ಬಾಂದಾ (ಉತ್ತರಪ್ರದೇಶ) ಇಲ್ಲಿ ಮಸೀದಿಯ ಅನಧಿಕೃತ ನವೀಕರಣವನ್ನು ತಡೆದ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು

ಬಾಂದಾ (ಉತ್ತರಪ್ರದೇಶ) – ಇಲ್ಲಿಯ ಪದ್ಮಾಕರ ಚೌಕದಲ್ಲಿ ಒಂದು ಮಸೀದಿಯ ನವೀಕರಣ ನಡೆಯುತ್ತಿರುವಾಗ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ನಿಲ್ಲಿಸಿದರು. ಅಲ್ಲಿದ್ದ ಸಾಮಗ್ರಿಗಳನ್ನು ಎಸೆದರು. ಈ ಸಮಯದಲ್ಲಿ ಪೊಲೀಸರು ಅವರನ್ನು ತಡೆದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಈ ಕಾಲಾವಧಿಯಲ್ಲಿ ಇಲ್ಲಿಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಪ್ರಕರಣದಲ್ಲಿ `ಬುಂದೇಲಖಂಡ ಇನ್ಸಾಫ ಸೇನೆ’ಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಲ್ಲಿ ಮನವಿಯನ್ನು ಕಳುಹಿಸಿ ನವೀಕರಣವನ್ನು ತಡೆಯುವಂತೆ ಕ್ರಮ ಕೈಕೊಳ್ಳುವಂತೆ ಕೋರಲಾಗಿದೆ. ಸರಕಾರ ಈಗ ಎರಡೂ ಪಕ್ಷದ ಜನರೊಂದಿಗೆ ಚರ್ಚೆ ನಡೆಸುತ್ತಿದೆ. ಅವರನ್ನು ದಂಡಾಧಿಕಾರಿಗಳ ಕಡೆಗೆ ಕರೆದೊಯ್ದು ಸೂಕ್ತ ಮಾರ್ಗವನ್ನು ಕಂಡು ಹಿಡಿಯಲಾಗುತ್ತಿದೆ.

(ಸೌಜನ್ಯ : Capital TV Uttar Pradesh)

ಬಜರಂಗದಳವು ಮಸೀದಿಯ ನವೀಕರಣಗೊಳಿಸುವಾಗ ಅನುಮತಿಯಿಲ್ಲದೇ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ತಡೆಯಲು ನಾವು ಪ್ರಯತ್ನಿಸಿದ್ದೇವೆ. ಸರಕಾರ ಈ ಅನಧಿಕೃತ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವ ಆವಶ್ಯಕತೆಯಿದೆ ಎಂದು ಹೇಳಿತು.

ಸಂಪಾದಕರ ನಿಲುವು

* ಇಂತಹ ಘಟನೆಗಳು ಸರಕಾರಕ್ಕೆ ನಾಚಿಕೆಗೇಡು ! ಯಾವ ಕೆಲಸವನ್ನು ಸರಕಾರ ಮಾಡಬೇಕಾಗಿತ್ತೋ, ಅದನ್ನು ಮಾಡಲು ಹಿಂದೂ ಸಂಘಟನೆಗಳಿಗೆ ಕಾನೂನು ಕೈಗೆತ್ತಿಕೊಂಡು ಮುಂದಾಳತ್ವವನ್ನು ಏಕೆ ವಹಿಸಬೇಕಾಗುತ್ತಿದೆ ? ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳಿಗೆ ಈ ರೀತಿ ಅಪೇಕ್ಷಿತವಿಲ್ಲ !