ನೇಪಾಳದಲ್ಲಿ ಮಿತ್ರ ಪಕ್ಷದಿಂದ ಬೆಂಬಲ ಹಿಂಪಡೆದಿದ್ದರಿಂದ ಸರಕಾರ ಸಂಕಷ್ಟದಲ್ಲಿ !

ಕಾಟ್ಮಾಂಡು – ನೇಪಾಳದಲ್ಲಿ ಸರಿಸುಮಾರು ತಿಂಗಳ ಹಿಂದೆ ಅನೇಕ ಪಕ್ಷಗಳನ್ನು ಒಗ್ಗೂಡಿಸಿ ಪ್ರಧಾನ ಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ಸಮ್ಮಿಶ್ರ ಸರಕಾರ ಸ್ಥಾಪನೆ ಮಾಡಿದ್ದರು; ಆದರೆ ಅಧಿಕಾರದಲ್ಲಿ ಸಹಭಾಗಿಯಾಗಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷದಿಂದ (ಆರ್.ಎಸ್.ಪಿ.) ಬೆಂಬಲ ಹಿಂಪಡೆದಿದ್ದರಿಂದ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.

ಆರ್.ಎಸ್.ಪಿ. ಈ ಪಕ್ಷ ನೇಪಾಳದಲ್ಲಿ ಎಲ್ಲಕ್ಕಿಂತ ದೊಡ್ಡ ಪಕ್ಷವಾಗಿದ್ದು ಸಂಸತ್ತಿನಲ್ಲಿ ಅವರ ೨೦ ಸಂಸದರು ಇದ್ದಾರೆ. ಪಕ್ಷದ ಸಭೆಯಲ್ಲಿ ಪಕ್ಷದ ಪ್ರಮುಖ ರವಿ ಲಮಿಛಾನೇ ಇವರು ಸರಕಾರದ ಬೆಂಬಲ ಹಿಂಪಡೆದಿರುವುದು ಘೋಷಿಸಿದ್ದಾರೆ. ಉಭಯ ನಾಗರಿಕತ್ವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಲಮಿಛಾನೇ ಇವರನ್ನು ಸಂಸತ್ತಿಗಾಗಿ ಅಯೋಗ್ಯ ಎಂದು ಹೇಳಿತ್ತು. ಆದರೆ ಅವರು ಮತ್ತೆ ನಾಗರಿಕತ್ವ ಪಡೆದಿದ್ದರು. ಲಮಿಛಾನೇ ಇವರಿಗೆ ಗೃಹ ಸಚಿವ ಸ್ಥಾನ ಬೇಕಿತ್ತು. ಆದರೆ ಪ್ರಚಂಡ ಇವರು ಅದನ್ನು ನೀಡದೇ ಇದ್ದರಿಂದ ಆರ್.ಎಸ್.ಪಿ. ಬೆಂಬಲ ಹಿಂಪಡೆದಿರುವುದು ಹೇಳುತ್ತಿದ್ದಾರೆ.