ಜೆ.ಎನ್.ಯು ನಲ್ಲಿ ಶಿವ ಜಯಂತಿ ಆಚರಿಸಲು ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಿಂದ ವಿರೋಧ !

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ !

ನವ ದೆಹಲಿ – ಇಲ್ಲಿಯ ಜವಾಹರ ಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಅಂದರೆ ಜೆ.ಎನ್.ಯು ನಲ್ಲಿ ಫೆಬ್ರುವರಿ ೧೯ ರಂದು ಸಂಜೆ ಶಿವ ಜಯಂತಿ ಆಚರಣೆಯ ವಿಷಯದ ಬಗ್ಗೆ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್.ಎಫ್.ಐ) ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇವರ ಕಾರ್ಯಕರ್ತರರಲ್ಲಿ ವಿವಾದ ನಡೆಯಿತು. ಎಸ್.ಎಫ್.ಐ. ನ ವಿದ್ಯಾರ್ಥಿಗಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಧ್ವಂಸಗೊಳಿಸಿದರು. ಇದರಿಂದ ಈ ವಿವಾದ ನಡೆಯಿತು. ಈ ಘಟನೆಯ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡವು. ವಿವಾದದ ಮಾಹಿತಿ ದೊರೆಯುತ್ತಲೇ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತಲುಪಿದರು. ಅವರು ಎರಡು ಗುಂಪಿನ ವಿದ್ಯಾರ್ಥಿಗಳನ್ನು ಶಾಂತಗೊಳಿಸಿದರು.

(ಸೌಜನ್ಯ Republic World)

೧. ಈ ಬಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ಉಮೇಶ್ ಚಂದ್ರ ಅಜಮೇರಾ ಇವರು, ಶಿವ ಜಯಂತಿಯ ಪ್ರಯುಕ್ತ ನಾವು ಸ್ಟೂಡೆಂಟ್ ಆಕ್ಟಿವಿಟೀಸ್ ಸೆಂಟರ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಇಟ್ಟಿದ್ದೆವು. ಎಸ್.ಎಫ್.ಐ.ನ ವಿದ್ಯಾರ್ಥಿಗಳು ಆ ಪ್ರತಿಮೆ ಹೊರ ತೆಗೆದರು. ಹಾಗೂ ಪ್ರತಿಮೆಗೆ ಹಾಕಿರುವ ಹಾರ ತೆಗೆದು ಕಸದ ಬುಟ್ಟಿಗೆ ಎಸೆದರು. ಎಸ್.ಎಫ್.ಐ. ನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಾತಾವರಣ ಕಲುಷಿತಗೊಳಿಸುತ್ತಿದ್ದು ಆಡಳಿತದಿಂದ ಇದರ ವಿರುದ್ಧ ಕಠೋರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

೨. ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಇದರ ಬಗ್ಗೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಯಾವ ಸ್ಥಳದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಇಟ್ಟಿದ್ದರು, ಅದಕ್ಕಾಗಿ ವಿಶ್ವವಿದ್ಯಾಲಯದ ಅನುಮತಿ ಪಡೆಯುವುದು ಅವಶ್ಯಕವಾಗಿತ್ತು; ಆದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಈ ಮೊದಲೇ ಈ ಸ್ಥಳದಲ್ಲಿ ಕೆಲವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ದರಿಂದ ಶಿವಾಜಿ ಮಹಾರಾಜರ ಪ್ರತಿಮೆ ವಿದ್ಯಾರ್ಥಿಗಳು ತೆರವುಗೊಳಿಸಿದರು ಎಂದು ಹೇಳಿದರು.

ಸಂಪಾದಕರ ನಿಲುವು

* ಕೇಂದ್ರ ಸರಕಾರದಿಂದ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯ ಮೇಲೆ ನಿಷೇಧ ಹೇರಿ ಜೆ.ಎನ್.ಯು ದ ಶುದ್ಧೀಕರಣ ಮಾಡುವುದು ಅವಶ್ಯಕವಾಗಿದೆ !

* ಜೆ.ಎನ್.ಯು ನಲ್ಲಿ ನಿರಂತರವಾಗಿ ದೇಶ ಮತ್ತು ಹಿಂದೂ ಧರ್ಮದ ವಿರೋಧದ ಚಟುವಟಿಕೆ ನಡೆಯುತ್ತಿದ್ದರೂ ಅದರ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಲಜ್ಜಾಸ್ಪದ !