ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಷರತ್ತುಗಳನ್ನು ಪಾಲಿಸಲು ಪಾಕಿಸ್ತಾನದಿಂದ ಸಂಸತ್ತಿನಲ್ಲಿ ವಿಧೇಯಕ ಅನುಮೋದನೆ

ಇಸ್ಲಾಮಾಬಾದ (ಪಾಕಿಸ್ತಾನ) – ದಿವಾಳಿಯಾಗುವ ಹೊಸ್ತಿಲಿನಲ್ಲಿರುವ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸುನಿಧಿ ಸಂಸ್ಥೆಯ ಷರತ್ತುಗಳನ್ನು ಒಪ್ಪಿಕೊಳ್ಳಲು ಸಂಸತ್ತಿನಲ್ಲಿ ಒಂದು ವಿಧೇಯಕವನ್ನು ಅನುಮೋದಿಸಿದೆ. ಹಣಕಾಸು ನಿಧಿಯ ಷರತ್ತುಗಳನ್ನು ಪಾಲಿಸಿದರೆ, ಪಾಕಿಸ್ತಾನಕ್ಕೆ ಸುಮಾರು 9 ಸಾವಿರ ಕೋಟಿ ರೂಪಾಯಿಗಳ ಸಾಲ ದೊರೆಯಲಿದೆ. ಈ ಷರತ್ತುಗಳಲ್ಲಿ ಪಾಕಿಸ್ತಾನ ಸೈನ್ಯದ ಅನುದಾನದಲ್ಲಿ ಕಡಿತಗೊಳಿಸುವುದು, ತೆರಿಗೆ ಹೆಚ್ಚಿಸುವುದು, ಪೆಟ್ರೋಲ ಮತ್ತು ಡೀಸೆಲಗಳ ದರಗಳಲ್ಲಿ ಹೆಚ್ಚಳ ಮಾಡುವುದು ಮುಂತಾದವುಗಳು ಸೇರಿವೆ.