ತಾಲೀಬಾನಿಗಳಿಂದ ಪಾಕಿಸ್ತಾನದ ಕ್ವೆಟ್ಟಾದ ಸ್ಟೇಡಿಯಮ್ ಹೊರಗೆ ಬಾಂಬ್ ಸ್ಪೋಟ !

ಕ್ವೆಟ್ಟಾ (ಪಾಕಿಸ್ತಾನ)- ಇಲ್ಲಿನ ಸ್ಟೇಡಿಯಮ್ನ ಸಮೀಪದ ಮುಸಾ ವರ್ತುಲದಲ್ಲಿ ಬಸ್ನಲ್ಲಿ ಬಾಂಬ್ಸ್ಫೋಟಗೊಂಡಿದೆ. ಈ ಸ್ಫೋಟದಲ್ಲಿ ೫ ಜನರು ಗಾಯಗೊಂಡಿದ್ದಾರೆ. ‘ತೆಹರಿಕ್-ಎ-ತಾಲೀಬಾನ್ ಪಾಕಿಸ್ತಾನ’ (‘ಟಿಟಿಪಿ’) ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಸ್ಫೋಟದ ನಂತರ ಸ್ಟೇಡಿಯಮ್ನ ಹೊರಗಿನ ವೀಕ್ಷಕರು ಮೈದಾನದೊಳಗೆ ಕಲ್ಲುತೂರಾಟ ಆರಂಭಿಸಿದರು. ಆದ್ದರಿಂದ ಕ್ರಿಕೆಟ್ ಪಂದ್ಯ ಸ್ವಲ್ಪ ಸಮಯ ಸ್ಥಗಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನದ ಅನೇಕ ಕ್ರಿಕೆಟ್ ಆಟಗಾರರು ಭಾಗವಹಿಸಿದ್ದರು. ಅವರಿಗೆ ಸುರಕ್ಷೆಯನ್ನು ಒದಗಿಸಿ ಕೋಣೆಗೆ ಕರೆದೊಯ್ಯಲಾಯಿತು.