ರೋಮನಲ್ಲಿರುವ ಯೇಸುವಿನ ಮೂರ್ತಿಯ ಮೇಲೆ ವೈಷ್ಣವ ಬಟ್ಟು !

ಶಂಕರಾಚಾರ್ಯ ಜಗದ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ದಾವೆ

ಕವರ್ಧಾ (ಛತ್ತಿಸ್ ಗಢ) – ನಾನು ಕ್ರೈಸ್ತರನ್ನು ಕೇಳುತ್ತೇನೆ, ಅವರಿಗೆ ಯೇಸುವಿನ ಬಗ್ಗೆ ಎಷ್ಟು ಮಾಹಿತಿ ಇದೆ ? ರೋಮನಲ್ಲಿ ಇರುವ ಯೇಸುವಿನ ಮೂರ್ತಿಯ ಮೇಲೆ ವೈಷ್ಣವರು ಹಚ್ಚುವಂತಹ ಬಟ್ಟು ಇದೆ. ಇಂದಿಗೂ ಕೂಡ ಈ ಮೂರ್ತಿ ಅಲ್ಲಿ ಅದಕ್ಕೆ ಹೊದಿಕೆ ಹೊದಿಸಿ ಇಟ್ಟಿದ್ದಾರೆ ಮತ್ತು ಆ ಹೊದಿಕೆ ತೆಗೆದಿಲ್ಲ, ಎಂದು ಪುರಿಯ ಪೂರ್ವಾಮ್ನಯ ಗೋವರ್ಧನ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಅವರ ಮಾರ್ಗದರ್ಶನದಲ್ಲಿ ದಾವೆ ಮಾಡಿದರು. ಅವರು ಯೇಸುವಿನ ಹೆಸರಿನಲ್ಲಿ ಕ್ರೈಸ್ತರನ್ನಾಗಿ ಪರಿವರ್ತಿಸುವ ಜನರಿಗೆ ಯೇಸುವಿನ ಇತಿಹಾಸ ತಿಳಿದಿಲ್ಲ ಎಂದು ಕೂಡ ಹೇಳಿದರು. ಯೇಸು ಕೆಲವು ವರ್ಷ ಎಲ್ಲಿದ್ದನು, ಇದು ಕೂಡ ಅವರಿಗೆ ತಿಳಿದಿಲ್ಲ. ಏಸು ೩ ವರ್ಷ ಭಾರತದಲ್ಲಿ ವಾಸಿಸಿದ್ದರು, ಎಂದು ಶಂಕರಚಾರ್ಯರು ದಾವೆ ಮಾಡಿದರು.

ಶಂಕರಾಚಾರ್ಯರು ಮಾತು ಮುಂದುವರಿಸಿ, ಅಂದಿನ ಸರಸಂಘಚಾಲಕ ಸುದರ್ಶನ ನನ್ನ ಬಳಿ ಬಂದಿದ್ದರು. ಅವರು ನನಗೆ ಏಸುವಿನ ಕುರಿತು ಇತಿಹಾಸ ಹೇಳಿದರು. ಅವರು, ಯಾವಾಗ ಯೇಸುವನ್ನು ಗಲ್ಲಿಗೇರಿಸಿದ್ದರು, ಆಗ ಜನರಿಗೆ ಯೇಸು ಜೀವಂತ ಉಳಿಯಲು ಸಾಧ್ಯವಿಲ್ಲ ಎಂದು ಅನಿಸಿತು; ಆದರೆ ಅವರು ಜೀವಂತ ಉಳಿದರು ಮತ್ತು ನಂತರ ಅವರು ಭಾರತಕ್ಕೆ ಬಂದರು. ಅವರು ಜಮ್ಮು-ಕಾಶ್ಮೀರದಲ್ಲಿ ವಾಸವಾಗಿದ್ದರು. ಅಲ್ಲಿ ಅವರ ಸಮಾಧಿ ಇದೆ. ಈ ಇತಿಹಾಸದ ಬಗ್ಗೆ ನೀವು ಏನು ಹೇಳುವಿರಿ ? ಬೈಬಲ್ ನಲ್ಲಿನ ಗೀತೆಯಲ್ಲಿನ ಕೆಲವು ವಿಷಯ ತೆಗೆದುಹಾಕಿದ್ದಾರೆ, ಈಗ ಅದರಲ್ಲಿ ಏನು ಉಳಿದಿದೆ ? ಬೈಬಲ್ಲಿನ ಪ್ರಕಾರ ಸೃಷ್ಟಿ ೬ ಸಾವಿರ ವರ್ಷ ಹಳೆಯದು, ಮತ್ತೆ ಗೀತೆಯ ಪ್ರಕಾರ ಅದು ೨ ಕೋಟಿ ವರ್ಷ ಪ್ರಾಚೀನವಾಗಿದೆ ಎಂದು ಹೇಳಿದರು.

ಸನಾತನ ಧರ್ಮದಲ್ಲಿ ಜನ್ಮದಿಂದ ಮೀಸಲಾತಿ ಅಸ್ತಿತ್ವದಲ್ಲಿ !

ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಮೀಸಲಾತಿಯ ಬಗ್ಗೆ ಮಾತನಾಡುತ್ತಾ, ಸನಾತನ ಧರ್ಮದಲ್ಲಿ ಮೀಸಲಾತಿಗೆ ಸಂಪೂರ್ಣ ಸ್ಥಾನ ಇದೆ. ಪ್ರತಿಯೊಂದು ವ್ಯಕ್ತಿಗೆ ಜನನದ ಹುಟ್ಟಿನಿಂದಲೇ ಪಾಲನ ಪೋಷಣೆಯ ಮೀಸಲಾತಿ ಮಾಡಲಾಗಿದೆ. ಇದಕ್ಕಿಂತ ಯೋಗ್ಯ ಮೀಸಲಾತಿ ಏನು ಇರಲು ಸಾಧ್ಯ ? ಅಯೋಗ್ಯ ವ್ಯಕ್ತಿ ಏನಾದರೂ ಮಹತ್ವದ ಸ್ಥಾನಕ್ಕೆ ಹೋದರೆ, ಆಗ ದೇಶದ ಉನ್ನತಿ ಹೇಗೆ ಆಗಲು ಸಾಧ್ಯ ? ಎಲ್ಲರಿಗೂ ಯೋಗ್ಯವನ್ನಾಗಿ ರೂಪಿಸಬೇಕು; ಆದರೆ ಮೀಸಲಾತಿ ಹೆಸರಿನಲ್ಲಿ ಅಯೋಗ್ಯ ವ್ಯಕ್ತಿ ಏನಾದರೂ ಮಹತ್ವದ ಸ್ಥಾನದಲ್ಲಿ ಕುಳಿತರೆ ದೇಶಕ್ಕೆ ಹಾನಿ ಆಗುವುದಿಲ್ಲವೇ ? ಮೀಸಲಾತಿಯಿಂದ ಪ್ರತಿಭೆಯ ಹಾನಿ, ಪ್ರಗತಿಯ ಹಾನಿ ಹಾಗೂ ಸೇಡಿನ ಭಾವನೆ ನಿರ್ಮಾಣವಾಗುತ್ತದೆ. ಮೀಸಲಾತಿಯಿಂದ ದೇಶ ಸ್ವಾತಂತ್ರ್ಯ ಕಳೆದುಕೊಳ್ಳುವುದು.

ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರಿಗೆ ಶಂಕರಚಾರ್ಯ ಎಂದು ಒಪ್ಪಲು ನಿರಾಕರಣೆ !

ರಣವೀರಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಜ್ಯೊತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶಾನಂದ ಸರಸ್ವತಿಯವರನ್ನು ಶಂಕರಾಚಾರ್ಯ ಎಂದು ಹೇಳಲು ನಿರಾಕರಿಸಿದರು. ಅವರು, ಅವರ (ಅವಿಮುಕ್ತೇಶ್ವರನಂದ ಇವರ) ಗುರುಗಳು ೯೯ ವರ್ಷದವರಾಗಿರುವಾಗ ದೇಹತ್ಯಾಗ ಮಾಡಿದರು; ಆದರೆ ಅದಕ್ಕೂ ಮೊದಲೇ ಅವರು ಅವರ ಸ್ಥಾನ ಯಾರಿಗೂ ನೀಡಲಿಲ್ಲ. ಈಗ ಇಲ್ಲಿ ಪ್ರಶ್ನೆ ನಿರ್ಮಾಣವಾಗುವುದೆಂದರೇ ಯಾರು ಶಂಕರಚಾರ್ಯರೆಂದು ತಿರುಗಾಡುತ್ತಿದ್ದರೇ ಮತ್ತು ಅದು ನಿಜವು ಕೂಡ ಇದ್ದರೂ ಘನತೆಯ ಮೆಲೆ ಅತಿಕ್ರಮಣ ಮಾಡುತ್ತಿದ್ದರಿಂದ ನಮ್ಮ ದೃಷ್ಟಿಯಿಂದ ಅವರು ಶಂಕರಚಾರ್ಯರು ಇದ್ದರೂ ಕೂಡ ಒಪ್ಪುವುದು ಯೋಗ್ಯವಲ್ಲ ಎಂದು ಹೇಳಿದರು.

ಅಮರಕಂಟಕ (ಮಧ್ಯಪ್ರದೇಶ) ಇಲ್ಲಿ ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದ ಇವರು ಪತ್ರಕರ್ತರಿಗೆ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಹೇಳಿಕೆಯ ಬಗ್ಗೆ ಕೇಳಿದಾಗ, ನಮ್ಮ ಗುರುಗಳು ನನ್ನನ್ನು ನೇಮಕಗೊಳಿಸದಿದ್ದರೂ ಅವರ ಎಲ್ಲಾ ಶಿಷ್ಯರು ನನಗೆ ಶಂಕರಾಚಾರ್ಯರ ರೂಪದಲ್ಲಿ ಸ್ವೀಕರಿಸಿದ್ದಾರೆ. ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಇವರು ನಾನು ಯಾವ ಕಟ್ಟಪಾಡುಗಳನ್ನು ಉಲ್ಲಂಘಿಸಿದ್ದೇನೆ ಎಂಬುದನ್ನು ಹೇಳಬಹುದು. ಯಾವುದೇ ಶಂಕರಾಚಾರ್ಯರ ಕಟ್ಟುಪಾಡುಗಳ ಮೇರೆಮೀರಿ ಆಚರಣೆಯು ಅವರು ಮತ್ತು ನಾನು ಇಬ್ಬರೂ ಕೂಡ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.