ಬಿಹಾರ ಪಿ.ಎಫ್.ಐ. ಅಡ್ಡೆಯಾಗಿದೆ. ಅಲ್ಲಿ ನಡೆಯುತ್ತಿರುವ ಜಿಹಾದಿ ಕೃತ್ಯವನ್ನು ಬುಡಸಮೇತ ನಷ್ಟಗೊಳಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಆವಶ್ಯಕತೆ !
ಪಾಟಲಿಪುತ್ರ – ಚಂಪಾರಣ ಜಿಲ್ಲೆಯಿಂದ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಫುಲವಾರಿ ಶರೀಫ ಪ್ರಕರಣದಲ್ಲಿ ‘ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’ ದ (ಪಿ.ಎಫ್.ಐ.ನ) 2 ಜಿಹಾದಿ ಕಾರ್ಯಕರ್ತರನ್ನು ಬಂಧಿಸಿದೆ. ಹತ್ಯೆಯ ಗುರಿಯನ್ನು ಸಾಧಿಸಲು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೂರೈಸಿರುವ ಆರೋಪ ಇವರಿಬ್ಬರ ಮೇಲಿದೆ. ಮಹಮ್ಮದ ಅಬಿದ ಮತ್ತು ತನ್ವೀರ ರಝಾ ಹೆಸರಿನ ಇಬ್ಬರು ಜಿಹಾದಿಗಳ ಹೆಸರಾಗಿದೆ. ಕಳೆದ ವರ್ಷ ಅಂದರೆ ಜುಲೈ 2022 ರಲ್ಲಿ ಫುಲವಾರಿ ಶರೀಫ ಪ್ರದೇಶದ ಪೊಲೀಸರು ದೇಶವಿರೋಧಿ ಕೃತ್ಯ ನಡೆಸಿರುವ ಪ್ರಕರಣದಲ್ಲಿ ಅಲ್ಲಿಯ ಪಿ.ಎಫ್.ಐ.ನ 5 ಕಾರ್ಯಕರ್ತರನ್ನು ಬಂಧಿಸಿತ್ತು. ಈ ಘಟನೆಯ ಬಳಿಕ ರಾಷ್ಟ್ರೀಯ ತನಿಖಾ ದಳವು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿರುವ ಪಿ.ಎಫ್.ಐ.ನ ನೆಲೆಗಳ ಮೇಲೆಯೂ ದಾಳಿ ನಡೆಸಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಬಿಹಾರದಲ್ಲಿಯೂ ದಾಳಿಗಳು ಮುಂದುವರಿದಿವೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಿಹಾರದಲ್ಲಿ ನಾಲಂದಾ, ಕಟಿಹಾರ, ಆರಿಯಾ, ಮಧುಬನಿ, ಪಾಟಣಾ, ವೈಶಾಲಿ, ದರಬಂಗಾ, ಮುಝಫ್ಫರಪೂರ ಮತ್ತು ಸಾರಣ ಈ 9 ಜಿಲ್ಲೆಗಳಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿತು. ಪಿ.ಎಫ್.ಐ. ಮೇಲೆ ನಿಷೇಧಿಸಲಾಗಿದೆ.