ಜಾತ್ಯತೀತ ಸಂಸ್ಕೃತವನ್ನು ರಾಜ ಭಾಷೆ ಎಂದು ಘೋಷಿಸುವ ಕುರಿತು ಹೇಳಿಕೆ !
ನವ ದೆಹಲಿ – ನ್ಯಾಯವಾದಿ ಆದಾಗನಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶ ಆಗುವವರೆಗೆ ಸಂಸ್ಕೃತ ಭಾಷೆಯ ಬಗ್ಗೆ ನನಗೆ ಇರುವ ಸೆಳೆತ ಹೆಚ್ಚುತ್ತಾ ಹೋಯಿತು. ಈ ಸಂಸ್ಕೃತ ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವುದರಲ್ಲಿ ಯಾವುದೇ ಅಡಚಣೆ ಇಲ್ಲ; ಕಾರಣ ಶೇಕಡ ೯೫ ಭಾಷೆಯು ಯಾವುದೇ ಧರ್ಮದ ಜೊತೆ ಅಲ್ಲ, ಆದರೆ ದರ್ಶನ, ನೀತಿ, ವಿಜ್ಞಾನ, ಸಾಹಿತ್ಯ, ಶಿಲ್ಪಕಲೆ, ಖಗೋಲಶಾಸ್ತ್ರ ಮುಂತಾದರ ಜೊತೆ ಸಂಬಂಧ ಇರುತ್ತದೆ, ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಶರದ ಬೊಬಡೆ ಇವರು ಹೇಳಿದರು. ಅವರು ಒಂದು ಆಂಗ್ಲ ವಾರ್ತಾ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಅವರು ಮಾತು ಮುಂದುವರಿಸುತ್ತಾ, ಸಂಸ್ಕೃತವನ್ನು ಧರ್ಮಕ್ಕೆ ಜೋಡಿಸಿ ನೋಡುತ್ತಾರೆ; ಕಾರಣ ಎಲ್ಲಾ ಧರ್ಮ ಗ್ರಂಥ ಮತ್ತು ಪೂಜೆಯ ಶ್ಲೋಕಗಳು ಸಂಸ್ಕೃತದಲ್ಲಿ ಇದೆ. ಸಂಸ್ಕೃತದಲ್ಲಿ ಹೆಚ್ಚು ಕಡಿಮೆ ಶೇಕಡ ೮೦ ರಿಂದ ೯೦ ರಷ್ಟು ಸಾಹಿತ್ಯದ ಧರ್ಮ ಅಥವಾ ಈಶ್ವರನ ಜೊತೆಗೆ ಸಂಬಂಧವಿಲ್ಲ. ಆದ್ದರಿಂದ ಸಂಸ್ಕೃತವನ್ನು ರಾಜ ಭಾಷೆ ಎಂದು ಘೋಷಿಸಬೇಕು. ಅದನ್ನು ರಾಜಭಾಷೆ ಮಾಡುವುದಕ್ಕೆ ಧರ್ಮದ ಸಂಬಂಧವಿಲ್ಲ. ನಾನು ಕೇವಲ ಜಾತ್ಯತೀತ ಭಾಷೆಯನ್ನು ಸಾಮಾನ್ಯ ಜನರಿಗೆ ಉಪಯೋಗಿಸಲು ಸಲಹೆ ನೀಡುತ್ತಿದ್ದೇನೆ; ಕಾರಣ ಸಂಸ್ಕೃತಕ್ಕೆ ಇಂಡೋ ಯರೋಪಿಯನ್ ಭಾಷೆಯ ಜನನಿ ಎನ್ನುತ್ತಾರೆ ಎಂದು ಹೇಳಿದರು.
ಮಾಜಿ ನ್ಯಾಯಮೂರ್ತಿಯವರು ಮಾತು ಮುಂದುವರಿಯುತ್ತಾ,
೧. ಎಲ್ಲರಿಗೂ ಅರ್ಥವಾಗುವ ಹಿಂದಿಯ ಜೊತೆಗೆ ಸಾಮಾನ್ಯ ಭಾಷೆಯ ಅವಶ್ಯಕತೆ ಇದೆ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಅನೌಪಚಾರಿಕವಾಗಿ ಆಂಗ್ಲವು ಎರಡನೇ ಅಧಿಕೃತ ಭಾಷೆಯಾಗಿದೆ; ಆದರೆ ಭಾರತದಲ್ಲಿ ಕೇವಲ ಶೇಕಡ ೨ -೩ ರಷ್ಟು ಜನರು ಸಹಜವಾಗಿ ಮಾತನಾಡಬಹುದು, ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು.
