ಜಾರ್ಜ ಸೊರೊಸರಿಗೆ ಜಗತ್ತು ಅವರ ವಿಚಾರದಂತೆ ನಡೆಯುತ್ತದೆಯೆಂದು ಅನಿಸುತ್ತದೆ ! – ವಿದೇಶಾಂಗ ಸಚಿವ ಜೈಶಂಕರರ ಪ್ರತ್ಯುತ್ತರ

ಮೆಲ್ಬೋರ್ನ (ಆಸ್ಟ್ರೇಲಿಯಾ) – ಜಾರ್ಜ ಸೊರೊಸರು ನ್ಯೂಯಾರ್ಕನಲ್ಲಿ ಕುಳಿತಿರುವ ವೃದ್ಧ, ಶ್ರೀಮಂತ ಮತ್ತು ಹಠಮಾರಿ ವ್ಯಕ್ತಿಯಾಗಿದ್ದಾರೆ. ಸೊರೊಸರಿಗೆ ಜಗತ್ತು ಅವರ ವಿಚಾರಕ್ಕನುಸಾರ ನಡೆಯುತ್ತದೆಯೆಂದು ಅನಿಸುತ್ತದೆ. ಇಂತಹ ವ್ಯಕ್ತಿ ನಕರಾತ್ಮಕತೆಯನ್ನು ಹರಡಲು ಎಲ್ಲ ಸಾಧನೆಗಳನ್ನು ಉಪಯೋಗಿಸುತ್ತಿದ್ದಾರೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಇಲ್ಲಿ ಒಂದು ಸಂದರ್ಶನದಲ್ಲಿ ಮಾತನಾಡುವಾಗ ಹೇಳಿದರು. ಅಮೇರಿಕಾದ ಪ್ರಸಿದ್ಧ ಉದ್ಯಮಿಯಾಗಿರುವ ಜಾರ್ಜ ಸೊರೊಸ ಇವರು `ಭಾರತದ ಉದ್ಯಮಿ ಅದಾನಿಯವರ ಮೇಲಿನ ಆರೋಪಗಳ ಪ್ರಕರಣದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉತ್ತರ ನೀಡಬೇಕು’, ಎಂದು ಹೇಳಿಕೆ ನೀಡಿದ್ದರು.