೧. ಜಿಹಾದ್ ಏನಿರುತ್ತದೆ ?, ಎಂಬುದನ್ನು ಕಾಂಗ್ರೆಸ್ಸಿಗರು ಹೇಳುವರೇ ?
ಹಿಂದುತ್ವವು ಹತ್ಯೆ, ಹಿಂಸಾಚಾರ ಮತ್ತು ತಾರತಮ್ಯವನ್ನು ಬೆಂಬಲಿಸುತ್ತದೆ, ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
೨. ಕಾಂಗ್ರೆಸ್ ಎಂದರೆ ದೊಡ್ಡ ವಂಚಕ !
ಯೋಗಿ ಆದಿತ್ಯನಾಥರು ಯಾವುದೇ ಧಾರ್ಮಿಕ ನಾಯಕ ಅಂದರೆ ಧರ್ಮಗುರುಗಳಲ್ಲ. ಅವರು ಒಬ್ಬ ಸಾಮಾನ್ಯ ವಂಚಕರಾಗಿದ್ದಾರೆ. ಭಾಜಪವು ಉತ್ತರಪ್ರದೇಶದಲ್ಲಿ ಅಧರ್ಮದ ಪ್ರಚಾರ-ಪ್ರಸಾರ ಮಾಡುತ್ತಿದೆ, ಎಂದು ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಯೋಗಿ ಆದಿತ್ಯನಾಥರ ವಿರುದ್ಧ ವಿಷ ಕಾರಿದ್ದಾರೆ.
೩. ಕಾಂಗ್ರೆಸ್ ರಾಜ್ಯದಲ್ಲಿ ಅಸುರಕ್ಷಿತ ಹಿಂದುತ್ವನಿಷ್ಠರು !
ಉದಯಪುರ (ರಾಜಸ್ಥಾನ)ದಲ್ಲಿ ಬಜರಂಗ ದಳಕ್ಕೆ ಸೇರಿದ ರಾಜೇಂದ್ರ ಊರ್ಫ್ ರಾಜು ತೇಲಿ (೩೮ ವರ್ಷ) ಇವರನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಯ ನಂತರ ಹಿಂದುತ್ವನಿಷ್ಠರು ಇಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
೪. ದೇಶದ್ರೋಹಿ ಖಲಿಸ್ತಾನವಾದಿಗಳನ್ನು ಹತ್ತಿಕ್ಕಿ !
ಚಂದೀಗಢದಲ್ಲಿ ಖಲಿಸ್ತಾನವಾದಿ ಸಿಕ್ಖ್‌ರು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ ಸಿಕ್ಖ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದರು. ಪೊಲೀಸರ ಮೇಲೆ ಕತ್ತಿ, ದೊಣ್ಣೆಗಳಿಂದ ಹಲ್ಲೆ ನಡೆಸಿ ಪೊಲೀಸರಿಂದ ಆಯುಧಗಳನ್ನು ದೋಚಿದ್ದಾರೆ.
೫. ಹಿಂದೂದ್ವೇಷಿ ‘ಬಿಬಿಸಿಯನ್ನು ನಿಷೇಧಿಸಲೇ ಬೇಕು !
ಕೇಂದ್ರ ಸರಕಾರದ ಪಶುಕಲ್ಯಾಣ ಮಂಡಳಿಯು ಫೆಬ್ರವರಿ ೧೪ ರಂದು ಹಸು ಆಲಿಂಗನ ದಿನ (ಕೌ ಹಗ್ ಡೇ) ಎಂದು ಆಚರಿಸಲು ಕರೆ ನೀಡಿದಾಗ ಹಿಂದೂದ್ವೇಷದಿಂದ ಕೂಡಿದ ಬಿಬಿಸಿ ಅದನ್ನು ವ್ಯಂಗ್ಯಚಿತ್ರದ ಮೂಲಕ ಹಾಸ್ಯಾಸ್ಪದವೆಂದು ತೋರಿಸಲು ಪ್ರಯತ್ನಿಸಿತು.
೬. ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಯಾವಾಗ?
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ನ್ಯೂಟನ್ ಶೇಖ್ ಈತ ಬಂಗಾಳದ ಮಾರಗ್ರಾಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದರೆ ತೃಣಮೂಲ ಪಕ್ಷದ ಪಂಚಾಯತ್ ಮುಖ್ಯಸ್ಥರ ಸಹೋದರ ಲಾಲ್ಟು ಶೇಖ್ ಗಾಯಗೊಂಡಿದ್ದಾನೆ.
೭. ಇಂತಹ ಮದರಸಾಗಳನ್ನು ಈಗ ಮುಚ್ಚಲೇಬೇಕು !
ಉತ್ತರ ಪ್ರದೇಶದ ಸಂಪ್ಲಾ ಬಕ್ಕಲ್ ಗ್ರಾಮದ ರಹೀಮಿಯಾ ಮದರಸಾದಲ್ಲಿ ಓದುತ್ತಿದ್ದ ೧೩ ವರ್ಷದ ಬಾಲಕನ ಮೇಲೆ ಅದೇ ಮದರಸಾದ ಸಹ ವಿದ್ಯಾರ್ಥಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಲೆ ಮಾಡಿದ್ದಾನೆ.