‘ಭಾರತದಲ್ಲಿ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದಾರೆ, ನೀನೇಕೆ ಅಲ್ಲಿಗೆ ಹಿಂದಿರುಗಲ್ಲ ?’ (ಅಂತೆ )

ಅಮೇರಿಕಾದ ಭಾರತೀಯ ಮೂಲದ ನಾಯಕಿ ನಿಕ್ಕಿ ಹ್ಯಾಲಿಯವರನ್ನು ಜನಾಂಗೀಯವಾಗಿ ನಿಂದಿಸಿದ ಅಮೇರಿಕಾದ ಲೇಖಕಿ ಆನ್ ಕೊಲ್ಟರ್

(ಎಡದಿಂದ ) ನಿಕ್ಕಿ ಹ್ಯಾಲಿ ಮತ್ತು ಆನ್ ಕೊಲ್ಟರ್

ವಾಷಿಂಗ್ಟನ್ (ಅಮೇರಿಕಾ) – ಗೋವುಗಳನ್ನು ಯಾರು ಪೂಜಿಸುತ್ತಾರೆ ? ಭಾರತದಲ್ಲಿ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದಾರೆ. ಅಲ್ಲಿನ ದೇವಾಲಯಗಳಲ್ಲಿ ಇಲಿಗಳ ಸಾಮ್ರಾಜ್ಯವಿದೆ. ನೀನೇಕೆ ನಿನ್ನ ಭಾರತಕ್ಕೆ ಹಿಂದಿರುಗುವುದಿಲ್ಲ ?’ ಎಂದು ಅಮೇರಿಕಾದ ಪ್ರಸಿದ್ಧ ಲೇಖಕಿ ಹಾಗೂ ನ್ಯಾಯವಾದಿ ಎನ್. ಕೊಲ್ಟಾರ್ ಇವರು ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ನಾಯಕಿ ನಿಕ್ಕಿ ಹ್ಯಾಲಿಯವರನ್ನು ಜನಾಂಗೀಯವಾಗಿ ನಿಂದಿಸಿದರು. ಒಂದು ‘ಪಾಡ್‌ಕ್ಯಾಸ್ಟ್’ನಲ್ಲಿ (ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡುವುದು) ಕೊಲ್ಟಾರ ಇವರು ಈ ರೀತಿ ನಿಂದಿಸಿದ್ದಾರೆ.

ಆನ್ ಕೌಲ್ಟರ್ ಇವರು ಹ್ಯಾಲಿಯವರನ್ನು ‘ಚಾರಿತ್ಯ್ರಹೀನ’ ಎಂದೂ ಉಲ್ಲೇಖಿಸಿದ್ದಾರೆ. ನಿಕ್ಕಿ ಹ್ಯಾಲಿ ಇವರು ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಆನ್ ಕೋಲ್ಟರ್ ಹೀಗೆ ನಿಂದಿಸಿದ್ದಾರೆ ನಿಕ್ಕಿ ಹ್ಯಾಲಿ ಇವರಿಗೆ ಶೇಕಡಾ 2 ಕ್ಕಿಂತ ಹೆಚ್ಚು ಮತ ಸಿಗುವುದಿಲ್ಲ, ಎಂದೂ ಕೊಲ್ಟಾರ್ ಹೇಳಿದ್ದಾರೆ. ಕೊಲ್ಟಾರ್ ಈ ಹಿಂದೆಯೂ ಹ್ಯಾಲಿ ವಿರುದ್ಧ ಜನಾಂಗೀಯ ಟೀಕೆಗಳನ್ನು ಮಾಡಿದ್ದರು.

ನಿಕ್ಕಿ ಹ್ಯಾಲಿ ಅವರ ಪರಿಚಯ

ನಿಕ್ಕಿ ಹ್ಯಾಲಿ 1972 ರಲ್ಲಿ ಅಮೆರಿಕಾದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ನಮ್ರತಾ ನಿಕ್ಕಿ ರಂಧವಾ. ಅಮೇರಿಕಾದಲ್ಲಿ ಪಿ.ಹೆಚ್.ಡಿ ಮಾಡಲು ಅವರ ತಂದೆ ಅಜಿತಸಿಂಹ ರಂಧವಾ ಇವತು ತಮ್ಮ ಪತ್ನಿ ರಾಜ್ ಕೌರ್ ಅವರೊಂದಿಗೆ 1960 ರಲ್ಲಿ ಪಂಜಾಬ್‌ನ ಅಮೃತಸರದಿಂದ ಅಮೆರಿಕಕ್ಕೆ ವಲಸೆ ಹೋದರು. ನಿಕ್ಕಿಯವರಿಗೆ ಇಬ್ಬರು ಸಹೋದರರು ಮತ್ತು 1 ಸಹೋದರಿ ಇದ್ದಾರೆ.

ಸಂಪಾದಕರ ನಿಲುವು

* ಇದೇ ನೋಡಿ ಅಮೆರಿಕಾದ ಜನರ ಮನಸ್ಥಿತಿ ! ಇಂತಹ ಅಮೇರಿಕನ್ನರೇ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳುತ್ತಿರುತ್ತಾರೆ !