ಸನಾತನದ ‘ಮನೆಮನೆಯಲ್ಲಿ ಕೈತೋಟ ಅಭಿಯಾನ
‘ಗಿಡಗಳಲ್ಲಿ ಹಾಗೂ ಮಣ್ಣಿನಲ್ಲಿ ವಿವಿಧ ಕೀಟಗಳನ್ನು ನೋಡುತ್ತೇವೆ. ಅವುಗಳಲ್ಲಿ ಅನೇಕ ರೀತಿಯ ನೊಣ, ಜೇಡರಹುಳ, ಚಿಟ್ಟೆ, ಮರಿಹುಳ, ಇರುವೆಗಳು ಇತ್ಯಾದಿಗಳಿರುತ್ತವೆ. ಕೀಟಗಳು ಕಂಡೊಡನೆ ಪ್ರತಿ ಬಾರಿ ‘ಅವುಗಳನ್ನು ಹೋಗಲಾಡಿಸಲು ಏನು ಮಾಡ ಬೇಕು ?’, ಎಂಬ ವಿಚಾರವನ್ನು ಮಾಡಬಾರದು. ಕೆಲವು ಕೀಟಗಳು ‘ಮಿತ್ರಕೀಟಕ’ಗಳಾಗಿರುತ್ತವೆ. ಅವು ಹಾನಿ ಮಾಡುವ ಅನೇಕ ಕೀಟಗಳನ್ನು ಹಾಗೂ ಅವುಗಳ ಮೊಟ್ಟೆಗಳನ್ನು ತಿನ್ನುತ್ತವೆ. ಕಂಬಳಿಹುಳವು ಕೆಲವು ಗಿಡಗಳ ಬಹಳಷ್ಟು ಎಲೆಗಳನ್ನು ತಿಂದು ಕೋಷದಲ್ಲಿ ಹೋಗುತ್ತದೆ. ಆದರೆ ಮುಂದೆ ಅದರಿಂದ ಆಗುವ ಚಿಟ್ಟೆಗಳು ಪರಾಗಸ್ಪರ್ಷಕ್ಕೆ ಸಹಾಯ ಮಾಡುತ್ತವೆ. ‘ಜೀವೋ ಜೀವಸ್ಯ ಜೀವನಮ್ |’ ಅಂದರೆ ‘ಒಂದು ಜೀವವು ಇನ್ನೊಂದು ಜೀವದ ಜೀವನವಾಗಿದೆ’, ಈ ನ್ಯಾಯದಿಂದ ‘ನಿಸರ್ಗವು ಪ್ರತಿಯೊಂದು ಜೀವಕ್ಕೂ ಏನಾದರೂ ಕಾರ್ಯವಹಿಸಿದೆ’, ಇದನ್ನು ಗಮನಿಸಬೇಕು.’
– ಸೌ. ರಾಘವೀ ಮಯುರೇಶ ಕೋನೆಕರ, ಢವಳಿ, ಫೋಂಡಾ, ಗೋವಾ.