ದ್ರಮುಕನ ನಗರಸೇವಕ ಮತ್ತು ಅವರ ಸಹಚರರು ಸೈನಿಕನನ್ನು ಥಳಿಸಿದ್ದರಿಂದ ಸಾವು

೬ ಜನರ ಬಂಧನ ಹಾಗೂ ನಗರಸೇವಕ ಪರಾರಿ !

(ದ್ರಮುಕ ಅಂದರೆ ದ್ರಾವಿಡ ಮುನ್ನೇತ್ರ ಕಳಘಮ್ – ದ್ರಾವಿಡ ಪ್ರಗತಿ ಸಂಘ)

ಕೃಷ್ಣಗಿರಿ (ತಮಿಳುನಾಡು) – ಬಟ್ಟೆ ತೊಳೆಯುವ ವಿಚಾರದಲ್ಲಿ ವಾದ ನಿರ್ಮಾಣವಾಗಿ ದ್ರಮುಕನ ನಗರಸೇವಕ ಚಿನ್ನಾಸಾಮಿ ಮತ್ತು ಅವರ ಸಹಚರರು ಪ್ರಭಾಕರನ್ ಎಂಬ ಭಾರತೀಯ ಸೈನಿಕನಿಗೆ ಥಳಿಸಿ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ೬ ಜನರನ್ನು ಬಂಧಿಸಲಾಗಿದೆ ಮತ್ತು ನಗರಸೇವಕ ಪರಾರಿಯಾಗಿದ್ದಾರೆ. ಪೋಚಮಪಲ್ಲಿ ಗ್ರಾಮದಲ್ಲಿ ಪ್ರಭಾಕರನ್ ಮತ್ತು ಚಿನ್ನಾಸಾಮಿ ಇವರ ನಡುವೆ ಅವರ ಮನೆಯ ಸಮೀಪ ನೀರಿನ ತೊಟ್ಟಿಯಲ್ಲಿ ಬಟ್ಟೆ ತೊಳೆಯುವ ವಿಷಯದಲ್ಲಿ ವಿವಾದವಾಗಿತ್ತು. ಅನಂತರ ಚಿನ್ನಾಸಾಮಿಯು ೯ ಜನರನ್ನು ಕರೆತಂದು ಅದೇ ದಿನ ಸಂಜೆ ಪ್ರಭಾಕರನ್ ಮತ್ತು ಅವರ ಸಹೋದರ ಪ್ರಭು ಇವರಿಬ್ಬರಿಗೂ ಥಳಿಸಿದ್ದರು.

ಇದರಲ್ಲಿ ಪ್ರಭಾಕರನ್ ಗಾಯಗೊಂಡಿದ್ದರು. ನಂತರ ಅವರ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗಲೇ ಸಾವನ್ನಪ್ಪಿದರು. ಅಣ್ಣಾದ್ರಮುಕನ (ಅಖಿಲ ಭಾರತೀಯ ಅಣ್ಣಾ ದ್ರಾವಿಡ ಮುನ್ನೇತ್ರ ಕಳಘಮ್‌ನ) ವಕ್ತಾರ ಕೋವಯಿ ಸಾಥ್ಯನ್ ಇವರು, ಭಾರತೀಯ ಸೈನಿಕರ ಹತ್ಯೆಯ ಘಟನೆಯಿಂದ, ದ್ರಮುಖ ಪಕ್ಷ ಅಧಿಕಾರಕ್ಕೆ ಬಂದನಂತರ ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆ ಹದಗೆಟ್ಟಿದೆ ಎಂಬ ವಿಷಯ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಹೇಳಿದರು. ಸೈನಿಕರ ಹತ್ಯೆ ಮಾಡುವಷ್ಟು ಇವರಿಗೆ ಕೊಬ್ಬು ಬಂದಿದೆ. ಅಣ್ಣಾದ್ರಮುಖ ಹಾಗೂ ಇತರ ವಿರೋಧಿ ಪಕ್ಷಗಳ ಸೇಡು ತೀರಿಸಲು ಪೊಲೀಸರನ್ನು ವಶದಲ್ಲಿಟ್ಟುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಅಧಿಕಾರರೂಢ ಪಕ್ಷದ ನಗರಸೇವಕರ ಈ ಕುಕೃತ್ಯದಿಂದ ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದು ಅರಿವಾಗುತ್ತದೆ ! ಇಂತಹ ಜನಪ್ರತಿನಿಧಿಗಳಿರುವ ದ್ರಮುಕ ಪಕ್ಷದ ಮೇಲೆ ನಿಷೇಧ ಹೇರಲೇ ಬೇಕು !