ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು !

ಸುಪ್ರಸಿದ್ಧ ಭಜನ ಗಾಯಕ ಅನೂಪ ಜಲೋಟಾ ಇವರ ಬೇಡಿಕೆ

ಅನೂಪ ಜಲೋಟಾ

ಮುಂಬಯಿ – ಯಾವಾಗ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರವಾಯಿತೋ, ಆಗ ಪಾಕಿಸ್ತಾನ ಇಸ್ಲಾಂ ದೇಶವೆಂದು ಘೋಷಿತವಾಯಿತು; ಏಕೆಂದರೆ ಅಲ್ಲಿ ಹೆಚ್ಚು ಮುಸಲ್ಮಾನರಿದ್ದರು. ಭಾರತದಲ್ಲಿ ಹೆಚ್ಚು ಹಿಂದೂಗಳಿರುವಾಗ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಾಗಿತ್ತು. ಇರಲಿ, ಆಗ ಘೋಷಿಸಲಿಲ್ಲ, ಈಗ ಘೋಷಿಸಬೇಕು. ಎಂದು ಪ್ರಸಿದ್ಧ ಭಜನ ಗಾಯಕ ಅನೂಪ ಜಲೋಟಾ ಇವರು ಒಂದು ವಿಡಿಯೋ ಮೂಲಕ ಕೋರಿದ್ದಾರೆ.

ವಿಡಿಯೋದಲ್ಲಿ ಅವರು, ಜಗತ್ತಿನಲ್ಲಿ ಒಂದೂ ಹಿಂದೂ ರಾಷ್ಟ್ರ, ಹಿಂದೂ ದೇಶವಿಲ್ಲ. ಒಂದಾನೊಂದು ಕಾಲದಲ್ಲಿ ನೇಪಾಳ ಹಿಂದೂ ರಾಷ್ಟ್ರವಾಗಿತ್ತು; ಆದರೆ ಅದು ಶಾಶ್ವತವಾಗಿ ಉಳಿಯಲಿಲ್ಲ. ಅದನ್ನು ಹಿಂದೂ ದೇಶವೆಂದು ಹೇಳಲು ಸಾಧ್ಯವಿಲ್ಲ. ಈಗ ಭಾರತದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆಯ ಅಲೆಯೆದ್ದಿದೆ. ಈಗ ಜನರು ಸಂಘಟಿತರಾಗುತ್ತಿದ್ದಾರೆ. ಹಿಂದೂ ರಾಷ್ಟ್ರದಿಂದಾಗಿ ಯಾರಿಗೂ ಯಾವುದೇ ತೊಂದರೆಯಾಗುವುದಿಲ್ಲ. ಈಗ ಕೇವಲ ಘೋಷಣೆ ಮಾಡಬೇಕಾಗಿದೆ ಎಂದು ಹೇಳಿದರು.