ಶೀಘ್ರದಲ್ಲೇ ಲಖ್ನೌ ಹೆಸರನ್ನು ಬದಲಾಯಿಸಲಾಗುವುದು !

ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಇವರ ಘೋಷಣೆ !

ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್

ಭದೊಹಿ (ಉತ್ತರಪ್ರದೇಶ) – ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಇವರು ರಾಜ್ಯದ ರಾಜಧಾನಿ ಲಖ್ನೌನ ಹೆಸರನ್ನು ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಪಾಠಕ್ ಇವರು, ಲಖ್ನೌ ಲಕ್ಷ್ಮಣನ ನಗರವಾಗಿದೆ, ಈ ವಿಷಯ ಎಲ್ಲರಿಗೂ ತಿಳಿದಿದೆ, ಆದ್ದರಿಂದ ಸರಕಾರ ಶೀಘ್ರದಲ್ಲೇ ಈ ನಗರಕ್ಕೆ ಮರು ನಾಮಕರಣ ಮಾಡಲಿಕ್ಕಿದೆ, ಎಂದು ಹೇಳಿದರು.

ಭಾಜಪದ ಸಂಸದ ಸಂಗಮ ಗುಪ್ತಾ ಇವರು ಕೇಂದ್ರೀಯ ಗೃಹ ಸಚಿವ ಅಮೀತ್ ಶಾಹ ಇವರಿಗೆ ಪತ್ರ ಬರೆದು ಲಖ್ನೌ ಈ ಹೆಸರನ್ನು ಬದಲಾಯಿಸುವ ಬಗ್ಗೆ ವಿನಂತಿಸಿದ್ದಾರೆ. ಲಖ್ನೌ ನಗರವನ್ನು ತ್ರೇತಾಯುಗದಲ್ಲಿ ಭಗವಾನ ರಾಮನು ತನ್ನ ಸಹೋದರ ಲಕ್ಷ್ಮಣನಿಗೆ ಉಡುಗೊರೆಯಾಗಿ ಕೊಟ್ಟಿದ್ದರಿಂದ ಅದನ್ನು ‘ಲಖನಪುರ’ ಅಥವಾ ‘ಲಕ್ಷ್ಮಣಪುರ’ ಎಂದು ಗುರುತಿಸಲಾಗುತ್ತಿತ್ತು. ೧೮ ನೇ ಶತಮಾನದಲ್ಲಿ ನವಾಬ ಅಸಫ್-ಉದ್-ದೌಲಾ ಇವನು ಆ ಹೆಸರನ್ನು ಬದಲಾಯಿಸಿ ‘ಲಖ್ನೌ’ ಎಂದು ಮಾಡಿದ್ದನು ಎಂದು ಹೇಳಿದರು.

ಹೈದ್ರಾಬಾದನ್ನು ಭಾಗ್ಯನಗರ ಮಾಡಬೇಕೆಂಬ ಬೇಡಿಕೆ ಆರಂಭವಾಗಿದೆ !

ತೆಲಂಗಾಣದ ರಾಜಧಾನಿ ಹೈದ್ರಾಬಾದ್ ಹೆಸರನ್ನು ಬದಲಾಯಿಸಿ ಭಾಗ್ಯನಗರ ಮಾಡಬೇಕೆಂಬ ಬೇಡಿಕೆಯೂ ಕಳೆದ ಹಲವಾರು ವರ್ಷಗಳಿಂದ ಬರುತ್ತಿದೆ. ಜುಲೈ ೨೦೨೨ ರಲ್ಲಿ ಭಾಜಪದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂಬೋಧಿಸುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆಲಂಗಾಣದ ರಾಜಧಾನಿಯನ್ನು ‘ಭಾಗ್ಯನಗರ’ ಎಂದು ಉಲ್ಲೇಖಿಸಿದ್ದರು.