ಆಸ್ಟ್ರೇಲಿಯಾದಲ್ಲಿರುವ ಹಿಂದೂಗಳಿಗೆ ಪಾಕಿಸ್ತಾನದಲ್ಲಿರುವ ಖಲಿಸ್ತಾನವಾದಿಗಳಿಂದ ಬೆದರಿಕೆ !
ಬ್ರಿಸ್ಬೇನ (ಆಸ್ಟ್ರೇಲಿಯಾ)– ಆಸ್ಟ್ರೇಲಿಯಾದ ಹಿಂದೂಗಳ ಮಂದಿರಗಳ ಮೇಲೆ ಆಕ್ರಮಣ ನಡೆಸುವ ಘಟನೆಯ ಬಳಿಕ ಈಗ ಖಲಿಸ್ತಾನವಾದಿಗಳು ಮಂದಿರಗಳಿಗೆ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿವೆ. ಫೆಬ್ರುವರಿ 17 ರಂದು ಇಲ್ಲಿಯ ಪ್ರಸಿದ್ಧ ಗಾಯತ್ರಿ ಮಂದಿರದ ಅಧ್ಯಕ್ಷ ಡಾ. ಜಯರಾಮ ಮತ್ತು ಉಪಾಧ್ಯಕ್ಷ ಧರ್ಮೇಶ ಪ್ರಸಾದರಿಗೆ ಒಬ್ಬ ಖಲಿಸ್ತಾನವಾದಿಯು ದೂರವಾಣಿ ಮುಖಾಂತರ ಬೆದರಿಕೆ ಹಾಕಿದ್ದಾನೆ.
Hindu temple in #Australia receives threat call, asked to raise Khalistani slogans pic.twitter.com/G2JYMGxNPk
— Zee News English (@ZeeNewsEnglish) February 19, 2023
`ಆಸ್ಟ್ರೇಲಿಯಾ ಟುಡೆ’ ಈ ದಿನಪತ್ರಿಕೆಯು ನೀಡಿರುವ ಮಾಹಿತಿಗನುಸಾರ ಡಾ. ಜಯರಾಮ ಇವರು ಪಾಕಿಸ್ತಾನದ ನನಕಾನಾ ಸಾಹಿಬದಿಂದ ಗುರು ಅವಧೇಶ ಸಿಂಹ ಹೆಸರಿನ ವ್ಯಕ್ತಿಯು ಅವರನ್ನು ಸಂಪರ್ಕಿಸಿದನು. ಆ ಸಮಯದಲ್ಲಿ ಅವನು, ನಿಮಗೆ ಮಂದಿರದಲ್ಲಿ ಮಹಾಶಿವರಾತ್ರಿ ಆಚರಣೆ ಮಾಡುವುದಿದ್ದಲ್ಲಿ, ನಿಮ್ಮ ಪೂಜಾರಿ 5 ಸಲ `ಖಲಿಸ್ತಾನ ಝಿಂದಾಬಾದ್’ ‘ ಎಂದು ಹೇಳದೇ ಮಹಾಶಿವರಾತ್ರಿ ಆಚರಿಸಬಾರದು ಎಂದು ಹೇಳಿದ್ದನು. ಅಲ್ಲದೇ ಅವನು ಮಾರ್ಚ 19 ರಂದು ಖಲಿಸ್ತಾನ ಜನಗಣತಿಯಾಗುತ್ತಿದ್ದು, ಅದನ್ನು ನೀವು ಬೆಂಬಲಿಸಬೇಕು ಎಂದೂ ಹೇಳಿದ್ದನು.
ಕಳೆದ ತಿಂಗಳು ಮೆಲ್ಬರ್ನನ ಶ್ರೀ ಕಾಳಿ ಮಾತಾ ಮಂದಿರದ ಮಹಿಳಾ ಪೂಜಾರಿ ಭಾವನಾ ಇವರಿಗೂ ಒಬ್ಬ ಖಲಿಸ್ತಾನವಾದಿ ಸಂಪರ್ಕಿಸಿ ಬೆದರಿಕೆ ಹಾಕಿದ್ದನು. ಮಾರ್ಚ 4 ರಂದು ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಬ್ಬ ಮೂಲಭೂತವಾದಿ ಹಿಂದೂ ಗಾಯಕನಿಗೆ ಆಮಂತ್ರಣ ನೀಡಿದ್ದರಿಂದ ಅವನನ್ನು ಕಾರ್ಯಕ್ರಮದಲ್ಲಿ ಸೇರಿಸಿದರೆ ಮಂದಿರದ ಮೇಲೆ ಆಕ್ರಮಣ ಮಾಡುತ್ತೇವೆ ಎನ್ನುವ ರೀತಿಯಲ್ಲಿ ಬೆದರಿಕೆ ಹಾಕಿದ್ದನು.
ಸಂಪಾದರಕ ನಿಲುವುಜಗತ್ತಿನಾದ್ಯಂತ ಖಲಿಸ್ತಾನವಾದಿ ಪ್ರವೃತ್ತಿ ಭಾರತದ ಸಾರ್ವಭೌಮತ್ವಕ್ಕೆ ಸವಾಲೊಡ್ಡುತ್ತಿರುವುದರಿಂದ ಭಾರತ ಸರಕಾರವು ಪಂಜಾಬ್‌ನಲ್ಲಿರುವ ಖಲಿಸ್ತಾನವಾದಿ ಸಂಘಟನೆಯನ್ನು ನಾಶ ಮಾಡುವುದರೊಂದಿಗೆ ಜಗತ್ತಿನಾದ್ಯಂತ ಎಲ್ಲೆಲ್ಲಿ ಖಲಿಸ್ತಾನವಾದಿಗಳಿದ್ದಾರೆಯೋ, ಅಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಲ್ಲಿಯ ಸರಕಾರಗಳಿಗೆ ಗದರಿಸಿ ಹೇಳುವ ಆವಶ್ಯಕತೆಯಿದೆ. |