ಚೀನಾದ ನೌಕೆಗಳಿಂದ ಜಗತ್ತಿನ 80 ದೇಶಗಳ ಸಮುದ್ರ ದಡದಲ್ಲಿ ಅನಧಿಕೃತವಾಗಿ ಮೀನುಗಾರಿಕೆ !

ಬೇಹುಗಾರಿಕೆ ನಡೆಸುತ್ತಿದೆಯೆಂದು ಭಾರತೀಯ ಅಧಿಕಾರಿಗಳಿಗೆ ಸಂದೇಹ !

ನವದೆಹಲಿ – ಹಿಂದ ಮಹಾಸಾಗರದ ಉತ್ತರ ಕ್ಷೇತ್ರದಲ್ಲಿ ಚೀನಾದ ನೌಕೆಗಳು ಅನಧಿಕೃತವಾಗಿ ಮೀನುಗಾರಿಕೆ ನಡೆಸುತ್ತಿರುವ ಅನೇಕ ಘಟನೆಗಳು ಬಹಿರಂಗವಾಗಿದೆ. ಈ ಮಾಧ್ಯಮದಿಂದ ಚೀನಾ ಬೇಹುಗಾರಿಕೆ ನಡೆಸಲು ಪ್ರಯತ್ನಿಸುತ್ತಿದ್ದು, ಅದು ಈ ಹಿಂದೆಯೂ ಹೀಗೆ ಮಾಡಿದೆಯೆಂದು ಭಾರತೀಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೇ ಅಲ್ಲದೇ, ‘ಡಿಸ್ಟಂಟ ವಾಟರ ಫಿಶಿಂಗ’ (ದೂರದ ಅಂತರದವರೆಗೆ ಹೋಗಿ ಮೀನುಗಾರಿಕೆ) ನಡೆಸುವ ಈ ಚೀನಾದ ನೌಕೆ ಜಗತ್ತಿನ ಒಟ್ಟು 80 ದೇಶಗಳ ಸಮುದ್ರ ದಡದಲ್ಲಿ ಈ ರೀತಿ ಮೀನುಗಾರಿಕೆ ನಡೆಸುತ್ತಿದೆಯೆನ್ನುವ ಆಘಾತಕಾರಿ ಮಾಹಿತಿಯು ‘ಪಾಲಿಸಿ ರಿಸರ್ಚ ಗ್ರೂಪ್’ ಹೆಸರಿನ ಒಂದು ಸಂಸ್ಥೆಯ ವರದಿಯಿಂದ ಇತ್ತೀಚೆಗಷ್ಟೇ ಬಹಿರಂಗವಾಗಿದೆ.

೧. ಈ ಸಂಸ್ಥೆಯ ವರದಿಯನುಸಾರ ಸಾಧಾರಣವಾಗಿ 18 ಸಾವಿರ ಚೀನಿ ನೌಕೆಗಳು ಜಗತ್ತಿನಾದ್ಯಂತ ಸಮುದ್ರ ಮತ್ತು ಮಹಾಸಾಗರದಲ್ಲಿ ಅನಧಿಕೃತವಾಗಿ ಕಾರ್ಯನಿರತವಾಗಿವೆ. ಸಮುದ್ರ ಆಹಾರ(‘ಸೀ ಫುಡ್’) ತಯಾರಿಸುವಲ್ಲಿ ಚೀನಾ ಜಗತ್ತಿನಲ್ಲೇ ಮಂಚೂಣಿಯಲ್ಲಿದೆ ಎನ್ನುವ ವಿಷಯ ಗಮನಾರ್ಹವಾಗಿದೆ.

೨. ಚೀನಾ ಪ್ರತಿವರ್ಷ 12 ಲಕ್ಷ ಟನ್ ಗಳಷ್ಟು ಸಮುದ್ರ ಆಹಾರವನ್ನು ಉತ್ಪಾದಿಸುತ್ತದೆ. ಈ ಪ್ರಮಾಣ ಈಗ ಜಗತ್ತಿನ ಎರಡನೇ ಕ್ರಮಾಂಕದಲ್ಲಿರುವ ಇಂಡೋನೇಶಿಯಾದ ತುಲನೆಯಲ್ಲಿ ದುಪ್ಪಟ್ಟಾಗಿದೆ. ಇದರಿಂದ ಪರಿಸರದ ಮೇಲೆ ಅನಾನುಕೂಲ ಪರಿಣಾಮವಾಗುತ್ತಿದೆಯೆಂದು ‘ಪಾಲಿಸಿ ರಿಸರ್ಚ ಗ್ರೂಪ್’ ಆರೋಪ ಮಾಡಿದೆ. ಇದರಿಂದ ಸ್ಥಳೀಯ ಅರ್ಥವ್ಯವಸ್ಥೆಯ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ.

