ಇಸ್ರೈಲ್ ಸಿರಿಯಾದ ರಾಜಧಾನಿಯ ಮೇಲೆ ಕ್ಷಿಪಣಿ ದಾಳಿ : 5 ಜನರ ದುರ್ಮರಣ

ದಮಾಸ್ಕಸ್ (ಸಿರಿಯಾ) – ಇಸ್ರೈಲ್ ಸಿರಿಯಾ ರಾಜಧಾನಿ ದಮಾಸ್ಕಸ್ ನ ವಸತಿ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ 5 ಜನರು ಸಾವನ್ನಪ್ಪಿರುವ ವಾರ್ತೆ ತಿಳಿದು ಬಂದಿದೆ. 2 ದಿನಗಳ ಹಿಂದೆ ಸಿರಿಯಾದಲ್ಲಿ ನಡೆದ ಒಂದು ಭಯೋತ್ಪಾದಕ ಆಕ್ರಮಣದಲ್ಲಿ 53 ಜನರು ಸಾವನ್ನಪ್ಪಿದ್ದರು. ಈ ಆಕ್ರಮಣದ ಹಿಂದೆ ಇಸ್ಲಾಮಿಕ ಸ್ಟೇಟ ಇದೆಯೆಂದು ಹೇಳಲಾಗುತ್ತಿದೆ. ಈ ಆಕ್ರಮಣ ಇರಾನನಿಂದ ಸಿರಿಯಾದಲ್ಲಿ ಆಗುತ್ತಿರುವ ನುಸುಳುವಿಕೆಯನ್ನು ತಡೆಗಟ್ಟಲು ನಡೆಸಲಾಗಿದೆಯೆಂದು ಹೇಳಲಾಗುತ್ತಿದೆ.