ಬ್ರಾಹ್ಮಣ ಅಂದರೆ ಯಾರು ?

೧. ದರ್ಶನಶಾಸ್ತ್ರದಲ್ಲಿ ‘ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ | (ಅರ್ಥ : ಯಾವನು ಬ್ರಹ್ಮನನ್ನು ಅರಿತಿರುತ್ತಾನೆಯೋ ಅವನು ಬ್ರಾಹ್ಮಣ), ಎಂದು ಬ್ರಾಹ್ಮಣನ ವ್ಯಾಖ್ಯೆಯನ್ನು ಮಾಡಲಾಗಿದೆ. ಯಾವಾಗ ಯಾವುದಾದರೊಬ್ಬ ವ್ಯಕ್ತಿಯ ಉಚ್ಚ ಆಧ್ಯಾತ್ಮಿಕ ಉನ್ನತಿ ಆಗುತ್ತದೆಯೋ, ಆಗ ಅವನಿಗೆ ‘ನಾನು ಬ್ರಹ್ಮನೇ ಆಗಿದ್ದೇನೆ, ಎಂಬ ಆತ್ಮಾನುಭೂತಿ ಬರುತ್ತದೆ. ಅವನಿಗೆ ಬ್ರಾಹ್ಮಣ ಎಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಇಂತಹ ಅನುಭೂತಿಯನ್ನು ಪಡೆದ ಋಷಿಗಳಿಗೆ ಬ್ರಾಹ್ಮಣ ಎಂದು ಹೇಳಲಾಗಿದೆ.

೨. ರಾಮಾಯಣ ಮತ್ತು ಮಹಾಭಾರತದಲ್ಲಿ ಯಾವ ವರ್ಣವ್ಯವಸ್ಥೆಯನ್ನು ತೋರಿಸಲಾಗಿದೆಯೋ, ಅದರಲ್ಲಿ ‘ಬ್ರಹ್ಮನನ್ನು ತಿಳಿದುಕೊಳ್ಳಲು ಅಧ್ಯಯನ ಮಾಡುವುದು (ಅಂದರೆ ಸ್ವತಃ ಸಾಧನೆ ಅಥವಾ ತಪಸ್ಸು ಮಾಡುವವರು) ಮತ್ತು ಅಧ್ಯಾಪನ, ಅಂದರೆ ಅದರ ಶಿಕ್ಷಣವನ್ನು ನೀಡುವವರು ಬ್ರಾಹ್ಮಣರು, ಎಂದು ತಿಳಿಯಲಾಗಿದೆ. ಮಹಾಭಾರತದಲ್ಲಿ ಭಗವಾನ ಶ್ರೀಕೃಷ್ಣನು ವರ್ಣವ್ಯವಸ್ಥೆಯ ಬಗ್ಗೆ ಸುಂದರ ವಿವೇಚನೆಯನ್ನು ಮಾಡಿದ್ದಾನೆ. ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ |

ಶ್ರೀಮದ್ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೧೩

(ಅರ್ಥ : ನಾನು (ಭಗವಾನ ಶ್ರೀಕೃಷ್ಣನು) ಗುಣ ಮತ್ತು ಕರ್ಮಗಳಿಗುನಸಾರ ನಾಲ್ಕು ವರ್ಣಗಳನ್ನು ಮಾಡಿದ್ದೇನೆ.) ಎಂದು ಹೇಳಿದ್ದಾನೆ. ಈ ಅರ್ಥದಿಂದ ಬ್ರಹ್ಮನನ್ನು ಅರಿಯಲು ಆವಶ್ಯಕವಾಗಿರುವ ಸಾತ್ತ್ವಿಕ ಗುಣಗಳು ಇರುವವರಿಗೆ ಅಥವಾ ಅದಕ್ಕಾಗಿ ಅಧ್ಯಾಪನ ಕಾರ್ಯವನ್ನು ಮಾಡುವವರಿಗೆ ಬ್ರಾಹ್ಮಣನೆಂದು ಕರೆಯಲಾಯಿತು. ‘ಕ್ಷತಾತ ತ್ರಾಯತೆ ಇತಿ ಕ್ಷತ್ರೀಯಃ ಅಂದರೆ ಸಮಾಜದಲ್ಲಿನ ದುಃಖವನ್ನು ದೂರ ಮಾಡಲು ಆವಶ್ಯಕವಾಗಿರುವ ರಾಜಸಿಕ ಗುಣ ಯಾರಲ್ಲಿ ಇತ್ತೋ, ಅವರನ್ನು  ಕ್ಷತ್ರೀಯರೆಂದು ಹೇಳಲಾಯಿತು.

೩. ಹಿಂದೂ ದರ್ಶನಶಾಸ್ತ್ರದಲ್ಲಿ ‘ವ್ಯಕ್ತಿಯು ಜನ್ಮದಿಂದ ಶೂದ್ರನಾಗಿರುತ್ತಾನೆ, ಎಂದು ಹೇಳಲಾಗಿದೆ; ಆದರೆ ಅದರಲ್ಲಿಯೇ ‘ವ್ಯಕ್ತಿಯ ಸಾಧನೆ, ಗುಣ-ಕರ್ಮ ಮತ್ತು ಸಂಸ್ಕಾರ ಇವುಗಳಿಂದಾಗಿ ಅವನು ವಿವಿಧ ವರ್ಣಗಳನ್ನು ಪ್ರಾಪ್ತಮಾಡಿಕೊಳ್ಳಬಹುದು , ಎಂದೂ ಹೇಳಲಾಗಿದೆ.

