ಬಸ್ ಕಂಡಕ್ಟರ್ 1 ರೂಪಾಯಿ ಹಿಂತಿರುಗಿಸದಿದ್ದರಿಂದ ಪ್ರಯಾಣಿಕನಿಗೆ ೩ ಸಾವಿರ ರೂಪಾಯಿ ಪರಿಹಾರ !

ಬೆಂಗಳೂರು – ಇಲ್ಲಿಯ ಬಸ್ ಕಂಡಕ್ಟರ್ ಪ್ರಯಾಣಿಕನಿಗೆ ಟಿಕೆಟಿನ 1 ರೂಪಾಯಿ ಹಿಂತಿರುಗಿಸದಿದ್ದರಿಂದ ಪ್ರಯಾಣಿಕನು ಗ್ರಾಹಕ ನ್ಯಾಯಾಲಯದ ಬಳಿ ದೂರು ನೀಡಿದನು. ಇದರ ಪರಿಣಾಮ ಸ್ವರೂಪ ನ್ಯಾಯಾಲಯದಿಂದ ಪ್ರಯಾಣಿಕನಿಗೆ ೩ ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ೨೦೧೯ ರಲ್ಲಿ ರಮೇಶ ನಾಯಕ ಇವರು ಬಿ.ಎಂ.ಟಿ.ಸಿ. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರು ಶಾಂತಿನಗರದಿಂದ ಮೆಜೆಸ್ಟಿಕ್ ಬಸ್ ನಲ್ಲಿ ಅಗರವರೆಗೆ ಹೋಗಲು ಟಿಕೆಟ್ ಪಡೆದಿದ್ದರು. ಟಿಕೆಟಿನ ಹಣ ೨೯ ರೂಪಾಯಿಯಷ್ಟು ಇತ್ತು. ನಾಯಕ ಇವರು ಬಸ್ ಕಂಡಕ್ಟರ್ ಗೆ ೩೦ ರೂಪಾಯಿ ನೀಡಿದ್ದರು; ಆದರೆ ಒಂದು ರೂಪಾಯಿ ಬಸ್ ಕಂಡಕ್ಟರ್ ನಾಯಕ ಇವರಿಗೆ ಕೊಡಲಿಲ್ಲ. ಆದ್ದರಿಂದ ಅಸಮಾಧಾನಗೊಂಡ ನಾಯಕ ಇವರು ನೇರ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರು. ನಾಯಕ ಅವರು ಒಂದು ರೂಪಾಯಿಯ ಬದಲು ೧೫ ಸಾವಿರ ರೂಪಾಯಿ ಪರಿಹಾರ ಕೇಳಿದ್ದರು. ಅದರ ಕುರಿತು ನ್ಯಾಯಾಲಯದಿಂದ ನಾಯಕ ಅವರಿಗೆ ೨ ಸಾವಿರ ರೂಪಾಯಿ ಪರಿಹಾರ ನೀಡಲು ಬಿ.ಎಂ.ಟಿ.ಸಿ.ಗೆ ಆದೇಶ ನೀಡಿದೆ. ಹಾಗೂ ನ್ಯಾಯಾಂಗ ಪ್ರಕ್ರಿಯೆಗಾಗಿ ಖರ್ಚಾಗಿರುವ ೧ ಸಾವಿರ ರೂಪಾಯಿ ಕೂಡ ನೀಡಲು ಆದೇಶ ನೀಡಿದೆ.