ಪಾಕಿಸ್ತಾನ ಈ ಹಿಂದೆಯೂ ದಿವಾಳಿಯಾಗಿದೆ – ಪಾಕಿಸ್ತಾನದ ರಕ್ಷಣಾ ಮಂತ್ರಿ ಖ್ವಾಜಾ ಆಸಿಫ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಈ ಹಿಂದೆಯೂ ದಿವಾಳಿಯಾಗಿದೆ. ನಾವು ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ ಎಂದು ಪಾಕಿಸ್ತಾನದ ರಕ್ಷಣಾಮಂತ್ರಿ ಖ್ವಾಜಾ ಆಸಿಫ ಇವರೇ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

1. ರಕ್ಷಣಾ ಸಚಿವ ಆಸಿಫ ಇವರು ಪಾಕಿಸ್ತಾನ ದಿವಾಳಿಯ ಸ್ಥಿತಿಗೆ ಬರಲು ಪಾಕಿಸ್ತಾನ ಸೈನ್ಯ, ಸರಕಾರ ಮತ್ತು ರಾಜಕೀಯ ಮುಖಂಡರನ್ನು ಜವಾಬ್ದಾರರೆಂದು ಹೇಳಿದ್ದಾರೆ; ಕಾರಣ `ಪಾಕಿಸ್ತಾನದಲ್ಲಿ ಕಾನೂನು ಮತ್ತು ಸಂವಿಧಾನದ ಪಾಲನೆ ಮಾಡಲಾಗುವುದಿಲ್ಲ’ ಎಂದು ಆರೋಪ ಮಾಡಿದ್ದಾರೆ. ಪಾಕಿಸ್ತಾನ ಸ್ಥಿರವಾಗಲು ತನ್ನ ಕಾಲಿನ ಮೇಲೆ ನಿಲ್ಲುವ ಆವಶ್ಯಕತೆಯಿದೆ. ಎಂದೂ ಸಹ ಅವರು ಹೇಳಿದ್ದಾರೆ.

2. ಆಸಿಫ ತಮ್ಮ ಮಾತನ್ನು ಮುಂದುವರಿಸುತ್ತಾ, ನಮ್ಮ ಸಮಸ್ಯೆಗಳಿಗೆ ಉತ್ತರ ನಮ್ಮ ದೇಶದಲ್ಲಿಯೇ ಇದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಬಳಿ ಪಾಕಿಸ್ತಾನದ ಸಮಸ್ಯೆಯ ಉತ್ತರವಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಕರೆತರಲಾಗಿದೆ. ಅದರ ಪರಿಣಾಮವೆಂದರೆ ಈಗ ದೇಶದಲ್ಲಿ ಉಗ್ರರ ಕೃತ್ಯ ನಡೆಯುತ್ತಿದೆ ಎಂದು ಹೇಳಿದರು.