ಇತರ ಮುಸಲ್ಮಾನರ ಕಿರುಕುಳಕ್ಕೆ ಬೇಸತ್ತು ನಿರ್ಣಯ !
ಮುರೈನಾ (ಮಧ್ಯಪ್ರದೇಶ) – ನಾನು ನನ್ನ ಭೂಮಿ ಮಸಿದಿಗಾಗಿ ನೀಡುವುದಿಲ್ಲ, ಅಲ್ಲಿ ಹಿಂದೂ ಬಾಂಧವರು ದೇವಸ್ಥಾನವನ್ನು ಕಟ್ಟಲಿ ಎಂದು ಇಲ್ಲಿಯ ಚೌರಾ ಪ್ರದೇಶದ ನಿವಾಸಿ ಯೂಸುಫ್ ಖಾನ್ ಇವರು ಹಿಂದುಗಳಿಗೆ ಕರೆ ನೀಡಿದರು. ಇತರ ಕೆಲವು ಮುಸಲ್ಮಾನ ವ್ಯಕ್ತಿಗಳಿಂದ ಆಗುತ್ತಿದ್ದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಖಾನ್ ಇವರು ಈ ನಿರ್ಣಯ ತೆಗೆದುಕೊಂಡರು. ಚೌರನ ಮಸೀದಿಯ ಹೊರಗೆ ಖಾನ್ ಇವರ ಮನೆ ಇದೆ; ಆದರೆ ಮಸೀದಿಯ ವ್ಯವಸ್ಥಾಪಕರು ಖಾನ್ ಇವರ ಮನೆ ಕೆಡವಿ ಆ ಭೂಮಿ ಮಸೀದಿಗಾಗಿ ಪಡೆಯುವ ಹುನ್ನಾರ ಮಾಡಿದ್ದರು. ಇದಕ್ಕೆ ಖಾನ್ ಇವರು ವಿರೋಧಿಸಿದರು. ಆದ್ದರಿಂದ ಖಾನ್ ಇವರು ಈ ಭೂಮಿಯನ್ನು ದೇವಸ್ಥಾನಕ್ಕಾಗಿ ನೀಡುವುದು ಹಾಗೂ ದೇವಸ್ಥಾನ ಕಟ್ಟುವುದಕ್ಕೆ ಸಹಾಯ ಮಾಡುವ ತಯಾರಿ ತೋರಿಸಿದರು. ‘ಮಸೀದಿಯ ವ್ಯವಸ್ಥಾಪಕರು ನನಗೆ ಕೋಟ್ಯಾಂತರ ರೂಪಾಯಿ ನೀಡಿದರೂ ನಾನು ನನ್ನ ಭೂಮಿ ಮಸೀದಿಗಾಗಿ ನೀಡುವುದಿಲ್ಲ’, ಎಂದು ಅವರು ದೃಢ ನಿರ್ಧಾರ ತೆಗೆದುಕೊಂಡರು.
ದಾಳಿ ನಡೆದರೂ ಪೊಲೀಸರಿಂದ ನಿರ್ಲಕ್ಷ !
ಯೂಸುಫ್ ಖಾನ್ ಇವರು, ಮಸೀದಿಗೆ ನಮಾಜ್ ಗೆ ಬರುವ ಕೆಲವು ಜನರು ಅವರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಕೋರರಿಂದ ರಕ್ಷಿಸಿಕೊಳ್ಳಲು ಅವರು ಕೈಯಲ್ಲಿ ಜೀವ ಹಿಡಿದುಕೊಂಡು ಅಡಗಿ ಕುಳಿತಿದ್ದರು. ಇದರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದರು; ಆದರೂ ಪೊಲೀಸರಿಂದ ಇಲ್ಲಿಯವರೆಗೆ ಇದರ ಬಗ್ಗೆ ಯಾರ ಮೇಲೆ ಕೂಡ ಕ್ರಮ ಕೈಗೊಂಡಿಲ್ಲ .
ಹಿಂದೂ ಧರ್ಮ ಸ್ವೀಕರಿಸಲು ಸಿದ್ಧ !
ಇತರ ಮುಸಲ್ಮಾನರು ನೀಡುತ್ತಿರುವ ಕಿರುಕುಳದಿಂದ ಖಾನ್ ಇವರು ಈಗ ಹಿಂದೂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಕಳೆದ ೩ ವರ್ಷಗಳಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಈಗ ನಾನು ಹಿಂದೂ ಧರ್ಮ ಸ್ವೀಕರಿಸುತ್ತೇನೆ ಎಂದು ಹೇಳಿದರು.
ಸಂಪಾದಕರ ನಿಲುವುತಮ್ಮ ಧರ್ಮ ಬಾಂಧವರನ್ನೇ ಕಿರುಕುಳ ನೀಡುವ ಮುಸಲ್ಮಾನರು ಹಿಂದುಗಳ ಜೊತೆ ಹೇಗೆ ವರ್ತಿಸಬಹುದು ? ಇದರ ಯೋಚನೆ ಮಾಡದೆ ಇರುವುದೇ ಒಳಿತು ! |