೪. ಸುಮಾರು ೫ ಸಾವಿರ ವರ್ಷಗಳ ಹಿಂದೆ ವರ್ಣವ್ಯವಸ್ಥೆಗೆ ಗ್ಲಾನಿ (ಸಂಕಟ) ಬಂದ ನಂತರ ಜಾತಿವ್ಯವಸ್ಥೆ ನಿರ್ಮಾಣವಾಯಿತು ಮತ್ತು ಜನ್ಮಕ್ಕನುಸಾರ ಜಾತಿಗಳ ನಿರ್ಮಿತಿ ಆರಂಭವಾಯಿತು. ನಿಜವಾಗಿ ನೋಡಿದರೆ ಜಾತಿವ್ಯವಸ್ಥೆಯು ಯಾವುದಾದರೊಂದು ಸಮಾಜದ ನೈಸರ್ಗಿಕ ವ್ಯವಸ್ಥೆಯಾಗಿರುತ್ತದೆ. ಭಾರತದಲ್ಲಿ ಹೇಗೆ ಜಾತಿವ್ಯವಸ್ಥೆ ಇದೆಯೋ, ಅದೇ ರೀತಿ ಅರಬಸ್ತಾನದಲ್ಲಿ ‘ಕಬಿಲೆ ಗಳಿವೆ ಮತ್ತು ಯುರೋಪ್‌ನಲ್ಲಿ ‘ಹೌಸಸ್ ಇವೆ ಬ್ರಾಹ್ಮಣ ಜಾತಿಯಲ್ಲಿ ಜನಿಸಿದಾಗ ಸಮಾಜವು ಅವನಿಗೆ ಅಧ್ಯಯನ ಮತ್ತು ಅಧ್ಯಾಪನದ ಕಾರ್ಯವನ್ನು ಒಪ್ಪಿಸಿತು. ಯಾರು ದುಃಖವನ್ನು ದೂರ ಮಾಡುತ್ತಾನೆಯೋ ಅಥವಾ ದುಃಖದಿಂದ ಸಮಾಜವನ್ನು ರಕ್ಷಿಸುತ್ತಾನೆಯೋ, ಅವನಿಗೆ ಕ್ಷತ್ರೀಯ ಎಂದು ಹೇಳಲಾಯಿತು. ಅದರಂತೆ ಪ್ರತಿಯೊಂದು ಜಾತಿಗನುಸಾರ ಪ್ರತಿಯೊಬ್ಬರಿಗೆ ಕೆಲಸಗಳನ್ನು ವಿಭಜಿಸಿ ಕೊಡಲಾಗಿತ್ತು.

ನಮ್ಮಲ್ಲಿ ಧರ್ಮಕ್ಕೆ ಗ್ಲಾನಿ (ಸಂಕಟ) ಬರುತ್ತದೆ ಮತ್ತು ಪುನಃ ಧರ್ಮಸಂಸ್ಥಾಪನೆಯಾಗುತ್ತದೆ. ಈಗ ಗ್ಲಾನಿಯ ಕಾಲ ನಡೆಯುತ್ತಿದೆ. ಬ್ರಾಹ್ಮಣ ಜಾತಿಗೂ ಗ್ಲಾನಿ ಬಂದಿದೆ. ಆದುದರಿಂದ ಸಾರಾಸಗಟಾಗಿ ಎಲ್ಲರಿಗೂ ಬ್ರಾಹ್ಮಣರೆಂದು ಹೇಳಿ ಅವರ ಕಡೆಗೆ ಆದರ್ಶದ ದೃಷ್ಟಿಯಿಂದ ನೋಡುವುದಕ್ಕಿಂತ ಬ್ರಹ್ಮನನ್ನು ತಿಳಿದುಕೊಂಡವರನ್ನೇ ಬ್ರಾಹ್ಮಣರೆಂದು ಹೇಳಬೇಕು. ಅವನು ಜನ್ಮದಿಂದ ಶೂದ್ರನಾಗಿದ್ದರೂ, ಅವನು ತಪಸ್ಸಿನಿಂದ ಬ್ರಾಹ್ಮಣನಾಗಬಹುದು. ಆದುದರಿಂದ ಧರ್ಮ ಸಂಸ್ಥಾಪನೆಯನ್ನು ಮಾಡುವುದಿದ್ದರೆ, ಆಧ್ಯಾತ್ಮಿಕ ಗುಣ ಮತ್ತು ಕರ್ಮದ ಆಧಾರದಲ್ಲಿ ವ್ಯಕ್ತಿಯ ವಿಚಾರವಾಗಬೇಕು ಅಥವಾ ‘ಬ್ರಾಹ್ಮಣ ಶಬ್ದದ ಧರ್ಮಕ್ಕೆ ಅನ್ವಯಿಸುವ ಆಧ್ಯಾತ್ಮಿಕ ವ್ಯಾಖ್ಯೆಯನ್ನು ತಿಳಿದುಕೊಳ್ಳಬೇಕು.

ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೨೧.೧೨.೨೦೨೨)