‘ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತದ ಜೊತೆಗೆ ಒಳ್ಳೆಯ ಸಂಬಂಧ ಬಯಸುತ್ತಾರೆ !’ (ಅಂತೆ) – ಗೀತ ರಚನಕಾರರಾದ ಜಾವೇದ್ ಅಖ್ತರ್

ಭಾರತಕ್ಕೆ ಹಿಂತಿರುಗಿದ ನಂತರ ನೀಡಿದ ಹೇಳಿಕೆ !

ನವದೆಹಲಿ – ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತವನ್ನು ಹೊಗಳುತ್ತಾರೆ. ಅವರು ಭಾರತದ ಜೊತೆ ಒಳ್ಳೆಯ ಸಂಬಂಧ ಬಯಸುತ್ತಾರೆ. ನಾವು ಇಂತಹ ಪ್ರಪಂಚದ ಯೋಚನೆ ಮಾಡುತ್ತೇವೆ, ಅಲ್ಲಿ ವಿಭಜನೆ ನಡೆಯುವುದಿಲ್ಲ, ಎಂದು ಗೀತ ರಚನೆಕಾರರಾದ ಜಾವೇದ ಅಖ್ತರ್ ಇವರು ಹೇಳಿಕೆ ನೀಡಿದರು. ಅವರು ಪಾಕಿಸ್ತಾನದ ಲಾಹೋರ್ ಪ್ರವಾಸದಿಂದ ಹಿಂತಿರುಗಿದ್ದಾರೆ. ಫೆಬ್ರವರಿ ೧೭ ರಿಂದ ೧೯ ವರೆಗಿನ ಕಾಲಾವಧಿಯಲ್ಲಿ ‘ಫೈಜ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಮುಂಬಯಿ ಮೇಲಿನ ಭಯೋತ್ಪಾದಕರ ದಾಳಿಯ ಸೂತ್ರಧಾರ ಎಂದಿಗೂ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದು ಅವರು ನಾರ್ವೆ ಅಥವಾ ಈಜಿಪ್ತದಿಂದ ಬಂದಿರಲಿಲ್ಲ’, ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ಪಾಕಿಸ್ತಾನದ ಜನರ ಜೊತೆಗೆ ಭಾರತದಲ್ಲಿ ಕೂಡ ಶ್ಲಾಘನೆ ವ್ಯಕ್ತವಾಗುತ್ತಿದೆ.

ಭಾರತಕ್ಕೆ ಹಿಂತಿರುಗಿದ ನಂತರ ಅಖ್ತರ್ ಇವರು ವಾರ್ತಾ ವಾಹಿನಿ ಜೊತೆಗೆ ಮಾತನಾಡುವಾಗ,

೧. ಪಾಕಿಸ್ತಾನದ ಲಕ್ಷಾಂತರ ಜನರು ನಮ್ಮೊಂದಿಗೆ ಜೋಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ, ‘ಅವರನ್ನು ಹೇಗೆ ಜೋಡಿಸಬೇಕು’, ಇದರ ಬಗ್ಗೆ ನಾವು ಯೋಚನೆ ಮಾಡಬೇಕು.

೨. ‘ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಮಾತು ಮುಂದುವರಿಯಬೇಕು ಬೇಡವೋ ?’, ಈ ಪ್ರಶ್ನೆಗೆ ಉತ್ತರಿಸುವಾಗ, ”ಈ ಪ್ರಶ್ನೆಗೆ ಉತ್ತರ ನೀಡಲು ನಾನು ಸಮರ್ಥನಿಲ್ಲ. ಏನು ನಡೆಯುತ್ತಿದೆ ಮತ್ತು ಮುಂದೆ ಏನು ನಡೆಯಬೇಕು ! ಎಂಬುದು ಅಧಿಕಾರದಲ್ಲಿರುವವರು ಇದನ್ನು ಚೆನ್ನಾಗಿ ತಿಳಿದಿದ್ದಾರೆ. ಪಾಕಿಸ್ತಾನಿ ಸೈನ್ಯ, ಅಲ್ಲಿಯ ಜನರು ಮತ್ತು ಸರಕಾರ ಇವರ ವಿಚಾರಧಾರೆ ಒಂದೆ ರೀತಿ ಆಗಿಲ್ಲ. ಆದರೂ ದೇಶ ಆಳುವ ಜನರು ಇದರ ಹಿನ್ನೆಲೆಯೇ ಒಳ್ಳೆಯ ರೀತಿ ತಿಳಿದಿದ್ದಾರೆ. ಇದರ ಕುರಿತಾದ ನನ್ನ ಅಭ್ಯಾಸ ಕಡಿಮೆ ಇದೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿನ ರಾಜಕಾರಣಿ, ಸೈನ್ಯ, ಕಲಾವಿದರು, ಉದ್ಯಮಿಗಳು ಹಾಗೂ ಸಾಮಾನ್ಯ ಜನರು ಭಾರತವನ್ನು ದ್ವೇಷಿಸುತ್ತಾರೆ. ಅಲ್ಲಿಯ ಬೆರಳೆಣಿಕೆಯಷ್ಟು ಜನರು ಭಾರತದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿರಬಹುದು. ಆದ್ದರಿಂದ ಈ ರೀತಿಯ ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ !