ಭೂಕಂಪದ ನಂತರ ತಕ್ಷಣದ ನೆರವು ಕಳುಹಿಸಿದ್ದಕ್ಕಾಗಿ ಟರ್ಕಿ ಭಾರತಕ್ಕೆ ಧನ್ಯವಾದ ಹೇಳಿದೆ !
ನವದೆಹಲಿ – ‘ಟರ್ಕಿ ಮತ್ತು ಹಿಂದಿ’ ಎರಡು ಭಾಷೆಗಳಲ್ಲಿ ‘ದೋಸ್ತ್’ ಈ ಶಬ್ದದ ಅರ್ಥ ಒಂದೇ ಆಗಿದೆ. ನಮ್ಮ ಟರ್ಕಿಯಲ್ಲಿ ಒಂದು ಗಾದೆ ಇದೆ, ‘ದೋಸ್ತ ಕಾರಾ ಗುಂಡೆ ಬೆಲ್ಲಿ ಆಲೂರ’ (ಅವಶ್ಯಕತೆ ಇರುವಾಗ ಸಹಾಯ ಮಾಡುವವನೇ ನಿಜವಾದ ಸ್ನೇಹಿತ) ತುಂಬಾ ತುಂಬಾ ಧನ್ಯವಾದ, ಭಾರತ’, ಎಂದು ಟ್ವೀಟ್ ಮಾಡುತ್ತಾ ಭಾರತದಲ್ಲಿನ ಟರ್ಕಿ ರಾಯಭಾರಿ ಫಿರಾತ ಸುನೇಲ ಇವರು ಭಾರತಕ್ಕೆ ಟರ್ಕಿಗೆ ಮಾಡಿರುವ ಸಹಾಯಕ್ಕಾಗಿ ಧನ್ಯವಾದ ನೀಡಿದ್ದಾರೆ. ಟರ್ಕಿಯಲ್ಲಿ ಸಂಭವಿಸಿದ ಆಘಾತಕಾರಿ ಭೂಕಂಪದ ಸಮಯದಲ್ಲಿ ಮಾಡಿದ ಸಹಾಯಕ್ಕಾಗಿ ಭಾರತ ಕೂಡಲೇ ತಂಡ ಕಳುಹಿಸಿದೆ.
ಸಂಪಾದಕೀಯ ನಿಲುವುಟರ್ಕಿಯು ಕಾಶ್ಮೀರ ಸಮಸ್ಯೆಯ ಬಗ್ಗೆ ನಿರಂತರವಾಗಿ ಪಾಕಿಸ್ತಾನವನ್ನು ಬೆಂಬಲಿಸಿದೆ. ಭಾರತದಲ್ಲಿ ಮುಸಲ್ಮಾನರ ಮೇಲೆ ಆಗದೇ ಇರುವ ಅನ್ಯಾಯ ಆಗಿದೆ ಎಂದು ಭಾರತವನ್ನು ದೂರಿದೆ, ಆದರೂ ಕೂಡ ಭಾರತ ಟರ್ಕಿಗೆ ಸಹಾಯ ಮಾಡಿದೆ. ಇದರಿಂದ ‘ಭಾರತದ ಮನಸ್ಸು ವಿಶಾಲವಾಗಿರುವುದು’, ಇದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು ! |