ನಕ್ಸಲರಿಗೆ ರಾಜಕೀಯ ಪಕ್ಷದಿಂದ ಆಶ್ರಯ ! – ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ, ಗೋವರ್ಧನ ಪುರಿ ಪೀಠ

ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಕವರ್ಧಾ (ಛತ್ತಿಸ್ಗಢ) – ದೇಶಾದ್ಯಂತ ನಕ್ಸಲರ ಸಂಘಟನೆಗಳಿಗೆ ರಾಜಕೀಯ ಪಕ್ಷಗಳ ಬೆಂಬಲವಿದೆ. ನಕ್ಸಲರಿಗೆ ರಾಜಕೀಯ ಪಕ್ಷಗಳಿಂದ ರಾಜಕೀಯ ಆಶ್ರಯ ಸಿಕ್ಕಿದೆ, ಎಂದು ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಹೇಳಿದರು. ಜಗದಲಪುರ ಇಲ್ಲಿಯ ಧರ್ಮ ಸಂಸತ್ತಿನ ಸಮಯದಲ್ಲಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರ ನೀಡುವಾಗ ಈ ಹೇಳಿಕೆ ನೀಡಿದರು. ಅವರು ಮಾತು ಮುಂದುವರಿಸಿ, ”ಆಡಳಿತದಲ್ಲಿರುವ ಪಕ್ಷ ಮತ್ತು ವಿರೋಧಿ ಪಕ್ಷದವರಿಂದ ನಕ್ಸಲರಿಗೆ ನೀಡುವ ಬೆಂಬಲ ನಿಲ್ಲಿಸಿದರೇ ದೇಶದಲ್ಲಿ ಎಷ್ಟು ನಕ್ಸಲರು ಉಳಿಯುವರು ? ಹೀಗೆ ಮಾಡಿದರೆ ನಕ್ಸಲವಾದಿಗಳು ತನ್ನಿಂದ ತಾನೇ ಕೊನೆಗೊಳ್ಳುವುದು. ಎಲ್ಲಾ ರಾಜಕೀಯ ಪಕ್ಷ ಅವರನ್ನು ಪೋಷಿಸುತ್ತಿದೆ.” ಎಂದು ಹೇಳಿದರು.

ಕಾಂಗ್ರೆಸ್ಸಿನ ಸಚಿವರಿಂದ ಶಂಕರಾಚಾರ್ಯರ ಹೇಳಿಕೆಗೆ ಬೆಂಬಲ !

ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಈ ಹೇಳಿಕೆಗೆ ಕಾಂಗ್ರೆಸ್ಸಿನ ಕೃಷಿ ಸಚಿವ ರವೀಂದ್ರ ಚೌಬೇ ಇವರು ಬೆಂಬಲಿಸಿದ್ದಾರೆ. ಅವರು ಪತ್ರಕರ್ತರ ಜೊತೆ ಮಾತನಾಡುತ್ತಾ, ”ಗೋವರ್ಧನ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಇವರು ಸನಾತನ ಧರ್ಮದ ಮುಖ್ಯಸ್ಥರಿದ್ದಾರೆ. ಅವರ ಹೇಳಿಕೆಯನ್ನು ಗೌರವಿಸುವುದು ಅವಶ್ಯಕವಾಗಿದೆ. ಬೇರೆ ಬೇರೆ ಪ್ರಾಂತಗಳಲ್ಲಿ ನಕ್ಸಲರ ಚಟುವಟಿಕೆ ಹೆಚ್ಚುವುದರ ಹಿಂದಿನ ಕಾರಣ ಬೇರೆ ಬೇರೆ ಆಗಿದೆ. ಈ ಸಮಸ್ಯೆ ಬಗೆಹರಿಸುವುದಕ್ಕಾಗಿ ಎಲ್ಲಾ ರಾಜ್ಯಗಳಲ್ಲಿ ಸಭೆಗಳು ಕೂಡ ನಡೆಯುತ್ತದೆ. ಛತ್ತೀಸ್ ಗಡದಲ್ಲಿ ಕಾಂಗ್ರೆಸ್ಸಿನ ಸರಕಾರ ಬಂದ ನಂತರ ನಕ್ಸಲರ ಚಟುವಟಿಕೆ ಕೆಲವು ಕ್ಷೇತ್ರಕ್ಕೆ ಸೀಮಿತಗೊಂಡಿದೆ. ರಾಜ್ಯದಲ್ಲಿ ನಕ್ಸಲರು ಈಗ ಅಳಿವಿನ ಅಂಚಿನಲ್ಲಿ ಇದ್ದಾರೆ. ಈಗಲೂ ಕೂಡ ಬಿಹಾರ್, ಜಾರ್ಖಂಡ್ ಮುಂತಾದ ರಾಜ್ಯಗಳಲ್ಲಿ ನಕ್ಸಲರ ಚಟುವಟಿಕೆ ನಡೆಯುತ್ತವೆ. ಇಲ್ಲಿಯ ರಾಜಕೀಯ ಪರಿಸ್ಥಿತಿಯ ಬಗ್ಗೆ ನಾನು ಮಾತನಾಡಲು ಇಚ್ಚಿಸುವುದಿಲ್ಲ; ಆದರೆ ರಾಜಕೀಯ ಪಕ್ಷದವರು ಏನಾದರೂ ನಕ್ಸಲವಾದ ನಾಶ ಮಾಡುವುದು ನಿಶ್ಚಯಿಸಿದರೆ ಆಗ ಅದು ನಾಶವಾಗಬಹುದು. ಛತ್ತೀಸ್ ಗಡದಲ್ಲಿ ಕಾಂಗ್ರೆಸ್ಸಿನ ಭೂಪೇಂದ್ರ ಬಘೆಲ ಸರಕಾರ ೪ ವರ್ಷದಲ್ಲಿ ರಾಜ್ಯದಲ್ಲಿನ ನಕ್ಸಲ ಪೀಡಿತ ಬಸ್ತರ ಜಿಲ್ಲೆಯಲ್ಲಿನ ನಕ್ಸಲ ಚಟುವಟಿಕೆಗೆ ಕಡಿವಾಣ ಹಾಕಿದ್ದಾರೆ. (ಛತ್ತೀಸ್ ಗಡದಲ್ಲಿ ನಕ್ಸಲ್ ವಾದ ಮುಗಿದಿದ್ದರೆ ಇಲ್ಲಿ ಭಾಜಪದ ಮುಖಂಡನ ಹತ್ಯೆ ಏಕೆ ಆಯಿತು ? ಶಂಕರಾಚಾರ್ಯರ ಹೇಳಿಕೆಗೆ ರಾಜಕೀಯ ಬಣ್ಣ ಕಟ್ಟಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕಾಂಗ್ರೆಸ್ಸಿಗರು ! – ಸಂಪಾದಕರು) ಶಂಕರಾಚಾರ್ಯರು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶ ಇದೆ. ಛತ್ತೀಸ್ ಗಡದಲ್ಲಿ ಕಳೆದ ೨೫ ವರ್ಷದಲ್ಲಿ ಭಾಜಪದ ಡಾ. ರಮಣ ಸಿಂಹ ಇವರ ಸರಕಾರ ಇರುವಾಗ ಅವರು ನಕ್ಸಲರ ಚಟುವಟಿಕೆಗಳನ್ನು ಏಕೆ ನಿಲ್ಲಿಸಲಿಲ್ಲ ? ಬಸ್ತರದಲ್ಲಿ ಭಾಜಪ ಅಧಿಕಾರದಲ್ಲಿ ಇರುವಾಗ ನಕ್ಸಲರು ಸಮಾಂತರ ಸರಕಾರ ನಡೆಸುತ್ತಿದ್ದರು. (ಕಾಂಗ್ರೆಸ್ ಅಧಿಕಾರಕ್ಕೆ ಇರುವಾಗ ಭಾರತದಲ್ಲಿನ ನಕ್ಸಲವಾದ ಅಂತ್ಯಹಾಡಲು ಪ್ರಯತ್ನ ಮಾಡಿಲ್ಲ ? ಇದರ ಉತ್ತರ ಕೂಡ ಚೌಬೇಯವರು ನೀಡಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಈ ಪರಿಸ್ಥಿತಿ ಪ್ರಜಾಪ್ರಭುತ್ವದ ಹೀನಾಯ ಸೋಲು, ಹೀಗೆ ಸಾಮಾನ್ಯರಿಗೆ ಅನಿಸುತ್ತದೆ !