ಮಥುರಾದ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಅಕ್ರಮ ವಿದ್ಯುತ್ ಸಂಪರ್ಕ ಕಡಿತ !

ದೂರುಗಳ ನಂತರ ಕ್ರಮ !

ಮಥುರಾ (ಉತ್ತರಪ್ರದೇಶ) – ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ವಿದ್ಯುತ್ ಸಂಪರ್ಕವನ್ನು ಮಥುರಾ ಆಡಳಿತವು ಕಡಿತಗೊಳಿಸಿದೆ. ಮಸೀದಿ ಆಡಳಿತದ ವಿರುದ್ಧವೂ ಪ್ರಕರಣ ದಾಖಲಾಗಿದೆ. ಶಾಹಿ ಈದ್ಗಾ ಮಸೀದಿ ಸಮಿತಿ ಕಾರ್ಯದರ್ಶಿ ತನ್ಸೀರ್ ಅಹ್ಮದ್ ಅವರಿಗೆ 3 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಮಸೀದಿಯಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಅಕ್ರಮ ವಿದ್ಯುತ್ ಸಂಪರ್ಕದ ವಿರುದ್ಧ ನಡೆಯುತ್ತಿರುವ ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ತಿಳಿಸಿದೆ.

ಸಂಪಾದಕೀಯ ನಿಲುವು

ಮೂಲಭೂತವಾಗಿ, ದೂರು ನೀಡುವ ಅಗತ್ಯವೇನು ? ಇದು ಆಡಳಿತಕ್ಕೆ ಕಾಣಿಸುತ್ತಿರಲಿಲ್ಲವೇ ?