‘ಜೆ.ಎನ್.ಯು ಆಗಿರಲಿ ಅಥವಾ ಇತರ ಯಾವುದೇ ವಿಶ್ವವಿದ್ಯಾಲಯವಾಗಿರಲಿ ಅದು ದ್ವೇಷ, ಜಿಗುಪ್ಸೆ ಮತ್ತು ವಿಷವನ್ನು ಹರಡಲು ಪ್ರಯತ್ನಿಸುವ ಚಳುವಳಿಯ ಭಾಗವಾಗಲು ಸಾಧ್ಯವಿಲ್ಲ. ಇದು ಕೆಲವರ ಬಗ್ಗೆ ದ್ವೇಷವನ್ನು ನಿರ್ಮಿಸುವ ಮಾನಸಿಕತೆಯಾಗಿದೆ, ಇವರು ಯುವಕರ ಮತ್ತು ಶಿಕ್ಷಣದ ಕೇಂದ್ರವಾಗಿರುವ ‘ಜೆ.ಎನ್.ಯುನೊಂದಿಗೆ ಸೇರಿ ಪ್ರಚಾರ ಮಾಡುತ್ತಿದ್ದಾರೆ. ‘ಜೆ.ಎನ್.ಯುನಲ್ಲಿ ಇಂತಹ ಜನರು ಹೆಚ್ಚೇನಿಲ್ಲ; ಆದರೆ ಅವರಿಗೆ ಹೆಚ್ಚು ಕಾಲ ಅಧಿಕಾರ ಮತ್ತು ಸಂರಕ್ಷಣೆ ದೊರಕಿದುದರಿಂದ ಅವರ ಪ್ರಭಾವ ಹೆಚ್ಚು ಕಂಡು ಬರುತ್ತದೆ. ಅವರೇ ‘ಜೆ.ಎನ್.ಯುನ ನಿಜವಾದ ಪರಿಚಯವಾಗಿದೆ ಎಂದು ಅನಿಸುತ್ತದೆ. ಇದೇ ‘ಜೆ.ಎನ್.ಯುನಲ್ಲಿ ಬಹಳ ಹಿಂದಿನಿಂದಲೂ ಸ್ವಾಮಿ ವಿವೇಕಾನಂದರ ಆದರ್ಶವನ್ನಿಟ್ಟುಕೊಂಡು ರಾಷ್ಟ್ರವನ್ನು ಬಲಪಡಿಸುವ ವಿದ್ಯಾರ್ಥಿಗಳು ಮುಂದೆ ಬಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿರುತ್ತಾರೆ. ಯಾವಾಗ ‘ಜೆ.ಎನ್.ಯುನ ಗೋಡೆಗಳ ಮೇಲೆ ‘ಬ್ರಾಹ್ಮಣರೇ, ಭಾರತದಿಂದ ತೊಲಗಿ, ಈ ರೀತಿ ಏನಾದರೂ ಬರೆಯಲಾಗುತ್ತದೆಯೋ, ಆಗ ಅದು ಜನರನ್ನು ಒಮ್ಮೆಲೆ ಪ್ರಭಾವಗೊಳಿಸುತ್ತದೆ. ‘ಜೆ.ಎನ್.ಯುನಲ್ಲಿ ಒಳ್ಳೆಯ ರೀತಿಯಲ್ಲಿ ಶ್ರೀ ರಾಮನವಮಿ ಅಥವಾ ದುರ್ಗೊತ್ಸವವನ್ನು ಆಚರಿಸಲಾಗುತ್ತದೆ; ಆದರೆ ಅದಕ್ಕಿಂತಲೂ ಹೆಚ್ಚು ದುರ್ಗಾದೇವಿ ಬಗ್ಗೆ ಆಕ್ಷೇಪಾರ್ಹ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ನನಗೆ ಈ ಜನರ ಸಂಖ್ಯೆ ಕಡಿಮೆ ಇದೆ ಎಂದೆನಿಸುತ್ತದೆ. ಈ ಜನರನ್ನು ಆಯ್ದು ಚರ್ಚೆಯಿಂದ ಹೊರಗೆ ತೆಗೆಯಬೇಕಾಗುವುದು. ಅವರ ಈ ದ್ವೇಷ ಮತ್ತು ವಿಷವನ್ನು ಹರಡುವ ಪದ್ಧತಿ ಕ್ರಮೇಣ ನಿಷ್ಫಲವಾಗುತ್ತಿದೆ. ಮೊದಲು ಅವರಿಗೆ ಇದರಲ್ಲಿ ಯಶಸ್ಸು ಸಿಗುತ್ತಿತ್ತು; ಆದರೆ ಈಗ ‘ಏಟಿಗೆ ಎದಿರೇಟು ಎಂಬ ಪ್ರತ್ಯುತ್ತರ ಸಿಗುತ್ತಿದೆ ಮತ್ತು ಈ ರೀತಿಯಲ್ಲಿನ ‘ಪ್ರಪೊಗೊಂಡಾ(ಪ್ರಚಾರ) ಸಹ ನಾಶವಾಗುತ್ತಿದೆ.