ಭಾಜಪದ ಮಹಿಳಾ ನಾಯಕಿಯಾಗಿರುವ ನ್ಯಾಯವಾದಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಇವರು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕ

ನೇಮಕದ ವಿರುದ್ಧ ದಾಖಲಿಸಿದ ಅರ್ಜಿ ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕೃತ !

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ನ್ಯಾಯವಾದಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಇವರನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕಗೊಂಡಿರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ‘ಗೌರಿಯು ಭಾಜಪ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದಾರೆ. ಅವರನ್ನು ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕಗೊಳಿಸಿದರೆ ನ್ಯಾಯಾಂಗದ ಸ್ವಾತಂತ್ರ್ಯ ಧಕ್ಕೆ ತರುವುದು. ಅವರು ಇಸ್ಲಾಂನ ಉಲ್ಲೇಖ ‘ಹಸಿರು ಭಯೋತ್ಪಾದನೆ’ ಮತ್ತು ಕ್ರೈಸ್ತ ಸಮುದಾಯದ ಉಲ್ಲೇಖ ‘ಶ್ವೇತ ಭಯೋತ್ಪಾದನೆ’ ಎಂದು ಮಾಡಿದ್ದರು. ಈ ಹೇಳಿಕೆಗೆ ನಮ್ಮ ಆಕ್ಷೇಪವಿದೆ’, ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ೨೨ ನ್ಯಾಯವಾದಿಗಳ ಒಂದು ಗುಂಪು ದಾವೆ ಮಾಡಿತ್ತು. ಈ ಹಿಂದೆ ಕೂಡ ರಾಜಕೀಯ ಹಿನ್ನೆಲೆ ಇರುವ ವ್ಯಕ್ತಿಗಳು ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕಗೊಂಡಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯದಿಂದ ಸ್ಪಷ್ಟಪಡಿಸಿದೆ.

ಕೇವಲ ೨೨ ನಿಮಿಷ ನಡೆದಿರುವ ವಿಚಾರಣೆಯ ನಂತರ ನ್ಯಾಯಾಲಯ ಈ ಅರ್ಜಿ ತಿರಸ್ಕರಿಸಿತು. ವಿಶೇಷವೆಂದರೆ ವಿಚಾರಣೆ ನಡೆಯುತ್ತಿರುವಾಗ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಇವರ ಶಪಥ ಗ್ರಹಣ ನಡೆಯಿತು. ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಇವರು, ನ್ಯಾಯಮೂರ್ತಿ ಆಗುವ ಮೊದಲು ನಾನು ಕೂಡ ರಾಜಕೀಯ ಹಿನ್ನೆಲೆಯಿಂದ ಬಂದವನು. ನಾನು ೨೦ ವರ್ಷಗಳಿಂದ ನ್ಯಾಯಾಧೀಶನಾಗಿದ್ದೇನೆ. ಆದರೆ ನಾನು ಎಂದು ನನ್ನ ರಾಜಕೀಯ ಹಿನ್ನೆಲೆ ನನ್ನ ಕರ್ತವ್ಯಕ್ಕೆ ಅಡ್ಡಿಯಾಗಲು ಬಿಟ್ಟಿಲ್ಲ ಎಂದು ಹೇಳಿದರು.