೨. ವಿವಿಧ ರಾಜ್ಯಗಳಲ್ಲಿ ನ್ಯಾಯವಾದಿಗಳ ವಿವಿಧ ಸಂಘಟನೆಗಳು ಅವರ ಭಾಷೆಯಲ್ಲಿ ಕಾರ್ಯಕಲಾಪ ನಡೆಸುವಂತೆ ಒತ್ತಾಯ ಮಾಡುತ್ತಾರೆ. ವಿಶೇಷವಾಗಿ ಭಾರತದಲ್ಲಿನ ದಕ್ಷಿಣದ ರಾಜ್ಯಗಳು ಈಗಲೂ ಹಿಂದಿಯನ್ನು ಸ್ವೀಕರಿಸಿಲ್ಲ.
Ex CJI of India Sharad Bobde is a strong advocate of making Sanskrit an official language of India along with Hindi. He explains why he thinks its the right thing to dohttps://t.co/mIWqT4rjS5
— The Times Of India (@timesofindia) February 21, 2023
ಅಂಬೇಡ್ಕರ್ ಇವರ ಸಂಸ್ಕೃತವನ್ನು ರಾಜಭಾಷೆ ಮಾಡುವ ಪ್ರಸ್ತಾವಕ್ಕೆ ಎಂದು ಉತ್ತರ ಸಿಗಲಿಲ್ಲ ! – ಮಾಜಿ ನ್ಯಾಯಮೂರ್ತಿಸಂಸ್ಕೃತಕ್ಕೆ ಮೃತ ಭಾಷೆ ಎನ್ನುವ ಕಾಂಗ್ರೆಸ್ಸಿನವರಿಗೆ ಈ ಕಾರಣದಿಂದಲೇ ಜನರು ಅವರಿಗೆ ಮನೆಯಲ್ಲಿ ಕೂಡಿಸುವರು. ಈಗ ಮೋದಿ ಸರಕಾರದಿಂದ ಈ ದಿಕ್ಕಿನತ್ತ ಹೆಜ್ಜೆ ಹಾಕಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ ! ಈ ಸಮಯದಲ್ಲಿ ಮಾಜಿ ನ್ಯಾಯಮೂರ್ತಿಗಳು, ಬಾಬಾಸಾಹೇಬ್ ಅಂಬೇಡ್ಕರ್ ಇವರು ಸಂಸ್ಕೃತವನ್ನು ರಾಜಭಾಷೆ ಮಾಡುವ ಪ್ರಸ್ತಾವ ಮಂಡಿಸಿದ್ದರು. ಸಂವಿಧಾನ ಸಭೆಯಲ್ಲಿ ಅನೇಕ ಸದಸ್ಯರು ಇದಕ್ಕೆ ಅನುಮೋದನೆ ಕೂಡ ನೀಡಿದ್ದರು. ಅವರ ಸಲಹೆಗೆ ಕಲಂ ೩೫೧ ರಲ್ಲಿ ಸೇರಿಸಲಾಯಿತು. ಪ್ರಸಾರ ಮಾಧ್ಯಮದಿಂದ ಅಂಬೇಡ್ಕರ್ ಇವರ ಮುಂದೆ ಪ್ರಶ್ನೆ ಉಪಸ್ಥಿತಗೊಳಿಸಿದಾಗ ಅವರು, ಇದರಲ್ಲಿ ತಪ್ಪೇನಿದೆ ? ಎಂದು ಕೇಳಿದ್ದರು. ಎಂದರೆ ಅವರ ಈ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ದೊರೆತಿಲ್ಲ. ಎಂದು ಹೇಳಿದರು. ಬೊಬಡೆ ಕೊನೆಗೆ, ಸರಕಾರವು ಕಲಂ ೩೪೪ ರ ಅಡಿಯಲ್ಲಿ ಅಧಿಕೃತ ಭಾಷೆಯ ಪ್ರಶ್ನೆಯ ಬಗ್ಗೆ ಸಂಸದೀಯ ಸಮಿತಿ ಅಥವಾ ಒಂದು ಆಯೋಗದ ಸ್ಥಾಪನೆ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು. |
ಸಂಪಾದಕೀಯ ನಿಲುವು
|