ತೇಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮಾಧ್ಯಮದಿಂದ ರಾಜಕೀಯ !

(ಎಡದಲ್ಲಿ) ಕೆ. ಚಂದ್ರಶೇಖರ ರಾವ

ಭಾಗ್ಯನಗರ (ತೇಲಂಗಾಣ) – ತೇಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರು ಕೊಂಡಾಗಟ್ಟು ಜಿಲ್ಲೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 600 ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದಾರೆ. ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಯ ಶಾಸಕ ಕೆ. ಕೇಶವರಾವ ಮಾತನಾಡುತ್ತಾ, ”ನಾವು ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿದ್ದೇವೆ,” ಎಂದು ಹೇಳಿದರು. ಇನ್ನೊಂದೆಡೆ ತೇಲಂಗಾಣದ ಪಕ್ಕದ ಆಂಧ್ರಪ್ರದೇಶ ರಾಜ್ಯ ಸರಕಾರವು 26 ಜಿಲ್ಲೆಗಳಲ್ಲಿ ಒಟ್ಟು 1 ಸಾವಿರ 400 ಮಂದಿರಗಳನ್ನು ನಿರ್ಮಿಸುತ್ತಿದೆ. ಅವರು ಈ ಹಿಂದೆಯೇ ಇದನ್ನು ಘೋಷಿಸಿದ್ದರು, ಈ ರಾಜ್ಯಗಳಲ್ಲಿ ಹಿಂದೂಗಳ ಮತಗಳನ್ನು ಪಡೆದುಕೊಳ್ಳಲು ದೇವಸ್ಥಾನಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ.
(ಹಿಂದೂಗಳ ಮಂದಿರಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ ಅದನ್ನು ಭಕ್ತರ ವಶಕ್ಕೆ ಒಪ್ಪಿಸುವಂತೆ ಹಿಂದೂಗಳೂ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಿರುವ ಆವಶ್ಯಕತೆಯಿದೆ. ಇಲ್ಲವಾದರೆ ದೇವಸ್ಥಾನಗಳಿಗೆ ಹಣ ನೀಡುವ ಹೆಸರಿನಲ್ಲಿ ದೇವಸ್ಥಾನಗಳ ಹಣವನ್ನು ಕಬಳಿಸಲು ಎಲ್ಲ ಪಕ್ಷಗಳ ಸರಕಾರಗಳು ಸಿದ್ಧವಾಗಿಯೇ ಇರಲಿವೆ – ಸಂಪಾದಕರು)

1. ಆಂಧ್ರಪ್ರದೇಶ ಸರಕಾರ 1 ಸಾವಿರ 400 ಮಂದಿರಗಳ ಪೈಕಿ 1 ಸಾವಿರ 30 ಕಾಮಗಾರಿಗಳನ್ನು ಸ್ವತಃ, ಇನ್ನುಳಿದ 330 `ಸಮರಸಥ ಸೇವಾ ಫೌಂಡೇಶನ’ ನಿರ್ಮಿಸುತ್ತಿದೆ. ವಿಶೇಷವೆಂದರೆ ಈ ಫೌಂಡೇಶನ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸಂಬಂಧ ಹೊಂದಿದೆಯೆಂದು ಹೇಳಲಾಗುತ್ತಿದೆ. ಪ್ರತಿಯೊಂದು ದೇವಸ್ಥಾನಕ್ಕೆ 8 ಲಕ್ಷ ರೂಪಾಯಿಗಳು ಮತ್ತು ಮೂರ್ತಿಗಾಗಿ 2 ಲಕ್ಷ ರೂಪಾಯಿಗಳ ಅನುದಾನ ಏರ್ಪಾಡು ಮಾಡಿದೆ. ತೇಲಂಗಾಣ ಸರಕಾರವು 1 ಸಾವಿರ 800 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಯದಾಗಿರಿಗುಟ್ಟಾ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಮಾಡಿದೆ.

2. ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ ದೇವಧರ ಮಾತನಾಡುತ್ತಾ, ಮೊದಲು ಯಾವ ಪಕ್ಷ ಚರ್ಚ್ ಇತ್ಯಾದಿಗಳಿಗೆ ಅನುದಾನವನ್ನು ನೀಡುತ್ತಿದ್ದವೋ, ಅವರೀಗ ತೋರಿಕೆಗಾಗಿ ದೇವಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಸಂಪೂರ್ಣ ಮುಳುಗಿರುವ ಪಕ್ಷ ಭಾವನಾತ್ಮಕ ಧೋರಣೆಯನ್ನು ಮುಂದೆ ಮಾಡುತ್ತಿದೆ; ಆದರೆ ಅವರ ನೈಜತೆ ಜನರಿಗೆ ತಿಳಿದಿದೆ. ಭಾಜಪ ಅಭಿವೃದ್ಧಿಯ ಧೋರಣೆಯ ಮೇಲೆ ವೃದ್ಧಿಸುತ್ತಿದೆ.

ಸಂಪಾದಕರ ನಿಲುವು

* ದೇಶದಲ್ಲಿ ಈಗ ಹಿಂದುತ್ವದ ವಾತಾವರಣ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿರುವುದರ ಪರಿಣಾಮವೇ ಇದಾಗಿದೆ ! ನಿನ್ನೆಯವರೆಗೆ ಕ್ರೈಸ್ತ ಮತ್ತು ಮುಸಲ್ಮಾನರನ್ನು ಸಂತೋಷಪಡಿಸುವ ಪ್ರಯತ್ನ ಮಾಡಿದ ರಾಜಕಾರಣಿಗಳು ಈಗ ಹಿಂದೂಗಳನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದೂ ಕೂಡ ಅತ್ಯಲ್ಪ