ಪಾಕಿಸ್ತಾನಕ್ಕೆ ಸಾಲ ನೀಡದೆಯೇ ಹಿಂತಿರುಗಿದ ಅಂತರಾಷ್ಟ್ರೀಯ ಹಣಕಾಸು ನಿಧಿಯ ತಂಡ !

ಪಾಕಿಸ್ತಾನವು ಶರತ್ತುಗಳನ್ನು ಒಪ್ಪದಿರುವ ಪರಿಣಾಮ !

ಇಸ್ಲಾಮಾಬಾದ (ಪಾಕಿಸ್ತಾನ) – ಆರ್ಥಿಕ ದಿವಾಳಿಯ ಹೊಸ್ತಿಲಲ್ಲಿ ನಿಂತಿರುವ ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಪಾಕಿಸ್ತಾನಕ್ಕೆ ಹೋಗಿ ೧೦ ದಿನದಿಂದ ಅಲ್ಲೇ ಉಳಿದಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ ತಂಡ ಪಾಕಿಸ್ತಾನಕ್ಕೆ ಒಂದು ಬಿಡಿಗಾಸು ಕೊಡದೆ ಹಿಂತಿರುಗಿದೆ. ಕಳೆದ ೧೦ ದಿನಗಳಿಂದ ಪಾಕಿಸ್ತಾನ ಸರಕಾರ ಮತ್ತು ಈ ತಂಡದಲ್ಲಿ ನಡೆದಿರುವ ಚರ್ಚೆಯಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗಲಿಲ್ಲ ಆದ್ದರಿಂದ ಪಾಕಿಸ್ತಾನಕ್ಕೆ ಯಾವುದೇ ಸಹಾಯ ಸಿಗಲಿಲ್ಲ. ಹಣಕಾಸು ನಿಧಿಯಿಂದ ಪಾಕಿಸ್ತಾನಕ್ಕೆ ಅನೇಕ ಒಪ್ಪಂದಗಳು ಮತ್ತು ಶರತ್ತುಗಳು ವಿಧಿಸಲಾಗಿತ್ತು. ಅದರಲ್ಲಿ ರಕ್ಷಣೆ ಖರ್ಚಿನಲ್ಲಿ ಕಡಿತಗೊಳಿಸುವುದು, ಪೆಟ್ರೋಲ್ ಮತ್ತು ಡೀಸೆಲನ ಬೆಲೆ ಹೆಚ್ಚಿಸುವುದು ಮುಂತಾದರ ಸಮಾವೇಶ ಇತ್ತು; ಆದರೆ ಸರಕಾರಕ್ಕೆ ಅದು ಒಪ್ಪಿಗೆ ಆಗದಿದ್ದರಿಂದ ಹಣಕಾಸು ನಿಧಿಯ ತಂಡ ಹಿಂತಿರುಗಿ ಹೋಗಿದೆ ಎಂದು ಹೇಳಲಾಗುತ್ತಿದೆ.

ಸಂಪಾದಕರ ನಿಲುವು

ಪಾಕಿಸ್ತಾನಕ್ಕೆ ಹಣಕಾಸು ನಿಧಿಯಿಂದ ದೊಡ್ಡ ಅಪೇಕ್ಷೆ ಇತ್ತು, ಈಗ ಅದು ವ್ಯರ್ಥವಾಗಿದ್ದರಿಂದ ಈಗ ಪಾಕಿಸ್ತಾನಕ್ಕೆ ದಿವಾಳಿತನದಿಂದ ಯಾರು ತಡೆಯಲು ಸಾಧ್ಯವಿಲ್ಲ, ಇದು ಸ್ಪಷ್ಟವಾಗಿದೆ !