‘ಇಸ್ರೋ’ ದಿಂದ ಅತ್ಯಂತ ಚಿಕ್ಕ ರಾಕೇಟನ ಯಶಸ್ವಿ ಉಡಾವಣೆ

ಅಂತರಿಕ್ಷದಲ್ಲಿ 3 ಉಪಗ್ರಹ ಉಡಾವಣೆ !

ಶ್ರೀಹರಿಕೋಟಾ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಅಂದರೆ ‘ಇಸ್ರೋ’ `ಎಸ್.ಎಸ್.ಎಲ್.ವಿ.–ಡಿ 2’ ಈ ಹೊಸ `ಸ್ಮಾಲ್ ಸ್ಯಾಟಲೈಟ್ ಲಾಂಚಿಂಗ ವೆಯಿಕಲ್’ ಅನ್ನು ಶ್ರೀಹರಿಕೋಟಾದಲ್ಲಿರುವ ‘ಸತೀಶ ಧವನ ಲಾಂಚ್ ಸೆಂಟರ್’ ದಿಂದ ಫೆಬ್ರವರಿ 10 ರಂದು ಬೆಳಿಗ್ಗೆ 9 ಗಂಟೆ 18 ನಿಮಿಷಗಳಿಗೆ ಉಡಾವಣೆಯಾಯಿತು. ಇದರ 15 ನಿಮಿಷಗಳ ಉಡಾವಣೆಯಲ್ಲಿ 3 ಉಪಗ್ರಹಗಳನ್ನು ಹಾರಿಸಲಾಯಿತು. ಈ ಉಪಗ್ರಹದಲ್ಲಿ ಅಮೇರಿಕಾದ ‘ಜಾನುಸ-1’, ಚೆನ್ನೈನ ‘ಸ್ಪೇಸ ಸ್ಟಾರ್ಟ-ಅಪ್’ನ ‘ಆಜಾದಿ ಸ್ಯಾಟ-2’ ಮತ್ತು `ಇಸ್ರೋ’ ದ ‘ಈಒಎಸ್-7’ ಸೇರಿದೆ. ‘ಎಸ್.ಎಸ್.ಎಲ್.ವಿ.–ಡಿ 2’ವು ಪೃಥ್ವಿಯ ಕೆಳಗಿನ ಕಕ್ಷೆಯಲ್ಲಿ 15 ನಿಮಿಷಗಳ ವರೆಗೆ ಉಡಾವಣೆ ನಡೆಸಿತು. ಅಲ್ಲಿ ಈ ರಾಕೆಟ 450 ಕಿ.ಮಿ. ದೂರದ ಕಕ್ಷೆಯಲ್ಲಿ ಉಪಗೃಹ ಹಾರಿಸಿತು.