೩. ಅನೇಕ ಚೀನಾದ ನೌಕೆಗಳು ಭಾರತ, ಶ್ರೀಲಂಕಾ, ಪಾಕಿಸ್ತಾನ, ಇರಾನ ಮತ್ತು ಓಮನ್ ದೇಶಗಳ ಗಡಿಯಲ್ಲಿನ ಸಮುದ್ರ ದಡದಲ್ಲಿ ಕಾರ್ಯನಿರತವಾಗಿವೆ. 2021 ರಲ್ಲಿ ಹಿಂದೂ ಮಹಾಸಾಗರದಲ್ಲಿ ಸಾಧಾರಣವಾಗಿ 392 ನೊಂದಣಿಯಿಲ್ಲದ ಚೀನಾದ ನೌಕೆಗಳು ಕಂಡು ಬಂದಿದ್ದವು. 2020 ರಲ್ಲಿ ಈ ಸಂಖ್ಯೆ 379 ಇತ್ತು.

೪. ಕೇವಲ ಇರಾನ ಸಮುದ್ರ ದಡದ ವಿಚಾರ ಮಾಡಿದರೆ ಚೀನಾ ಅಲ್ಲಿಯ ಹಿಂದ ಮಹಾಸಾಗರದಿಂದ 46 ಸಾವಿರ ಟನ್ ಮೀನನ್ನು ಅಪಹರಿಸಿಕೊಂಡು ಹೋಗಿದೆ.

೫. ಕಳೆದ ವರ್ಷ ಚೀನಾದ ಬೇಹುಗಾರಿಕೆಯ ಹಡಗು ಶ್ರೀಲಂಕಾದ ಕ್ಷೇತ್ರದಲ್ಲಿ ಬಂದಿತ್ತು. ಆಗ ಭಾರತ ಜಾಗರೂಕವಾಗಿತ್ತು.

ಸಂಪಾದಕೀಯ ನಿಲುವು

ಚೀನಾದ ಈ ಅನಧಿಕೃತ ಕೃತ್ಯ ಬಹಿರಂಗಪಡಿಸಲು ಈಗ ಭಾರತ ವಿಶ್ವ ಮಟ್ಟದಲ್ಲಿ ಮುಂದಾಳತ್ವ ವಹಿಸುವ ಆವಶ್ಯಕತೆಯಿದೆ !

 

ಈ ರೀತಿ ದೇಶಗಳನ್ನು ಮೋಸಗೊಳಿಸುತ್ತಿರುವ ಧೂರ್ತ ಚೀನಾ

  • ಕಪಟಿ ಚೀನಾ ತನ್ನ ನೌಕೆಗಳನ್ನು ಸ್ವಂತ ಸಮುದ್ರ ದಡದಲ್ಲಿ ಮೀನುಗಾರಿಕೆ ನಡೆಸುವುದನ್ನು ನಿರ್ಬಂಧಿಸುತ್ತದೆ. ಆದರೆ ಆಫ್ರಿಕಾ ಖಂಡ, ರಷ್ಯಾ, ಹಿಂದ ಮಹಾಸಾಗರ ಈ ಕ್ಷೇತ್ರಗಳ ಇತರೆ ದೇಶಗಳ ‘ಎಕ್ಸಕ್ಲೂಸಿವ ಎಕಾನಾಮಿಕ್ ಝೋನ್ಸ’ ನಲ್ಲಿ ಮೀನುಗಾರಿಕೆ ನಡೆಸಲು ಅನಧಿಕೃತವಾಗಿ ಅನುಮತಿ ನೀಡುತ್ತದೆ. (‘ಎಕ್ಸಕ್ಲೂಸಿವ್ ಎಕಾನಾಮಿಕ ಝೋನ’ ಎಂದರೆ ಸಾಗರದ ಆ ಪ್ರದೇಶದಲ್ಲಿ ಯಾವುದೇ ಕಾರ್ಯ ಮಾಡುವ ಅಧಿಕಾರ ಕೇವಲ ಆ ಕ್ಷೇತ್ರದಲ್ಲಿರುವ ರಾಷ್ಟ್ರಕ್ಕೆ ಮಾತ್ರ ಇರುತ್ತದೆ.)
  • ಚೀನಾದ ನೌಕೆಗಳು ಆ ದೇಶಗಳ ಈ ಕ್ಷೇತ್ರಗಳಲ್ಲಿ ಹೋದಾಗ ಅಲ್ಲಿನ ಅಧಿಕಾರಿಗಳಿಗೆ ಅವರ ಮೇಲೆ ಸಂದೇಹ ಮೂಡಿದಾಗ ನೌಕೆಯವರು ಕಪಟತನದಿಂದ ಅವರನ್ನು ಮೋಸಗೊಳಿಸಿ ಅಲ್ಲಿಂದ ಓಡಿ ಹೋಗುತ್ತಾರೆ. ಯಾವಾಗ ನೌಕೆಗಳು ಸಂದೇಹದ ಸುಳಿಯಲ್ಲಿ ಸಿಲುಕತ್ತವೆಯೋ, ಆಗ ಅವರು ತಮ್ಮ ವಿದ್ಯುನ್ಮಾನ ಯಂತ್ರಗಳನ್ನು ಸ್ಥಗಿತಗೊಳಿಸುತ್ತಾರೆ. ಇದರಿಂದ ಸಂಬಂಧಿಸಿದ ದೇಶಗಳ ಅಧಿಕಾರಿಗಳಿಗೆ ನೌಕೆಗಳ ಸುಳಿವು ಸಿಗುವುದೇ ಇಲ್ಲ.