ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಬೇರೆಯವರ ಧಾರ್ಮಿಕ ಶ್ರದ್ಧೆಯನ್ನು ನೋಯಿಸುವುದು ಅಯೋಗ್ಯ !

ರಾಮಚರಿತಮಾನಸವನ್ನು ಬೆಂಕಿಗಾಹುತಿ ಮಾಡಿದ ಬಗ್ಗೆ ನಟ ರಝಾ ಮುರಾದರ ಹೇಳಿಕೆ !

ನಟ ರಝಾ ಮುರಾದ

ಪ್ರಯಾಗರಾಜ (ಉತ್ತರಪ್ರದೇಶ) – ನಮ್ಮ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲಾಗಿದೆ, ಇದರರ್ಥ ನಾವು ಯಾರ ಧಾರ್ಮಿಕ ಶ್ರದ್ಧೆಯನ್ನು ನಾವು ನೋಯಿಸಬಹುದು ಎಂದಲ್ಲ. ಯಾವುದೇ ಧರ್ಮಗ್ರಂಥದಿಂದ ವಿವಾದ ನಿರ್ಮಾಣವಾಗುವುದು ಅಯೋಗ್ಯವಾಗಿದೆ. ನಟ ರಜಾ ಮುರಾದರು ಸಮಾಜವಾದಿ ಪಕ್ಷದಿಂದ ರಾಮಚರಿತಮಾನಸವನ್ನು ಸುಟ್ಟಿರುವ ಘಟನೆಯಿಂದ ಪತ್ರಕರ್ತರು ಕೇಳಿದ ಪ್ರಶ್ನೆಯ ಮೇಲೆ ಮೇಲಿನಂತೆ ಹೇಳಿಕೆ ನೀಡಿದರು.

ಈ ಪ್ರಸಂಗದಲ್ಲಿ ಮುರಾದ ಇವರು ಯೋಗಿ ಆದಿತ್ಯನಾಥರನ್ನು ಶ್ಲಾಘಿಸಿದರು. ಅವರು, ಯೋಗಿಯವರ ಸರಕಾರ ರಾಜ್ಯದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವುದರಿಂದಲೇ ಜನತೆ ಅವರನ್ನು ಪುನಃ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.