ಜೈಲಿನಲ್ಲಿದ್ದೇ ಚುನಾವಣೆಯಲ್ಲಿ ಸ್ಪರ್ಧೆ !
ಬೆಂಗಳೂರು – ಹಿಂದುತ್ವನಿಷ್ಠ ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆಯ ಪ್ರಕರಣದಲ್ಲಿ ಬಂಧಿತ ಆರೋಪಿ ಶಾಫಿ ಬೆಳ್ಳಾರೆ ಮುಂಬರಲಿರುವ ವಿಧಾನಸಭೆ ಚುನಾವಣೆಯನ್ನು ಪುತ್ತೂರು ವಿಧಾನಸಭೆ ಕ್ಷೇತ್ರದಿಂದ ಚುನಾವಣೆ ಎದುರಿಸಲು ಪಾಪ್ಯುಲರ ಫ್ರಂಟ ಆಫ್ ಇಂಡಿಯಾ ಈ ನಿಷೇಧಿಸಿರುವ ಜಿಹಾದಿ ಸಂಘಟನೆಯ ರಾಜಕೀಯ ಪಕ್ಷ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ (ಎಸ್.ಡಿ.ಪಿ.ಐ.ಯು) ಅಭ್ಯರ್ಥಿ ಎಂದು ಘೋಷಿಸಿದೆ. ಬಳಿಕ ಎಸ್. ಡಿ.ಪಿ.ಐ.ಗ ಸಂಘಟನೆ ಟೀಕೆಗೊಳಗಾಗಿದೆ.
SDPI Ticket To Shafi Bellare-ಎನ್ಐಎ ವಶದಲ್ಲಿರುವ ಶಾಫಿ ಬೆಳ್ಳಾರೆಗೆ ಎಸ್ ಡಿಪಿಐ ಟಿಕೆಟ್: ಅಶೋಕ್ ಆಕ್ರೋಶ
#shafibellare https://t.co/6bxL5hnVUA— vijaykarnataka (@Vijaykarnataka) February 13, 2023
1. ಶಾಫಿಯನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದನ್ನು ಎಸ್.ಡಿ.ಪಿ.ಐ. ಮುಖಂಡ ರಿಯಾಜ ಪರಂಗಿಪೆಟೆ ಇವರು ಬೆಂಬಲಿಸಿದ್ದಾರೆ. ಅವರು ಕಾನೂನಿನ ಚೌಕಟ್ಟಿನಲ್ಲಿಯೇ ಶಾಫಿ ಚುನಾವಣೆಯನ್ನು ಎದುರಿಸಿಲಿದ್ದಾರೆ. ಚುನಾವಣೆಯ ಸಮಯದಲ್ಲಿ ಸಿಗುವ ಜಾಮೀನಿನ ಕುರಿತು ಪ್ರಯತ್ನಿಸುತ್ತಿದ್ದೇವೆ. ಶಾಫಿ ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಕಾರ್ಯಕರ್ತರು ಪ್ರಚಾರ ಮಾಡುವರು.
2. ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರು ಮತ್ತು ಇಂಧನ ಸಚಿವರಾದ ಸುನೀಲ ಕುಮಾರ ಇವರು, ‘ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಆರೋಪ ಹೊತ್ತಿರುವ ಆರೋಪಿಗೆ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಭಯದ ವಾತಾವರಣ ಹರಡಿದೆ. ಸಮಾಜದಲ್ಲಿ ಉದ್ರೇಕ ನಿರ್ಮಾಣ ಮಾಡುವವರಿಗೆ ಪ್ರಜಾಪ್ರಭುತ್ವದ ಮಂದಿರವಾಗಿರುವ ವಿಧಾನಸಭೆಯಲ್ಲಿ ಪ್ರವೇಶ ನೀಡುವ ಕುಕೃತ್ಯವನ್ನು ಮಾಡುತ್ತಿರುವ ಎಸ್.ಡಿ.ಪಿ.ಐ.ನ ಭಯಾನಕ ಮುಖವಾಡ ಸ್ಪಷ್ಟಗೊಳಿಸುತ್ತದೆ. ಸಮಾಜದಲ್ಲಿ ಚರ್ಚೆ, ವಾದ ವಿವಾದಗಳು ನಡೆಯಬೇಕು. ಅದರ ಬದಲು ಗೊಂದಲ, ಭಯದ ವಾತಾವರಣ ನಿರ್ಮಾಣವಾಗಬಾರದು. ಹತ್ಯೆಯ ಆರೋಪ ಹೊಂದಿರುವ ಆರೋಪಿಗೆ ಅಭ್ಯರ್ಥಿ ಮಾಡುವುದೆಂದರೆ ಪುನಃ ಒತ್ತಡವನ್ನು ನಿರ್ಮಾಣ ಮಾಡುತ್ತಿದೆ. ಸಮಾಜದಲ್ಲಿರುವ ಸಜ್ಜನರಿಗೆ, ಒಳ್ಳೆಯ ಜನರಿಗೆ ಅವಕಾಶ ಸಿಗಬೇಕು. ಸಮಾಜದಲ್ಲಿರುವ ಅಪಾಯಕಾರಿ ಪ್ರವೃತ್ತಿಯನ್ನು ವಿರೋಧಿಸಬೇಕು, ಇಲ್ಲವಾದರೆ ಭಯೋತ್ಪಾದಕ ಎಸ್.ಡಿ.ಪಿ.ಐ. ತನ್ನ ಮುಖಂಡತ್ವದಲ್ಲಿ ಚುನಾವಣೆಯನ್ನು ಎದುರಿಸುವಂತೆ ಮಾಡಬಹುದು’, ಎಂದು ತೀವ್ರ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದರು.
(ಸೌಜನ್ಯ : Public TV)
ಸಂಪಾದಕೀಯ ನಿಲುವುಇದರಿಂದ ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಜಿಹಾದಿ ಸಂಘಟನೆಗಳ ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂಬುದು ಗಮನಕ್ಕೆ ಬರುತ್ತದೆ. ಈಗ ಈ ಪಕ್ಷವನ್ನು ಕೂಡ ನಿಷೇಧಿಸುವ ಆವಶ್ಯಕತೆಯಿದೆ ! |