ದೆಹಲಿ ವಕ್ಫ್ ಬೋರ್ಡ್‌ನ 123 ಆಸ್ತಿಗಳ ಮೇಲೆ ಕೇಂದ್ರ ಸರಕಾರವು ನಿಯಂತ್ರಣವನ್ನು ಪಡೆಯಲಿದೆ !

ಕಾಂಗ್ರೆಸ್ ಆಡಳಿತದಲ್ಲಿ ಅಕ್ರಮವಾಗಿ ಮಂಡಳಿಗೆ ಆಸ್ತಿ ಹಸ್ತಾಂತರ !

ದೆಹಲಿ ವಕ್ಫ್ ಮಂಡಳಿ

ನವ ದೆಹಲಿ – ದೆಹಲಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರಕಾರ ಘೋಷಿಸಿದೆ. ಇದರಲ್ಲಿ ಮಸೀದಿಗಳು, ಸ್ಮಶಾನಗಳು ಮತ್ತು ದರ್ಗಾಗಳನ್ನು ಸಹ ಒಳಗೊಂಡಿದೆ. ಸರಕಾರದ ಈ ನಿರ್ಧಾರವನ್ನು ಬೋರ್ಡ್ ನ ಅಧ್ಯಕ್ಷ ಮತ್ತು ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ವಿರೋಧಿಸಿದ್ದಾರೆ ಮತ್ತು ಸರಕಾರಕ್ಕೆ ಹೀಗೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

1. ಮಾಧ್ಯಮ ನೀಡಿದ ವರದಿಗಳ ಪ್ರಕಾರ, ಈ ಎಲ್ಲಾ ಆಸ್ತಿಗಳು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿಯಂತ್ರಣದಲ್ಲಿರುತ್ತವೆ. ಇದರನ್ವಯ ಸರಕಾರಿ ಅಧಿಕಾರಿಗಳು ಫೆಬ್ರವರಿ 8 ರಂದೇ ಬೋರ್ಡ್ ಗೆ ಪತ್ರ ರವಾನಿಸಿ ಎಲ್ಲ ಆಸ್ತಿಗಳನ್ನು ಮುಕ್ತಗೊಳಿಸುವಂತೆ ಹೇಳಿದ್ದಾರೆ.

2. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದೆಹಲಿಯ 123 ಆಸ್ತಿಗಳನ್ನು ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಲಾಗಿತ್ತು. ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆಗಸ್ಟ್ 2014 ರಲ್ಲಿ ನ್ಯಾಯಾಲಯ ನೀಡಿದ ಆದೇಶದ ಪ್ರಕಾರ ಮಾಜಿ ನ್ಯಾಯಮೂರ್ತಿ ಎಸ್.ಪಿ. ಗಾರ್ಗ್ ಅವರ ಅಧ್ಯಕ್ಷತೆಯಲ್ಲಿ ದ್ವಿಸದಸ್ಯ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ದೆಹಲಿ ವಕ್ಫ್ ಬೋರ್ಡ್‌ನ ಎಲ್ಲಾ ಸಂಬಂಧಿತ ಪಕ್ಷಗಳ ಬದಿಯನ್ನು ಅರ್ಥಮಾಡಿಕೊಂಡ ನಂತರ ವರದಿಯನ್ನು ಪ್ರಸಾರ ಮಾಡಿತ್ತು.

3. ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ, ಸಚಿವಾಲಯದ ಭೂ ಮತ್ತು ಅಭಿವೃದ್ಧಿ ಕಚೇರಿಯು, ಗಾರ್ಗ್ ಅವರ ವರದಿಯಲ್ಲಿ ಅಯೋಗ್ಯ ರೀತಿಯಲ್ಲಿ ಅಧಿಸೂಚಿತ ವಕ್ಫ್ ಆಸ್ತಿಗಳ ಅಂಶಗಳ ಬಗ್ಗೆ, ದೆಹಲಿ ವಕ್ಫ್ ಬೋರ್ಡ್ ನಿಂದ ಯಾವುದೇ ಪ್ರಾತಿನಿಧ್ಯ ಅಥವಾ ಆಕ್ಷೇಪಣೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿದೆ. ಇದನ್ನು ಆಧರಿಸಿ ಕೇಂದ್ರ ಸರಕಾರದಿಂದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.

4. ಈ ಪ್ರಕರಣದಲ್ಲಿ ಅಮಾನತುಲ್ಲಾ ಖಾನ್ ಆಕ್ಷೇಪಿಸಿದ್ದು, ಗರ್ಗ್ ಸಮಿತಿಯ ವಿರುದ್ಧ ಜನವರಿ 2022 ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದೂ ಈ ಎಲ್ಲಾ ಆಸ್ತಿಗಳನ್ನು ಮುಸ್ಲಿಮರು ಬಳಸುತ್ತಿದ್ದಾರೆ ಹಾಗೂ ಈ ಎಲ್ಲಾ ಆಸ್ತಿಗಳನ್ನು ಬೋರ್ಡ್ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ಸಂಪಾದರಕ ನಿಲುವು

75 ವರ್ಷಗಳ ಹಿಂದೆ ಕಾಂಗ್ರೆಸ್ಸಿನ ಪ್ರಮಾದದಿಂದ ಭಾರತ ಎರಡು ಭಾಗವಾಗಿ ಪಾಕಿಸ್ತಾನ ರಚನೆಯಾಯಿತು. ಅದೇ ಕಾಂಗ್ರೆಸ್ 6 ದಶಕಗಳ ಕಾಲ ಭಾರತವನ್ನು ಆಳಿತು ಮತ್ತು ಮುಸ್ಲಿಮರ ರಾಷ್ಟ್ರಘಾತಕ ಓಲೈಕೆಯನ್ನು ಮಾಡಿತು. ಈಗ ಅದು ಮಾಡಿದ ಎಲ್ಲಾ ಪಾಪಗಳನ್ನು ನಾಶಪಡಿಸುವುದು ಮತ್ತು ಅದನ್ನೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಾಶಮಾಡುವುದು ಅವಶ್ಯಕ !