ಯೋಗಿ ಆದಿತ್ಯನಾಥ ಧರ್ಮ ಗುರು ಅಲ್ಲ, ಒಬ್ಬ ಮೋಸಗಾರ ! (ಅಂತೆ) – ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ

ನಾಲಿಗೆ ಹರಿ ಬಿಟ್ಟ ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ !

ನವ ದೆಹಲಿ – ಉತ್ತರ ಪ್ರದೇಶದಲ್ಲಿ ಯಾರು ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವುದಿಲ್ಲ; ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಅವರ ಭಾಷೆಯಲ್ಲಿ ಧರ್ಮಗುರು ಎನ್ನಲಾಗದು. ಕೇವಲ ಕಾವಿ ತೊಟ್ಟರೆ ಯಾರು ಧರ್ಮಗುರು ಆಗುವುದಿಲ್ಲ. ಕ್ಷಮಿಸಿರಿ ಆದರೆ ಯೋಗಿ ಆದಿತ್ಯನಾಥ ಯಾವುದೇ ಧಾರ್ಮಿಕ ನಾಯಕ ಅಂದರೆ ಧರ್ಮ ಗುರು ಅಲ್ಲ. ಅವರೊಬ್ಬ ಸಾಮಾನ್ಯ ಮೋಸಗಾರರಾಗಿದ್ದಾರೆ. ಭಾಜಪ ಉತ್ತರ ಪ್ರದೇಶದಲ್ಲಿ ಆಧರ್ಮದ ಪ್ರಚಾರ ಪ್ರಸಾರ ಮಾಡುತ್ತಿದೆ, ಎಂದು ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರು ಯೋಗಿ ಆದಿತ್ಯನಾಥ ಇವರ ಬಗ್ಗೆ ವಿಷಕಾರಿದರು. ಇಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ನಡೆದ ಸಾಮಾಜಿಕ ಸಂಘಟನೆಯ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದರು. ಈ ಸಭೆಯಲ್ಲಿ ‘ಸ್ವರಾಜ ಇಂಡಿಯಾ’ದ ಮುಖ್ಯಸ್ಥ ಯೋಗೇಂದ್ರ ಯಾದವ ಇವರು ಕೂಡ ಉಪಸ್ಥಿತರಿದ್ದರು. ಕೆಲವು ದಿನಗಳ ಹಿಂದೆ ಯೋಗಿ ಆದಿತ್ಯನಾಥ ಇವರು ನೀಡಿರುವ ಸಂದರ್ಶನದಲ್ಲಿ ‘ವಿರೋಧಿ ಪಕ್ಷದ ರಾಹುಲ ಗಾಂಧಿ ಇವರಂತಹ ನಾಯಕರು ಭಾಜಪದ ಕೆಲಸ ಸುಲಭಗೊಳಿಸುತ್ತಾರೆ. ಅವರು ನಿಜವಾಗಿಯೂ ಭಾಜಪಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್ ೧೯೪೭ ರಿಂದ ದೇಶದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬಿರುಕು ಮೂಡಿಸುತ್ತಿದೆ’, ಎಂದು ಅವರು ಹೇಳಿದ್ದರು. ಇದರ ಬಗ್ಗೆ ರಾಹುಲ ಗಾಂಧಿಯವರು ಮೇಲಿನ ಟೀಕೆ ಮಾಡಿದರು.

(ಸೌಜನ್ಯ : Navbharat Times)

ರಾಹುಲ ಗಾಂಧಿ ಮಾತು ಮುಂದುವರೆಸುತ್ತಾ, ಉತ್ತರ ಪ್ರದೇಶದಲ್ಲಿ ಧರ್ಮದ ಬಿರುಗಾಳಿ ಇಲ್ಲ, ನಾನು ಇಸ್ಲಾಂ ಓದಿದ್ದೇನೆ. ಕ್ರೈಸ್ತ ಧರ್ಮ ಕೂಡ ಓದಿದ್ದೇನೆ. ಬೌದ್ಧ ಧರ್ಮದ ಅಭ್ಯಾಸ ಕೂಡ ಮಾಡಿದ್ದೇನೆ. ಹಿಂದೂ ಧರ್ಮ ಕೂಡ ನಾನು ಹತ್ತಿರದಿಂದ ತಿಳಿದಿದ್ದೇನೆ. ಯಾವುದೇ ಧರ್ಮ ಹಿಂಸಾಚಾರದ ಉಪದೇಶ ಮಾಡುವುದಿಲ್ಲ. ಯಾರದಾದಾರು ತಪಸ್ಸು ಭಂಗ ಮಾಡಿದರೆ ಅವರು ಗೊಂಧಲದ ಸ್ಥಿತಿಗೆ ತಲುಪಿರುತ್ತಾರೆ. ಕಾಂಗ್ರೆಸ್ ತಪಸ್ವಿ ಪಕ್ಷವಾಗಿದೆ, ಭಾಜಪ ಮತ್ತು ಸಂಘ ತದವಿರುದ್ಧವಾಗಿದೆ.

ರಾಹುಲ್ ಗಾಂಧಿ ಮಂದಬುದ್ಧಿಯವ ! – ಮಹಂತ ರಾಜು ದಾಸ

ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ರಾಜು ದಾಸ ಅವರು ರಾಹುಲ ಗಾಂಧಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ಯಾವ ಪೀಠದಿಂದ (ಗೋರಕನಾಥ ಪೀಠ) ದೇಶಕ್ಕೆ ೩ ಸಲ ಶಾಸಕನನ್ನು ನೀಡಿದೆ, ಆ ಪೀಠದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮುಖ್ಯಸ್ಥರಾಗಿದ್ದಾರೆ. ಅವರನ್ನು ಮೋಸಗಾರ ಎನ್ನುವ ರಾಹುಲ ಗಾಂಧಿ ಇವರಿಗಿಂತ ಮಂದ ಬುದ್ಧಿಯವರು ಯಾರು ಇರಲು ಸಾಧ್ಯವಿಲ್ಲ, ಎಂದು ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮಲಲ್ಲಾನ ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ ಇವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಯೋಗಿ ಮತ್ತು ಸಾಧಕರಾಗಿದ್ದಾರೆ. ಅವರು ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ಜನರು ಅವರಿಗೆ ಎರಡನೆಯ ಬಾರಿ ಮುಖ್ಯಮಂತ್ರಿ ಎಂದು ಆರಿಸಿ ಕಳಿಸಿದ್ದಾರೆ. ಅವರ ಬಗ್ಗೆ ಆರೋಪ ಮಾಡುವುದು ಅಯೋಗ್ಯವಾಗಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಾಂಗ್ರೆಸ್ ಅದರ ಅಧಿಕಾರದ ಸಮಯದಲ್ಲಿ ದೇಶದ ಜನರಿಗೆ ಎಷ್ಟು ಮೋಸ ಮಾಡಿದ್ದಾರೆ, ಇದರ ಬಗ್ಗೆ ರಾಹುಲ ಗಾಂಧಿ ಏಕೆ ಮಾತನಾಡುವುದಿಲ್ಲ ? 
  • ರಾಹುಲ ಗಾಂಧಿ ಇವರಿಗೆ ಧರ್ಮಗುರು ಎಂದರೆ ಏನು, ಎಂಬುದು ತಿಳಿದಿದೆಯೇ ? ಪಾದ್ರಿ ಮತ್ತು ಮೌಲ್ವಿ ಇವರ ಬಗ್ಗೆ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಎಂದಾದರು ರಾಹುಲ ಗಾಂಧಿ ಮಾಡುವರೆ ?