‘ಮುಶರ್ರಫ ಶಾಂತಿಯ ನೈಜ ಶಕ್ತಿಯಾಗಿದ್ದರು !’ (ಅಂತೆ) – ಕಾಂಗ್ರೆಸ್ ಸಂಸದ ಶಶಿ ಥರೂರರ

ಕಾಂಗ್ರೆಸ್ ಸಂಸದ ಶಶಿ ಥರೂರರ ವೈಚಾರಿಕ ದಿವಾಳಿತನ

ನವದೆಹಲಿ – ಒಂದು ಕಾಲದಲ್ಲಿ ಭಾರತದ ವಿರೋಧಿಯಾಗಿದ್ದ ಪರ್ವೇಜ ಮುಶರ್ರಫರನ್ನು ೨೦೦೨ ರಿಂದ ೨೦೦೭ ರ ವರೆಗೂ ಶಾಂತಿಯ ನೈಜ ಶಕ್ತಿಯಾಗಿದ್ದರು ಎಂದು ಕಾಂಗ್ರೆಸ್ಸಿನ ಶಶಿ ಥರೂರ್ ಟ್ವೀಟ್ ಮಾಡಿದ್ದಾರೆ. (ಮುಸಲ್ಮಾನರನ್ನು ಓಲೈಸಲು ಭಾರತ ದ್ವೇಷವನ್ನು ಉದಾತ್ತೀಕರಣಗೊಳಿಸುವ ಕಾಂಗ್ರೆಸ್ ನವರ ರಾಜಕೀಯ ಅಸ್ತಿತ್ವವನ್ನು ರಾಷ್ಟ್ರ ಪ್ರೇಮಿಯರು ನಷ್ಟಗೊಳಿಸುವರು. ಇದು ಖಂಡಿತ ! -ಸಂಪಾದಕರು) ‘ನಾನು ವಿಶ್ವ ಸಂಸ್ಥೆಯಲ್ಲಿ ಅವರನ್ನು ಯಾವಾಗಲೂ ಭೇಟಿಯಾಗುತ್ತಿದ್ದೆನು. ಅವರು ಚಾಣಾಕ್ಷ ಮತ್ತು ಮುತ್ಸದ್ದಿಯಾಗಿದ್ದು, ಅವರಲ್ಲಿ ವೈಚಾರಿಕ ಸ್ಪಷ್ಟತೆ ಇತ್ತು ಎನ್ನುವುದು ನನ್ನ ಗಮನಕ್ಕೆ ಬಂದಿತ್ತು.’ ಎಂದೂ ಶಶಿ ಥರೂರ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.