ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ !

ಅಮೇರಿಕಾದ ಸಂಸತ್ತಿನಲ್ಲಿ ಮಸೂದೆ ಮಂಡಿಸಿದ ಅಮೆರಿಕಾದ ಇಬ್ಬರು ಸಂಸದರು !

( ಸೌಜನ್ಯ : Oneindia English)

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಸಾಂಸದ ಜೆಫ ಮರ್ಕೆಲೆ ಮತ್ತು ಬಿಲ ಹಾಗೆರ್ಟಿ ಇವರು ಅಮೇರಿಕಾದ ಸಂಸತ್ತಿನಲ್ಲಿ ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಘಟಕವೆಂದು ಘೋಷಿಸುವ ಮಸೂದೆಯನ್ನು ಅಮೇರಿಕಾದ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಅರುಣಾಚಲ ಪ್ರದೇಶದ ಮೇಲೆ ಚೀನಾ ಹಲವು ವರ್ಷಗಳಿಂದ ಹಕ್ಕು ಸಾಧಿಸುತ್ತಿದೆ. ಆ ಹಿನ್ನೆಲೆಯಲ್ಲಿ ಈ ಮಸೂದೆಗೆ ಹೆಚ್ಚಿನ ಮಹತ್ವ ಬಂದಿದೆ.

1. ಸಾಂಸದ ಜೆಫ್ ಮರ್ಕಲೆ ಅವರು, ಅಮೆರಿಕಾವು ಪ್ರಪಂಚದಾದ್ಯಂತ ಮುಕ್ತ ಮತ್ತು ಕಾನೂನಿನ ಆಧಾರದಲ್ಲಿ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

2. ಸಾಂಸದ ಬಿಲ ಹಾಗೆರ್ಟಿ ಇವರು ಮಾತನಾಡುತ್ತಾ, ಚೀನಾವು ಹಿಂದೂ ಮತ್ತು ಫೆಸಿಫಿಕ್‌ ಮಹಾಸಾಗರಗಳ ಸ್ವಾತಂತ್ರ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ ಇಂತಹ ಸಮಯದಲ್ಲಿ ಅಮೇರಿಕಾಗೆ ತನ್ನ ರಾಜಕೀಯ ಮಿತ್ರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಅಗತ್ಯವಿದೆ. ವಿಶೇಷವಾಗಿ ಭಾರತದೊಂದಿಗೆ ! ಅಮೆರಿಕಾ ಮತ್ತು ಭಾರತ ನಡುವಿನ ಸಹಕಾರವನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.