ಅಮೇರಿಕಾದ ವಾಯು ಕ್ಷೇತ್ರದಲ್ಲಿ ‘ಏಲಿಯನ್ಸ್’ ಬರುತ್ತಿರುವುದನ್ನು ನಿರಾಕರಿಸಲಾಗದು ! – ಅಮೇರಿಕಾದ ಸೈನ್ಯಾಧಿಕಾರಿ

(‘ಏಲಿಯನ್ಸ್’ ಎಂದರೆ ಇತರ ಗ್ರಹ ನಿವಾಸಿ)

ಗ್ಲೆನ್ ವಾನಹರ್ಕ

ವಾಷಿಂಗ್ಟನ್ (ಅಮೆರಿಕಾ) – ಅಮೇರಿಕಾದ ವಾಯು ದಳವು ಕೆಡವಿದ ವಸ್ತು ‘ಏಲ್ಲಿಯನ್ಸ್’ ಗೆ (ಇತರ ಗ್ರಹನಿವಾಸಿ ಅವರಿಗೆ) ಸಂಬಂಧಪಟ್ಟದ್ದಾಗಿದೆ ಅಥವಾ ಇಲ್ಲ, ಇದು ಹೇಳಲು ಸಾಧ್ಯವಿಲ್ಲ; ಆದರೆ ಅ ಸಾಧ್ಯತೆ ನಿರಾಕರಿಸಲಾಗದು. ನಮ್ಮ ವಿಜ್ಞಾನಿಗಳು ಅದರ ಅಭ್ಯಾಸ ಮಾಡಿ ಯಾವ ಮಾಹಿತಿ ಮಂಡಿಸುವರು ಅದರ ಮೇಲೆ ಎಲ್ಲವೂ ಅವಲಂಬಿಸಿದೆ. ನಾವು ಆ ಕೆಲಸ ವಿಜ್ಞಾನಿಗಳಿಗೆ ಒಪ್ಪಿಸುವೆವು. ನಮ್ಮ ದೇಶದ ಎದುರು ಯಾವುದೇ ಜ್ಞಾತ ಅಜ್ಞಾತ ಅಪಾಯಗಳು ಗುರುತಿಸಿ ಅದರ ಮಾಹಿತಿ ಒಗ್ಗೂಡಿಸುತ್ತೇವೆ, ಎಂದು ‘ಯುಎಸ್ ನಾರ್ತ್ ಅಮೇರಿಕನ್ ಏರೋ ಸ್ಪೇಸ್ ಡಿಫೆನ್ಸ್ ಕಮಾಂಡ್’, ಮತ್ತು ‘ನಾರ್ದನ್ ಕಮಾಂಡ್’ ನ ಮುಖ್ಯಸ್ಥ ಏರ್ ಫೋರ್ಸ್ ಜನರಲ್ ಗ್ಲೆನ್ ವಾನಹರ್ಕ ಇವರು ಮಾಹಿತಿ ನೀಡಿದರು. ಇತ್ತೀಚಿಗೆ ಅಮೆರಿಕಾದ ಗಡಿಯಲ್ಲಿ ನುಗ್ಗಿರುವ ಚೀನಾದ ದೊಡ್ಡ ಬೇಲೂನನ್ನು ಕ್ಷಿಪಣಿಯಿಂದ ಕೆಡವಲಾಗಿತ್ತು. ಅದರ ನಂತರ ಕಳೆದ ಕೆಲವು ದಿನದಲ್ಲಿ ೪ ಅನುಮಾನಾಸ್ಪದ ವಸ್ತುಗಳು ಕೂಡ ಕೆಡವಲಾಯಿತು. ಈ ಹಿನ್ನೆಲೆಯಲ್ಲಿ ವಾನಹರ್ಕ್ ಇವರು ಈ ಮಾಹಿತಿ ನೀಡಿದರು.

ಅಮೇರಿಕಾದಿಂದ ಚೀನಾದ ೬ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ !

ಇನ್ನೊಂದು ಕಡೆಗೆ ಅಮೇರಿಕಾದಿಂದ ಚೀನಾದ ೬ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಈ ಕಂಪನಿಗಳು ಚೀನಾದ ಪೀಪಲ್ ಆರ್ಮಿಯ ಜೊತೆಗೆ ಸಂಬಂಧಪಟ್ಟಿರುವುದು ಎಂದು ಹೇಳಿದ್ದಾರೆ. ಅಮೇರಿಕಾದಿಂದ ಚೀನಾದ ಬೇಹುಗಾರಿಕೆ ನಡೆಸುವ ಬಲೂನಿನ ಪ್ರಕರಣದ ನಂತರ ಈ ತೀರ್ಮಾನ ತೆಗೆದುಕೊಂಡಿದೆ.