಂದು ರಾಷ್ಟ್ರೀಯ ಭೂ ವಿಜ್ಞಾನ ಸಂಶೋಧನಾ ಸಂಸ್ಥೆಯಿಂದ (ಎನ್.ಜಿ.ಆರ್.ಐ. ನಿಂದ) ವ್ಯಕ್ತಪಡಿಸಿದೆ. ಈ ಮಾಹಿತಿಯು ಉತ್ತರಖಂಡದಲ್ಲಿನ ಹಿಮಾಲಯದ ಕೆಳಭಾಗದಲ್ಲಿರುವ ಜೋಶಿ ಮಠದಲ್ಲಿನ ಮನೆ, ಅಂಗಡಿಗಳು, ಹೋಟೆಲ್ ಇವುಗಳಿಗೆ ದೊಡ್ಡ ದೊಡ್ಡ ಬಿರುಕು ಬಿಟ್ಟಿರುವ ಸಮಯದಲ್ಲಿ ಬೆಳಕಿಗೆ ಬಂದಿದೆ. ಆದ್ದರಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಬೇಕಾಗಿಯಿತು.

ಎನ್.ಜಿ.ಆರ್.ಐ. ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎನ್. ಪೂರ್ಣಚಂದ್ರ ರಾವ ಇವರು, ಪೃಥ್ವಿಯ ಪೃಷ್ಠ ಭಾಗದ ಕೆಳಗೆ ವಿವಿಧ ಸ್ಥರಗಳು ಇರುತ್ತವೆ, ಅಲ್ಲಿ ನಿರಂತರವಾಗಿ ಚಲನವಲನೆ ನಡೆಯುತ್ತಿರುತ್ತದೆ. ಭಾರತದಲ್ಲಿನ ಪೃಷ್ಠಭಾಗದ ಕೆಳಗಡೆ ಸ್ತರ ಪ್ರತಿ ವರ್ಷ ೫ ಸೆಂಟಿಮೀಟರ ಸರಿಯುತ್ತಿದೆ. ಇದರಿಂದ ಒತ್ತಡ ನಿರ್ಮಾಣವಾಗುತ್ತಿದ್ದು ದೊಡ್ಡ ಭೂಕಂಪವಾಗುವ ಸಾಧ್ಯತೆ ಇದೆ. ಹಿಮಾಚಲ, ಉತ್ತರಾಖಂಡ ಸಹಿತ ನೇಪಾಳದ ಪಶ್ಚಿಮ ಭಾಗದಲ್ಲಿ ಯಾವಾಗ ಬೇಕಾದರೂ ಭೂಕಂಪ ಆಗಬಹುದು. ಅದರ ಹಿನ್ನೆಲೆಯಲ್ಲಿ ನಾವು ಉತ್ತರಖಂಡದಲ್ಲಿ ೧೮ ಕೇಂದ್ರಗಳ ಸ್ಥಾಪಿಸಿದ್ದೇವೆ ಎಂದು ಹೇಳಿದರು.