ಮುಂಬಯಿ ಮೇಲೆ ದಾಳಿ ಮಾಡಿದವರು ನಿಮ್ಮ ದೇಶದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾರೆ !

ಲಾಹೋರ್ ನಲ್ಲೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಜಾವೇದ ಅಖ್ತರ್ !

ಭಾರತೀಯ ಲೇಖಕ, ಗೀತಗಾರ ಜಾವೇದ್ ಅಖ್ತರ್

ಲಾಹೋರ (ಪಾಕಿಸ್ತಾನ) – ನಾವು ಮುಂಬಯಿದವರಾಗಿದ್ದೇವೆ. ನಾವು, ನಮ್ಮ ನಗರದ ಮೇಲೆ ಹೇಗೆ ದಾಳಿ ನಡೆದಿದೆ ಎಂಬುದು ನಾವು ನೋಡಿದ್ದೇವೆ. ದಾಳಿ ನಡೆಸಿರುವ ಜನ ನಾರ್ವೆ ಅಥವಾ ಈಜಿಪ್ತ ದೇಶದಿಂದ ಬಂದಿರಲಿಲ್ಲ. ಆ ದಾಳಿ ಕೋರರು ನಿಮ್ಮ ದೇಶದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಈ ದೂರು ಒಬ್ಬ ಭಾರತೀಯ ನಾಗರೀಕನು ಮಾಡಿದ್ದಾನೆಂದು ನಿಮಗೆ ಕೆಡಕು ಅನಿಸಬಾರದು, ಎಂದು ಭಾರತೀಯ ಲೇಖಕ, ಗೀತಗಾರ ಜಾವೇದ್ ಅಖ್ತರ್ ಇವರು ಪಾಕಿಸ್ತಾನಕ್ಕೆ ಛೀಮಾರಿ ಹಾಕಿದರು. ಜಾವೇದ್ ಅಖ್ತರ್ ಅವರು ಲಾಹೋರದಲ್ಲಿ ಫೈಝ ಫೆಸ್ಟಿವಲ್ ನಲ್ಲಿ ಸಹಭಾಗಿಯಾಗಿರುವ ಸಮಯದಲ್ಲಿ ಮಾತನಾಡುತ್ತಿದ್ದರು. ಅವರ ಈ ಹೇಳಿಕೆಗೆ ಉಪಸ್ಥಿತರಿಂದ ಚಪ್ಪಾಳೆಯ ಮೂಲಕ ಸ್ವಾಗತಿಸಿದರು ಹಾಗೂ ಭಾರತವೂ ಕೂಡ ಜಾವೇದ್ ಅಖ್ತರ್ ಇವರನ್ನು ಶ್ಲಾಘಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪ್ರಸಾರಗೊಂಡಿದೆ.

ಪಾಕಿಸ್ತಾನದಲ್ಲಿ ಲತಾ ಮಂಗೇಶಕರ ಅವರ ಕಾರ್ಯಕ್ರಮ ಎಂದೂ ಆಯೋಜಿಸಿರಲಿಲ್ಲ !

ಜಾವೇದ್ ಅಖ್ತರ್ ಮಾತು ಮುಂದುವರೆಸಿ, ‘ನಾವು ಪಾಕಿಸ್ತಾನಿ ಗಾಯಕ ನುಸರತ್ ಫತೆಹ ಅಲಿ ಖಾನ್ ಮತ್ತು ಮೆಹಂದಿ ಹಸನ ಇವರ ಬಹಿರಂಗ ಕಾರ್ಯಕ್ರಮ ಆಯೋಜಿಸಿದ್ದೇವೆ, ಆದರೆ ನಿಮ್ಮ ದೇಶದಲ್ಲಿ ಮಾತ್ರ ಲತಾ ಮಂಗೇಶಕರ ಇವರ ಒಂದು ಕಾರ್ಯಕ್ರಮ ಕೂಡ ಆಯೋಜನೆ ಆಗಲಿಲ್ಲ.’ ಇದರ ಬಗ್ಗೆ ಹೇಳುವಾಗ ಚಪ್ಪಾಳೆಯ ಸುರಿಮಳೆಯಾಯಿತು.

ಸಂಪಾದಕೀಯ ನಿಲುವು

ಪಾಕಿಸ್ತಾನಕ್ಕೆ ಅವರ ದೇಶದಲ್ಲಿ ಹೋಗಿ ಈ ರೀತಿ ಛೀಮಾರಿ ಹಾಕಿದ ಜಾವೇದ್ ಅಖ್ತರ್ ಇವರಿಗೆ ಅಭಿನಂದನೆ ! ಇದರಿಂದ ಎಮ್ಮೆ ಚರ್ಮದಂತಹ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ; ಆದರೆ ಭಾರತದಲ್ಲಿನ ಒಬ್ಬ ತಥಾಕಥಿತ ಜಾತ್ಯತೀತ ಮುಸಲ್ಮಾನ ಪಾಕಿಸ್ತಾನದಲ್ಲಿ ಹೋಗಿ ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಾರೆ ಎಂದರೆ ಅದು ಶ್ಲಾಘನೀಯ ಎಂದೇ ಹೇಳಬೇಕು !